ಕುರುಕುಂದಾ : ಆಂಜನೇಯ ಮೂರ್ತಿ ಪ್ರತಿಷ್ಠಾಪನೆ.

 


ಸಿಂಧನೂರು :ಅ.20. ತಾಲೂಕಿನ ಕುರುಕುಂದಾ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 

ವಿಶೇಷ ದಿನದಂದು ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆವಂತ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು.

ಈ ಮೂರ್ತಿಯನ್ನು ಮಾನ್ವಿ ತಾಲೂಕಿನ ಸಂಗನಕಲ್ಲ್ ನಿಂದ ತರಲಾಗಿತ್ತು. ಶಿಲ್ಪಿ ಶೇಖರಪ್ಪ ವಿಶ್ವಕರ್ಮ ಎಂಬುವರು ಅದ್ಭುತವಾಗಿ ಆಂಜನೇಯ ಮೂರ್ತಿ ಕೆತ್ತನೆ ಮಾಡಿದ್ದಾರೆ. ಈ ಮೂರ್ತಿ ಪ್ರತಿಷ್ಠಾಪಿಸಲು ಸ್ಥಳೀಯ ಭಕ್ತರು ದೇಣಿಗೆ ಸಂಗ್ರಹಿಸಿ ಮೂರ್ತಿ ವೆಚ್ಚ ಭರಿಸಿದ್ದಾರೆ.

ಊರಿನ ಜನರು ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಭಕ್ತರು ಸಂಕಲ್ಪ ಮಾಡಿಕೊಂಡಿದ್ದರು. ಈಗ ಭಕ್ತರ ಸಂಕಲ್ಪ ಈಡೇರಿದ್ದು, ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಿದೆ. ಮೂರ್ತಿ ಪ್ರತಿಷ್ಠಾಪನೆ ವೇಳೆ ಗ್ರಾಮದ ಸಕಲ ಭಕ್ತರು ಭಾಗವಹಿಸಿದ್ದರು.

ಅ.20 ಶನಿವಾರ ಬೆಳಿಗ್ಗೆ ಆಂಜನೇಯಸ್ವಾಮಿ ಪ್ರಾಣಪ್ರತಿಷ್ಠಾಪಣೆ ನಡೆಯಲಿದೆ. ಪಂಚಾಮೃತ, ರುದ್ರಾಭಿಷೇಕ, ಶ್ರೀರಾಮ ತಾರಕ ಹೋಮ ಹಾಗೂ ಮಹಾಮಂಗಳಾರತಿ ಜರುಗಲಿವೆ.ಊರಿನ ಹೆಣ್ಣು ಮಕ್ಕಳ ಹುಡಿ ತುಂಬಿದ ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸಿದರು.ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*