ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಮೆರವಣಿಗೆ
ಬಳ್ಳಾರಿ:ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬೆಂಗಳೂರು, ಕೊರಚ ಕೊರಮ ಕೊರವ ಸಮುದಾಯಗಳ ಒಕ್ಕೂಟದಿಂದ ಜಿಲ್ಲಾ ಮತ್ತು ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ನುಲಿಯ ಚಂದಯ್ಯ 916ನೇ ಜಯಂತಿ ಕಾರ್ಯಕ್ರಮ ಪ್ರಯುಕ್ತ ಬೃಹತ್ ಮೆರವಣಿ ನಡೆಯಿತು.
ಮೆರವಣಿಗೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶಂಕರ್ ಬಂಡೆ ವೆಂಕಟೇಶ್ ಮತ್ತು ನಗರ ಅಧ್ಯಕ್ಷ ಎಚ್.ಕೆ.ಎಚ್ ಹನುಮಂತಪ್ಪ, ಈಗಿನ ಕಾಲದಲ್ಲಿ ಎಷ್ಟು ಸಾಧನೆ ಮಾಡಿದರು ಸ್ಮರಣೆ ಮಾಡಿಕೊಳ್ಳುವುದು ಅಪರೂಪ ಬಸವಣ್ಣ ಕಾಲದಲ್ಲಿ ನಿಷ್ಟೆಯಿಂದ ಕಾಯಕವನ್ನು ಮಾಡಿದ ಕುಳುವ ನುಲಿಯ ಚಂದಯ್ಯ ನವರ 916ನೇಜಯಂತಿ ಕಾರ್ಯಕ್ರಮ ಮಾಡುತ್ತಿರುವುದು ಹಬ್ಬ, ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಬಹಳ ಸಂತಸ ವಿಷಯ ಹಾಗೂ ಅವರ ಕಾಯಕ ನಿಷ್ಟೆಯನ್ನು ನಾವು ನೀವು ಸೇರಿ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡೋಣ ಮುಂದಿನ ಪೀಳಿಗೆಯಲ್ಲಿ ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಸಿದಗ ಮಾತ್ರ ಇಂತಹ ಶರಣರ ಜಯಂತಿ ಕಾರ್ಯಕ್ರಮ ಎಲ್ಲರೂ ಸೇರಿ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನುಡಿದರು.
ನಂತರ ರಾಜ್ಯ ಖಜಾಂಚಿ ರಮಣಪ್ಪ ಭಜಂತ್ರಿ ಮಾತನಾಡಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಅಸ್ತಿತ್ವಕ್ಕೆ ಬಂದ ನಂತರ ಸುಮಾರು ವರ್ಷಗಳ ರಾಜ್ಯ ಸಂಘವು ಹೋರಾಟ ಮಾಡಿ ಸರ್ಕಾರ ಗಮನ ಸೆಳೆದು ಶಿವಶರಣೆ ನುಲಿಯ ಚಂದಯ್ಯ ಜಯಂತಿ ಆಚರಣೆ ಸರ್ಕಾರಿ ವತಿಯಿಂದ ಆಚರಿಸಲು ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ.ಈ ಸಾಧನೆ ಕರ್ನಾಟಕದಲ್ಲಿ ನಮ್ಮ ಜನಾಂಗದ ಹೆಮ್ಮೆಯ ವಿಷಯ ವಾಗಿದೆ. ಈ ಸಂಘವು ಎಲ್ಲರೂ ಸೇರಿಸಿಕೊಂಡು ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ ಎಂದು ವ್ಯಕ್ತಪಡಿಸಿದರು. ಕೊಲ್ಲಾಪುರ ದೇವಸ್ಥಾನದಿಂದ ರಾಘವ ಕಲಾ ಮಂದಿರ ವರೆಗೆ ಮೆರವಣಿಗೆಯಲ್ಲಿ ಕಲಾ ಮೇಳ ತಂಡದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದವರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಕೆ ಶ್ರೀನಿವಾಸ, ಜಿಲ್ಲಾ ಖಜಾಂಚಿ ಶ್ರೀ ಕೆ ರಂಗಸ್ವಾಮಿ,ನಗರ ಕಾರ್ಯದರ್ಶಿ ಶ್ರೀ ವೆಂಕಟೇಶ ಬಾಬು ಮತ್ತು ನಿಕಟ ಪೂರ್ವ ಅಧ್ಯಕ್ಷ ಶ್ರೀ ಕೆ ಸಂತೋಷ, ಜಿಲ್ಲಾ ಉಪಾಧ್ಯಕ್ಷ ಶ್ರೀ ಕೆ ನಾಗರಾಜ್, ತಿಪ್ಪಣ್ಣ ಭಜಂತ್ರಿ, ಕೆ ನಾಗರಾಜ್ ಮೀನಪ್ಪ, ಪೋಲಿಸ್ ದೇವಣ್ಣ ದೂರ ಸ್ವಾಮಿ, ಚಟ್ನಿ ಹನುಮಂತಪ್ಪ, ಕೆ ರವಣಪ್ಪ,ರಾಜ್,ವೆಂಕಟೇಶ್, ತಿಮ್ಮಯ್ಯ, ಸುಧಾಕರ್,ಪವನ್,ಬೋಗಿ ರಾಜ್ ,ಮತ್ತು ಕುಲ ಬಂದವರು ಭಾಗವಹಿಸಿ ಯಶಸ್ವಿಗೊಳಿಸದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ