ಎಸ್ಸಿ ಎಸ್ಟಿ ಅನುದಾನ ಗ್ಯಾರಂಟಿ ಯೋಜನೆಗೆ ಬಳಸಬೇಡಿ
ಬಳ್ಳಾರಿ: ಕಾಂಗ್ರೆಸ್ ಪಕ್ಷ ಎಸ್ ಸಿ, ಎಸ್ಟಿ ಗೆ ಮೀಸಲು ಇರಬೇಕಾದ ಅನುದಾನದ ಪೈಕಿ 11 ಸಾವಿರ ಕೋಟಿ ರು. ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವುದನ್ನು ರದ್ದು ಮಾಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24 ಸಾಲಿನಲ್ಲಿ 34,423 ಕೋಟಿ ರು. ಘೋಷಣೆ ಮಾಡಲಾಗಿತ್ತು ಆದರೆ. ಈಗ 11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಭಾಗ್ಯ ಯೋಜನೆಗೆ ಬಳಸಲು ನಿರ್ಧರಿಸಿರುವುದು ಸರಿಯಲ್ಲ. ಕೂಡಲೇ ಇದನ್ನು ರದ್ದು ಮಾಡಬೇಕು ಎಂದರು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ತಿಗೆ ಮೀಸಲಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ಗ್ಯಾರಂಟಿ ಭಾಗ್ಯಗಳಿಗೆ ಬಳಸಲ್ಲ ಎಂದು ಹೇಳಿದ್ದರು. ಆದರೆ, ಈಗ ಇದನ್ನು ಬಳಸಲು ಮುಂದಾಗಿದ್ದಾರೆ. ಇಂದು ಖಂಡನೀಯ ಎಂದರು.
ಇನ್ನು ಚುನಾವಣಾ ಪೂರ್ವದಲ್ಲಿ ಇದೆ ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಕಾಯ್ದೆ 7ಡಿ ರದ್ದುಮಾಡಿದ ಭರವಸೆ ನೀಡಿದ್ದರು. ಆದರೆ, ಈಗ ಈ ಕುರಿತು ಮಾತನಾಡುತ್ತಿಲ್ಲ ಎಂದು ಅವರು ತಿಳಿಸಿದರು.
ಇನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ದೇಶದಲ್ಲಿ ಇರುವ ಐದು ರಾಷ್ಟ್ರೀಯ ಪಕ್ಷ ಗಳ ಪೈಕಿ ನಮ್ಮ ಪಕ್ಷ ಮೂರನೆಯ ಪಕ್ಷವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧ್ಯಕ್ಷ ಮುನಿಸ್ವಾಮಿ, ನಾಯಕರ ಕೃಷ್ಣ, ಚಿದಾನಂದ, ಶೇಖರ್ ಬಾಬು, ಹಳ್ಳೇರ ವೀರೇಶ್, ಶಕುಂತಲ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ