ಬೀದಿಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಮುಕ್ಬುಲ್ ಸಾಬ್ ಹೂಗಾರ್

 



    ವರದಿ - ಮಂಜುನಾಥ್ ಕೋಳೂರು ಕೊಪ್ಪಳ 

 ಕೊಪ್ಪಳ ಆಗಸ್ಟ್ 26: - ಕೆಪಿಸಿಸಿ ಕೊಪ್ಪಳ ಜಿಲ್ಲಾ ಬೀದಿ- ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಮುಕ್ಬುಲ್ ಸಾಬ್ ಹೂಗಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೋಳೂರು ಅವರನ್ನು ನಗರದ ವಸತಿಗೃಹ ( ಐಬಿ)ದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಹೂ ಮಾಲೆ ಹಾಕಿ ಸಾಲುವದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಜಿಲ್ಲಾಧ್ಯಕ್ಷ ಮುಕ್ಬುಲ್ ಸಾಬ್ ಹೂಗಾರ್ ಮಾತನಾಡಿ ಎಲ್ಲರ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಕೊಳುರು ಮಾತನಾಡಿ ಸದಾ ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ ನಮ್ಮ ವ್ಯಾಪಾರಸ್ಥರ ಸಂಘ ಜಿಲ್ಲಾಧ್ಯಂತೆ ಪ್ರಭಲವಾಗಿ ಬೆಳೆಯಬೇಕಾದರೆ ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸಂಘದ ಸದಸತ್ವ ಪಡೆದು ವ್ಯಾಪಾರದ ಜೊತೆಗೆ ಸಂಘದ ಸರ್ವ ಸದಸ್ಯರ ಅಭಿವೃದ್ಧಿಯ ಕೆಲಸಕ್ಕೂ ಕೈ ಜೋಡಿಸಿದಾಗ ಮಾತ್ರ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ವಿಭಾಗ ನಂಬರ್-1 ಆಗಲು ಸಾಧ್ಯ ಎಂದು ಹೇಳಿದರು. ಬೀದಿ ಬದಿ ವ್ಯಾಪಾರ ಸಂಘದ ಸದಸ್ಯ ಜಮಾಲ್ ಸಾಬ್ ಧಪೇದರ್ ಮಾತನಾಡಿ ಜಿಲ್ಲೆಯ ಅಧ್ಯಕ್ಷ ಮಕ್ಬುಲ್ ಸಾಬ ಹೂಗಾರ್ ಹಾಗೂ ಜಿಲ್ಲಾಪ್ರಧಾನಕಾರ್ಯದರ್ಶಿ ಮಂಜುನಾಥ್ ಕೊಳೂರು ರವರು ನೇಮಕವಾಗಿರುವುದು ಬಹಳ ಸಂತೋಷದ ವಿಷಯ . ನಾವೆಲ್ಲ ಸಂಘದ ಸದಸ್ಯರು ಒಗ್ಗಟ್ಟಾಗಿ ಜಿಲ್ಲಾ ಪದಾಧಿಕಾರಿಗಳಿಗೆ ಬೆಂಬಲ ಕೊಟ್ಟು ಸಂಘದ ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸೊಣ ಎಂದು ಹೇಳಿದರು. ಸನ್ಮಾನ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಸ್ಥರ ವಿಭಾಗದ ತಾಲೂಕ ಅಧ್ಯಕ್ಷ ಮೌನೇಶ್ ಹಡಪದ್ , ಉಪಾಧ್ಯಕ್ಷ ನಾಗಪ್ಪ ಬಜಂತ್ರಿ, ಸದಸ್ಯರಾದ ಆನಂದ್ ಅರಕೇರಿ , ಮುದಿಯಪ್ಪಹದ್ದಿನ್ , ಸಿದ್ದು ಬೋವಿ, ಭರತ್ ಬಡಿಗೇರ್ ,ಇಸ್ಮೈಲ್ ಲಿಂಗಾಪುರ್ , ವಹಭ್ ಸಾಬ ಪರಶುರಾಮ್ ಮನ್ನಾಪುರ , ಮಹಾಂತೇಶ್, ಕುಕನೂರು ಮುಂತಾದವರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*