ಪಶು ಸಖಿ ಸಂಪನ್ಮೂಲ ವ್ಯಕ್ತಿಗಳಿಗೆ ಕಿಟ್ ವಿತರಣೆ
ಸಿಂಧನೂರು : ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ ಪಶು ಸಖಿ ಸಂಪನ್ಮೂಲ ವ್ಯಕ್ತಿಗಳಿಗೆ ಪಶು ಇಲಾಖೆಯಿಂದ ಪಶುಗಳಿಗೆ ಮತ್ತು ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಕಿಟಗಳ ವಿತರಣೆ.
ನಗರದ ಸುಕಲಾಪೇಟೆಯಲ್ಲಿರುವ ತಾಲೂಕು ಪಶು ಆಸ್ಪತ್ರೆಯಲ್ಲಿ, ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯತ್ ,ತಾಲೂಕ ಪಂಚಾಯತ್ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣ ಘಟಕ ಸಿಂಧನೂರು ಪಶು ಪಾಲನ ಮತ್ತು ಸಖಿ ಸಂಪನ್ಮೂಲ ವ್ಯಕ್ತಿಗಳಿಗೆ ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಕಿಟ್ ನ್ನು ವಿತರಿಸಲಾಯಿತು.
ಡಾ ಶರಣೇಗೌಡ ಮಾತನಾಡಿ ಪಶು ಆಸ್ಪತ್ರೆಗೆ ಮತ್ತು ಪಶುಗಳ ಸಾಕಾಣಿಕೆಯವರ ನಡುವಿನ ಸಂಪರ್ಕ ಸೇತವೇಯಾಗಿ ಪಶು ಶಖಿಯವರು ಕಾರ್ಯ ನಿರ್ವಹಿಸಿ ಎಂದರು.
ತಾಲೂಕು ಪಂಚಾಯತ್ ಯೋಜನಾಧಿಕಾರಿ ರಜ್ಜು ಬಲಿ ಮಾತನಾಡಿ ವೈದ್ಯರ ಸಲಹೆ ಪಡೆದುಕೊಂಡು ಜನರೊಂದಿಗೆ ಉತ್ತಮವಾದ ಬಾಂದವ್ಯವನ್ನು ರೂಪಿಸಿಕೊಳ್ಳಿ ಎಂದರು.
ಎನ್. ಆರ್. ಎಲ್. ಎಂ. ವ್ಯವಸ್ಥಾಪಕ ವೀರಭದ್ರಗೌಡ ಗಚ್ಚಿನಮನಿ ಪ್ರಾಸ್ತವಿಕ ನುಡಿ ನುಡಿದರು.ಈ ಸಂದರ್ಭದಲ್ಲಿ ಪಶು ಆಸ್ಪತ್ರೆಯ ಸಿಬ್ಬಂದಿಗಳು ಎನ್. ಆರ್. ಎಲ್. ಎಂ. ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ