ಚಂದ್ರನ ಬೆನ್ನೇರಿದ ಭಾರತ.ಬೆಕ್ಕಸಬೆರಗಾದ ಭೂಲೋಕ!
ಚಂದ್ರಯಾನ - 3 ಯಶಸ್ವಿಯಾಗಿದೆ.ಚಂದ್ರಲೋಕದ ದಕ್ಷಿಣ ದೃವದಲ್ಲಿ ಯಶಸ್ವಿಯಾಗಿ ಪಾದಾರ್ಪಣೆಮಾಡಿದ ಮೊದಲ ದೇಶವೆಂಬ ಪ್ರಖ್ಯಾತಿಯ ಮೂಲಕ ಜಗತ್ತಿನ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಮಿಂಚಿನಸಂಚಾರವನ್ನೇ ಮೂಡಿಸಿದೆ. ಚಂದ್ರಯಾನ ಎರಡು ಯಾನದ ವೈಫಲ್ಯ ಭಾರತವನ್ನು ಗೆಲ್ಲಿಸಲು ಸ್ಪೂರ್ತಿ ನೀಡಿದೆ. ಅದರಫಲವಾಗಿ ಇಂದು ಭಾರತ ಪ್ರಪಂಚದ ನಾನು ಎಂಬ ದೇಶಗಳೇ ಮಾಡದ ಸಾಧನೆಯನ್ನು ಮಾಡಿ ಜಗತ್ತೇ ದಿಗ್ಭಾಂತವಾಗುವಂತೆ ಮಾಡಿದೆ.
ಭಾರತಕ್ಕಿಂತ ಮುಂಚೆ ಚಂದ್ರನಬದಕ್ಷಿಣದೃವದಲ್ಲಿ ಇಳಿದು ಭಾರತದ ಪಟ್ಟವನ್ನುಬತಾನು ಮುಡಿಗೇರಿಸಿಕೊಳ್ಳಬೇಕೆಂಭ ರಷ್ಯಾದ ಹುನ್ನಾರ ಚಂದ್ರನ ಅಂಗಳ ತಲುಪುವ ಮುನ್ನ ನುಚ್ಚುನೂರಾಗಿ ಪ್ರಪಂಚದ ತುಂಬೆಲ್ಲಾ ಚಲ್ಲಾಪಿಲ್ಲಿಯಾಗಿಬಿಟ್ಟಿತು. ಮೂರ್ನಾಲ್ಕು ದಶಕಗಳ ನಂತರದ ಅದರ ಪ್ರಯೋಗ ನೀರಿನಲ್ಲಿ ಹೋಮ ಮಾಡಿದಂತಾಯಿತು.
ಆಮೆ ಮತ್ತು ಮೊಲದ ಸ್ಪರ್ಧೆಯಲ್ಲಿ ಮತ್ತೊಮ್ಮೆ ಆಮೆ ಗೆದ್ದು ನಿಧಾನವೇ ಪ್ರಧಾನವೆಂಬ ಸರ್ವಕಾಲಿಕ ಸತ್ಯವನ್ನು ಜಗದಗಲ ಸಾರಿದೆ.
ಕಡಿಮೆ ಖರ್ಚಿನಲ್ಲೂ ಚಂದ್ರನ ಬೆನ್ನೇರಬಹುದೆಂಬ ನಗ್ನಸತ್ಯ ಹೇಳುವ ರಾತ್ರಿಶಾಲೆಯನ್ನು ಆರಂಭಿಸಿದೆ.
ಭಾರತ ಯಾವತ್ತಿದ್ದರೂ ವಿಶ್ವಗುರುವೇ ಅದು ಪ್ರಾಚೀನ ಕಾಲದಿಂದಲೂ ಆರ್ವಾಚೀನ ಕಾಲದವರೆಗೂ ಸೂರ್ಯಚಂದ್ರಾರ್ಕವಾಗಿ ಗುರುವಿನಸ್ಥಾನದಲ್ಲೇ ಇರುತ್ತದೆಂದು ಸಾರುತ್ತಿದೆ.
ನಲವತ್ತೊಂದು ದಿನಗಳ ಪ್ರಯಾಣದ ನಂತರ ವಿಜ್ಞಾನಿಗಳ ನಿಗದಿತ ಸಮಯಕ್ಕೆ ಚಂದ್ರಚುಂಬನ ಮಾಡುವ ಮೂಲಕ ಪ್ರಪಂಚದ ಅವಡುಗಚ್ಚಿದ ಖಾತರಕ್ಕೆ ಸಂತಸದ ಕಾರಂಜಿಯನ್ನು ಸಿಡಿಸಿದೆ.
ಇದರಿಂದ ಚಂದ್ರನ ಮೇಲ್ಮೈಮೇಲೆ ಏನೇನಿದೆ,ಎಂಬುದನ್ನು ಸಂಶೋಧನೆಯ ಮೂಲಕ ನಿಖರಮಾಹಿತಿಯನ್ನು ಭಾರತಕ್ಕೆ ರವಾನಿಸಲಿದೆ.ಬೆಕ್ಕಸಬೆರಗಾಗಿ ಭಾರತವನ್ನೇ ನೋಡುತ್ತಿರುವ ಜಗತ್ತಿನ ದಿಗ್ಗಜರಾಷ್ಟ್ರಗಳಿಗೆ ಚಂದಮಾಮನಕಥೆ ಹೇಳಲು ಭಾರತೀಯ ವಿಜ್ಞಾನಿಗಳು ಸನ್ನದ್ದರಾಗಿದ್ದಾರೆ.
ಇದು ಭಾರತದ ಸಾಧನೆಯ ಮೈಲುಗಲ್ಲು, ಇಸ್ರೋದ ಸಾಧನೆಗೆ ಇಂಬಾಗಿ ನಿಂತ ಸರಕಾರಕ್ಕೆ ಹಗಲಿರುಳು ಶ್ರಮಿಸಿದ ವಿಜ್ಞಾನಿಗಳಿಗೆ ಭಾರತದ ಜನತೆ ಹೃದಯತುಂಬಿದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾರೆ.
ಚಂದ್ರಯಾನ ಮೂರರ ಸಂಶೋಧನೆಯಿಂದ ಭಾರತೀಯರ ಜೀವನ ಭೂಲೋಕದಿಂದ ಚಂದ್ರಲೋಕಕ್ಕೆ ಹಾರಿ ಅಲ್ಲಿ ಹೊಸದೊಂದು ಭಾರತ ಮೈತೆರೆದುಕೊಳ್ಳಲಿ ಎಂಬುದೇ ಈ ಲೇಖನದ ಮೂಲಾರ್ಥ.
ಲೇಖನ, ಸುರೇಶ ಬಳಗಾನೂರು.ಉಪನ್ಯಾಸಕರು ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜು ಮಸ್ಕಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ