ಕೂಡ್ಲಿಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ



ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು :ಮಾನ್ಯ ಸಿದ್ದರಾಮಯ್ಯನವರಿಗೆ ಪತ್ರ ಮೂಲಕ ಒತ್ತಾಯ

*ಕೂಡ್ಲಿಗಿ ಪಟ್ಟಣದಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೂಡ್ಲಿಗಿ ತಾಲೂಕು ಘಟಕ ವತಿಯಿಂದ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಮಾನ್ಯ ತಾಲೂಕು ದಂಡಾಧಿಕಾರಿಗಳ ಮುಖಾಂತರ ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ರೈತ ಮುಖಂಡರು ಕೆಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಮನವಿ ಪತ್ರವನ್ನು ಮಾನ್ಯ ತಹಶೀಲ್ದಾರರು ಟಿ ಜಗದೀಶ್ ರವರಿಗೆ ನೀಡಲಾಯಿತು.

 ಕೂಡ್ಲಿಗಿ ತಾಲೂಕಿನ ರೈತರು ಮುಂಗಾರು ಮಳೆ ಆಶ್ರಿತ ರೈತರು ಹೊಲದಲ್ಲಿ ಬಿತ್ತನೆ ಮಾಡಿದ್ದು ಮಳೆ ಬಾರದೇ ಬಿತ್ತನೆ ಮಾಡಿದ ಮೆಕ್ಕೆಜೋಳ, ಜೋಳ, ಸಜ್ಜೆ,ಶೇಂಗಾ, ರೈತ ಬೆಳೆಯುವ ಅವಲಂಬಿತ ಬೆಳೆಗಳು ಮಳೆ ಬಾರದೆ ನೀರಿಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿದ್ದು ರೈತನಿಗಲ್ಲದೆ ಸಮಸ್ಯೆ ಈ ಬಾರಿ ಕೂಡ್ಲಿಗಿ ತಾಲೂಕಿನಾ ದ್ಯಂತ ಕುರಿ, ಮೇಕೆ, ಜಾನುವಾರಿಗಳಿಗೂ ಸಹ ಮೇವು ಕಾಳು ಕಡಿಲ್ಲದೆ, ಜನರಿಗೂ ಊಟಕ್ಕೂ ಜೀವನೋಪಾಯಕ್ಕು ಸಂಕಷ್ಟ ಎದುರಾಗಿದೆ ಆದ್ದರಿಂದ ಕಾಂಗ್ರೆಸ್ ಸರ್ಕಾರವು ಕೂಡ್ಲಿಗಿ ತಾಲೂಕಿನ ರೈತರ ಹಿತ ಕಾಯುವ ಕರ್ತವ್ಯ ನಿಮ್ಮದಾಗಿದೆ ಆದ್ದರಿಂದ ನಮ್ಮ ಕೂಡ್ಲಿಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ರೈತರ ಪರವಾಗಿ ದೇವರ ಮನೆ ಮಹೇಶ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇವರು ಮಾತನಾಡಿದರು. ಬರಪೀಡಿತ ಪ್ರದೇಶ ಎಂದು ಘೋಷಿಸುವುದರ ಜೊತೆಗೆ ರೈತರ ಕೆಲವು ಪ್ರಮುಖ ಬೇಡಿಕೆಗಳಾದ ತಾಲೂಕಿನ ರೈತರ ಬೆಳೆ ಸಮೀಕ್ಷೆಯನ್ನು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಬೆಳೆ ನಷ್ಟ ಹೊಂದಿದ ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು ಮತ್ತು ಬೆಳೆ ವಿಮೆ ಮಾಡಿಸಿದ ರೈತರಿಗೆ ಒಂದು ಎಕರೆಗೆ 40,000 ಬೆಳೆ ಪರಿಹಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕು

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ರಾಜ್ಯ ಬರ ಪರಿಸ್ಥಿತಿಯನ್ನು ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿ ತ್ವರಿತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಮತ್ತು ಉದ್ಯೋಗ ಖಾತ್ರಿಯ 200 ದಿವಸ ಕೆಲಸವನ್ನು ಈ ಬರಪೀಡಿತ ತಾಲೂಕುಗಳಿಗೆ ಒದಗಿಸಬೇಕು.

ತಾಲೂಕಿನಲ್ಲಿ 150 ವರ್ಷಗಳಿಂದ ಸರ್ಕಾರ ಭೂಮಿಯಲ್ಲಿ ಸಾಗುವಳಿ ಮಾಡುವ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರನ್ನು ಒಕ್ಕಲಿಬಿಸದೆ ಸಾಗುವಳಿ ರೈತರಿಗೆ ಪಟ್ಟ ನೀಡಬೇಕು

ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿಯೇ ಕೂಡ್ಲಿಗಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು

 ರೈತರು ರಾತ್ರಿ ಸಮಯದಲ್ಲಿ ಪಂಪ್ಸೆಟ್ನಿಂದ ನೀರು ಹರಿಸಲು ಹೋದಾಗ ಕರಡಿ ಚಿರತೆಗಳಿಂದ ದಾಳಿಗೊಳಗಾಗಿದ್ದಾರೆ ಆದ್ದರಿಂದ ರೈತರಿಗೆ ಬೆಳಗಿನ ಜಾವ 6 ಯಿಂದ 7 ತಾಸ್ ಜೆಸ್ಕಾಂ ಇಲಾಖೆಯವರು ವಿದ್ಯುತ್ತನ್ನು ಮುಂದುವರಿಸಬೇಕು

 ಪಟ್ಟಣ ಪಂಚಾಯಿತಿಯಿಂದ ಐದು ಕಿಲೋಮೀಟರ್ ಒಳಗಡೆ ಸಾಗುವಳಿ ರೈತರಿಗೆ ಪಟ್ಟ ನೀಡದೆ ಇರುವ ಆದೇಶವನ್ನು ವಾಪಸ್ ಪಡೆಯಬೇಕು ನಿಜವಾದ ಸಾಗುವಳಿ ರೈತನಿದ್ದು ಫಾರಂ 57 ಅರ್ಜಿ ಸಲ್ಲಿಸಿದ್ದರೆ ಅಂತಹ ರೈತರಿಗೆ ಪಟ್ಟ ನೀಡಬೇಕು

ರೈತ ವಿರೋಧಿ 3 ಮಾರಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು

 ಕೂಡ್ಲಿಗಿ ತಾಲೂಕಿನ ಹಾಗೂ ರಾಜ್ಯ ಎಲ್ಲಾ ಕೃಷಿ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು. ಎಂದು ಮನವಿ ಪತ್ರದ ಮೂಲಕ ತಿಳಿಸಲಗಿದೆ. ಈ ಸಂದರ್ಭದಲ್ಲಿ ರೈತ ಘಟಕದ ಕಾರ್ಯಾಧ್ಯಕ್ಷರಾದ ಕಾಟೇರ್ ಶೇಶಪ್ಪ, ರೈತ ಸಂಘದ ಉಪಾಧ್ಯಕ್ಷರಾದ ಪಿ.ಕಾಸಿನ್ ಸಾಬ್, ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ಕೆ. ಮಹೇಶ್ ಹೆಗ್ಡಾಳ್, ಕೆ ಸೀನಪ್ಪ,ಚೌಡಪ್ಪ, ಮಂಜುನಾಥ್, ಅಬ್ದುಲ್ ಹನಾನ್, ಶಿವಕುಮಾರ್, ಪರಮೇಶಪ್ಪ, ಕೊಟ್ರೇಶ್, ಇನ್ನು ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು*


 *ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ