ಕಾಲುವೆಗೆ ನೀರು ಬಿಟ್ಟು 15 ದಿನ ಕಳೆದರೂ ಕೆಳಭಾಗಕ್ಕೆ ತಲುಪದ ನೀರು,ರೈತಾಪಿ ಜನರು ಕಂಗಾಲು.
ಸಿಂಧನೂರು: ಅ.24. ಕಾಲುವೆಗೆ ನೀರು ಬಿಟ್ಟು ಸುಮಾರ 15 ದಿನ ಕಳೆದರೂ ಕೆಳ ಭಾಗಕ್ಕೆ ನೀರು ತಲುಪದೇ ಹಿನ್ನಲೆ ರೈತಾಪಿ ಜನರು ಕಂಗಾಲಿಯಾಗಿರುವುದು ಬೇಳಕಿಗೆ ಬಂದಿದೆ.
ಹೌದು ಸಿಂಧನೂರು ತಾಲೂಕಿನ ರೈತನಗರ ಕ್ಯಾಂಪ್ ನಿಂದ ಗುಂಡಮ್ಮ ಕಾಲುವೆಗೆ 54 ರ 7Rಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಕಾಲುವೆಯ ಮೇಲೆ ಗಿಡ - ಗಂಟೆಗಳು ಬೆಳೆದು ಕಾಲುವೆ ಎಲ್ಲಿ ಎನ್ನುವುದು ಹುಡುಕುವ ಪರಸ್ಥಿತಿ ರೈತಾಪಿ ಜನರಲ್ಲಿ ಅಧಿಕಾರಿಗಳು ಹುಡುಕುವಂತೆ ಮಾಡಿದ್ದಾರೆ.
ಕಾಲುವೆಯನ್ನು ಸ್ವಚ್ಛತೆ ಮಾಡಿ ರೈತಾಪಿ ವರ್ಗದ ಜನರಿಗೆ ಸಂಪರ್ಕವಾಗಿ ಅಧಿಕಾರಿಗಳು ನಿರ್ಲಕ್ಷ ಧೋರಣೆ ತಾಳಿದ ಹಿನ್ನಲೆ ಕಾಲುವೆಗೆ ನೀರು ಬಿಟ್ಟು ಸುಮಾರು 15 ದಿನ ಗತಿಸಿದರು ಕೆಳಭಾಗದ ರೈತರಿಗೆ ನೀರು ಇಲ್ಲದಂತೆ ಆಗಿರುವುದು ಸೋಚನೆಯ ಸಂಗತಿಯಾಗಿದೆ.
ಈ ಕುರಿತು ಚಂದಾ ಪಾಷ ಎನ್ನುವ ರೈತ ಮಾತನಾಡಿ, ಕಾಲುವೆಗೆ ನೀರು ಬಿಟ್ಟು 20 ದಿನಗಳಾದರೂ ರೈತನಗರ ಕ್ಯಾಂಪಿನ 54 7R ಕಾಲುವೆಗೆ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನ ಆಗಿಲ್ಲ ಜೊತೆಗೆ ಅಕ್ರಮ ಪೈಪುಗಳು ಜಾಸ್ತಿ ಆಗಿದ್ದವೆಂದು ಹೇಳಿದರು.
ನಾಗಾರ್ಜುನ ರೈತ ಮಾತನಾಡಿ ಕಾಲುವೆಯಲ್ಲಿ ಸಂಪೂರ್ಣವಾಗಿ ಗಿಡ - ಗಂಟೆ ಬೆಳೆದು ಕಾಲುವೆ ಎಲ್ಲಿ ಎನ್ನುವ ಹುಡುಕುವ ಪರಸ್ಥಿತಿ ನಿರ್ಮಾಣವಾಗಿದ್ದು ಹಲವು ಭಾರಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಕಾಲುವೆ ಸ್ವಚ್ಛ ಗೊಳಿಸುವಂತೆ ಮನವಿ ಮಾಡಿದ್ದು ನಮ್ಮಲಿ ಬಜೆಟ್ ಇಲ್ಲಾ ನೀವೇ ಕಾಲುವೆಯನ್ನು ಸ್ವಚಮಾಡಿಸಕೊಳ್ಳಿ , ಇಲ್ಲದಿದ್ದರೆ ಗದ್ದೆ ಹಚ್ಚಬೇಡಿ ಎಂದು ಹೇಳುತ್ತಿದ್ದಾರೆ. ಕೂಡಲೇ ಶಾಸಕರು ಇತ್ತ ಗಮನ ಹರಿಸಿ ಕಾಲುವೆಯನ್ನು ಸ್ವಚ್ಛಗೊಳಸಿ ಕೆಳ ಭಾಗದ ರೈತರಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಮರೆಡ್ಡಿ, ಚಂದ್ರಪ್ಪ, ಮೌನೇಶ್ ಗೋರೇಬಾಳ, ಪ್ರತಾಪ ರೆಡ್ದಿ , ಶಂಕರ್ ಗೋರೆಬಾಳ, ಮಲ್ಲಪ್ಪ ಮಾಡಗೇರಿ,
ಮಹೇಬೂಬ, ರಾಜಾಸಾಬ್, ರಾಜೇಶ, ಕರಿಯಮ್ಮ, ನಾನಿ, ಭರತರೆಡ್ದಿ, ಬಾಬು, ಹನುಮಂತ ಸೇರಿದಂತೆ ಅನೇಕ ಉಪಸ್ಥಿತಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ