ಕಲ್ಯಾಣ ಎಂಬ ಪದ ಇಡೀ ಕರ್ನಾಟಕದ ಅಸ್ಮಿತೆ!
ಕಲ್ಯಾಣ ಎಂಬ ಪದ ಇಡೀ ಕರ್ನಾಟಕದ ಅಸ್ಮಿತೆ! ಕರುನಾಡಿನಲ್ಲಿ ನಡೆದ ದೊಡ್ಡ ಕ್ರಾಂತಿ, ಪ್ರಪಂಚಕ್ಕೆ ಮಾದರಿ ಎಂಬAತೆ ಸೃಷ್ಟಿಯಾದ ಹೊಸ ಇತಿಹಾಸ ಎಂದಿಗೂ ಅಜರಾಮರ. ಮನುಷ್ಯ ಮನುಷ್ಯರ ನಡುವೆ ಇದ್ದ ಕಂದಕವನ್ನು ದೂರ ಮಾಡಿ, ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದನೆ ಮಾಡಿದ ಕಲ್ಯಾಣ ಕರ್ನಾಟಕ ಕ್ರಾಂತಿ ನಿಜಕ್ಕೂ ಇಡೀ ಜಗತ್ತಿನ ಇತಿಹಾಸದ ಭಾಗವಾಗಬೇಕಿತ್ತು. ಹೊರ ಜಗತ್ತಿನ ನಂಟು ಜನಸಾಮಾನ್ಯರ ಜೊತೆಗೆ ಇರದೇ ಹೋದದ್ದು ಒಂದು ಕಡೆಯಾದರೆ ಹೊರ ಜಗತ್ತಿನೊಂದಿಗೆ ನಂಟು ಹೊಂದಿದ್ದ ನಮ್ಮವರೇ ಇದನ್ನು ಬರೋಬ್ಬರಿ 4 ಶತಮಾನಗಳ ಕಾಲ ಕತ್ತಲಲ್ಲಿ ಇಟ್ಟಿದ್ದಕ್ಕೆ ಇದು ಕೇವಲ ಕರುನಾಡಿಗೆ ಸೀಮಿತವಾದ ಇತಿಹಾಸ ಆಗಬೇಕಾಯಿತು. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ರೂಪಿತವಾದ ಅನುಭವ ಮಂಟಪ ಮನುಷ್ಯರ ನಡುವೆ ಇದ್ದ ಬೇಧ, ಭಾವ ತಡೆಯುವಲ್ಲಿ ತಕ್ಕಮಟ್ಟಿನ ಯಶ ಕಂಡಿತು. ತೀರಾ ತಳಪಾಯದಲ್ಲಿ ಇದ್ದ ಅದೆಷ್ಟೋ ಸಮುದಾಯಗಳು ಅಕ್ಷರ ಜ್ಞಾನ ಕಂಡುಕೊAಡವು. ತಾವೂ ಇತರರಂತೆ ಮನುಷ್ಯರೇ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಮನಗಂಡರು. ಇಂತಹ ದೊಡ್ಡ ಕ್ರಾಂತಿಗೆ ನೆಲೆಯಾದ ‘ಬಸವ ಕಲ್ಯಾಣ’ ಇರುವುದು ನಮ್ಮ ಹಿಂದಿನ ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಂಡಿದ್ದ ಬೀದರ್ ಜಿಲ್ಲೆಯಲ್ಲಿ! ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನೊಳಗೊಂಡ ಈ ಭಾಗ ಬಹುತೇಕ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಭಾರತಕ್ಕ...