ಭದ್ರಾ ಒಳ ಹರಿವಿನಲ್ಲಿ ಕೊಂಚ ಏರಿಕೆ
ದಾವಣಗೆರೆ:ಚಿಕ್ಕ ಮಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ನಿನ್ನೆಯಿಂದ ಮಳೆ ಹೆಚ್ಚಿದ ಹಿನ್ನೆಲೆಯಲ್ಲಿ ಭದ್ರಾ ಜಲಶಯದ ಒಳ ಹರಿವು ಸಹ ಕೊಂಚ ಚೇತರಿಕೆ ಕಂಡಿದೆ.
ಮೂರು ದಿನಗಳ ಹಿಂದೆ 711 ಕ್ಯೂಸೆಕ್ ಇದ್ದ ಒಳ ಹರಿವು ನಿನ್ನೆ 1014 ಕ್ಯೂಸೆಕ್ ಗೆ ಏರಿತ್ತು. ಇಂದು ಮತ್ತಷ್ಟು ಚೇತರಿಕೆ ಕಂಡಿದ್ದು, 1511 ಕ್ಯೂಸೆಕ್ ಗೆ ಏರಿದೆ. ಇಂದು ಸಹ ಉತ್ತಮ ಮಳೆಯ ಮುನ್ಸೂಚನೆ ಇರುವುದರಿಂದ ಒಳ ಹರಿವು ಮತ್ತಷ್ಟು ಏರಿಕೆ ಆಗುವುದು ಖಚಿತ.
71.53 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಹಾಲಿ 48.73 ಟಿಎಂಸಿ ನೀರು ಸಂಗ್ರಹ ಆಗಿದೆ. ಎರಡು ಕಾಲುವೆಗಳಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ 3224 ಕ್ಯೂಸೆಕ್ ಒಳ ಹರಿವು ಇದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ