ನುಲಿಯ ಚಂದಯ್ಯ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

 


ಕೊರಚ/ಕೊರಮ/ಕೊರವ ಸಮುದಾಯಕ್ಕೆ ಸಮುದಾಯ ಭವನ ಮತ್ತು ಸ್ಮಶಾನ ಮಂಜೂರು ಮಾಡಲು ತಹಸೀಲ್ದಾರ್ ಅವರಿಗೆ ಒತ್ತಾಯ

ಕೊಟ್ಟೂರ:ಆಗಷ್ಟ್ 31 ರಂದು ಶರಣ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಸೋಮವಾರ ಬೆಳಿಗ್ಗೆ ತಹಶೀಲ್ದಾರರ ಕಛೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸುವ ಬಗ್ಗೆ ಪೂರ್ವಭಾವಿ ಸಭೆ ಜರುಗಿತು. ಜಯಂತಿಯನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೊರಚ/ಕೊರಮ/ಕೊರವ ಸಮುದಾಯಗಳ ಕುಲಕಸುಬುಗಳ ಮತ್ತು ಸ್ಥಿತಿಗತಿಗಳ ಬಗ್ಗೆ ಪ್ರಸ್ತಾಪಿಸಿದರು. ಈ ವಿಷಯಕ್ಕೆ ಸಂಬಂಧಿಸಿದ ಸಮಾಜದ ಮುಖಂಡರು ಮಾತನಾಡುತ್ತಾ, ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಕುಲಕಸುಬುಗಳಾದ ಕಸಬರಿಕೆ ಕಟ್ಟುವಿಕೆ, ಪುಟ್ಟಿ ಹೆಣೆಯುವುದು, ಹಗ್ಗ ಎಣೆಯುವಿಕೆ, ಹಂದಿ ಸಾಕಾಣಿಕೆ, ಎತ್ತಿನ ವ್ಯವಸಾಯ, ಬ್ಯಾಂಡ್ ಬಾರಿಸುವುದು ಈ ವೃತ್ತಿಗಳನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ಸಮುದಾಯಗಳು ಇನ್ನು ಹಿಂದುಳಿದಿದ್ದು, ಸರ್ಕಾರದ ಸೌಲಭ್ಯಗಳನ್ನು ನಮ್ಮ ಸಮುದಾಯಕ್ಕೆ ತಲುಪುವಂತಾಗಬೇಕು ಎಂದು ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಅಮರೇಶ್ ಮಾತನಾಡುತ್ತ, ಸಮುದಾಯದ ಮಕ್ಕಳನ್ನು ಶಿಕ್ಷಣದ ಕಡೆಗೆ ಮುಖ ಮಾಡಿಸಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ನಂತರ ಸಮುದಾಯದ ಮುಖಂಡರು ಕೊಟ್ಟೂರು ಪಟ್ಟಣದ ಕೊರಚ/ಕೊರಮ/ಕೊರವ ಸಮುದಾಯಕ್ಕೆ ಸಮುದಾಯ ಭವನ ಮತ್ತು ಸ್ಮಶಾನ ಮಂಜೂರು ಮಾಡಿಕೊಡುವಂತೆ ತಹಶೀಲ್ದಾರರಿಗೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಉಪಕಾರ್ಯದರ್ಶಿ ಕೆ.ಕೊಟ್ರೇಶ್, ಕೊಟ್ಟೂರು ತಾಲ್ಲೂಕು ಅಧ್ಯಕ್ಷ ಮಂಜುನಾಥ ಭಜಂತ್ರಿ, ಸಂಘಟನಾ ಕಾರ್ಯದರ್ಶಿ ಬೆಳ್ಳಿರಥದ ಸಿದ್ದಣ್ಣ, ಬತ್ತನಹಳ್ಳಿಯ ಹಿರಿಯ ಮುಖಂಡ ಕೆ.ಹಾಲೇಶ್, ವೆಂಕಟೇಶ್ ಶೇಬಿ, ವೆಂಕಣ್ಣ, ರೇವಣ್ಣ, ಗ್ರಾ.ಪಂ. ಸದಸ್ಯ ಪ್ರಸನ್ನಕುಮಾರ, ಪರಶುರಾಮ, ರಮೇಶ್, ರುದ್ರಪ್ಪ, ಪರಶುರಾಮ್, ಕೊಟ್ರೇಶ್,ಗಾಳೆಪ್ಪ ಇನ್ನು ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ