ಪೋಸ್ಟ್‌ಗಳು

ದಾವಣಗೆರೆ ಐತಿಹ್ಯ/Davangere facts ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದಾವಣಗೆರೆ ಗಡಿಯಾರ ಕಂಬದ ಇತಿಹಾಸ ತಿಳಿಯಿರಿ

ಇಮೇಜ್
  ಗಡಿಯಾರ ಕಂಬದ ಇತಿಹಾಸ ತಿಳಿದಿದೆಯೇ? ದಾವಣಗೆರೆ:ಗಂಟೆಗೊಮ್ಮೆ ಎಷ್ಟು ಗಂಟೆ ಆಗಿದೆ ಎಂಬುದನ್ನು ಢನ್ ಢನ್ ಸದ್ದು ಮಾಡಿ ಸಾರುವ ನಮ್ಮ ನಗರದ ಹಳೆಯ ಭಾಗದಲ್ಲಿರುವ ಗಡಿಯಾರ ಕಂಬದ ಇತಿಹಾಸ ಬ್ರಿಟಿಷ್ ಕಾಲದಿಂದ ಆರಂಭ ಆಗುತ್ತದೆ. ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್ ನವರ ಈ ಕಂಬದ ನಿಮನಕ್ಕೆ 1931ರಲ್ಲಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಅಡಿಗಲ್ಲು ಹಾಕಿದ್ದರು. 1931ರಿಂದ 30 ವರ್ಷಗಳ ಕಾಮಗಾರಿ ನಡೆಯಿತು. 1961ರಲ್ಲಿ ಕಾಮಗಾರಿ ಪೂರ್ಣ ಆಗಿ ಉದ್ಘಾಟನೆ ನೆರವೇರಿತು. ಅಂದಿನ ಸ್ಥಳೀಯ ಶಾಸಕರಾಗಿದ್ದ ಸುಬ್ರಮಣ್ಯ ಅವರು ಗಡಿಯಾರ ಕಂಬದ ಲೋಕಾರ್ಪಣೆ ನೆರವೇರಿಸಿದ್ದರು. ಕಾಲ ನಂತರದಲ್ಲಿ ಏಕಾಏಕಿ ಗಡಿಯಾರ ಸದ್ದು ಮಾಡುವುದನ್ನು ನಿಲ್ಲಿಸಿ ಬಿಟ್ಟಿತು. ತುಂಬಾ ವರ್ಷಗಳ ಕಾಲ ಸದ್ದು ನಿಲ್ಲಿಸಿದ ಗಡಿಯಾರ ಕಂಬ ಮತ್ತೆ ಸದ್ದು ಮಾಡಲು ಎಸ್.ಎಸ್. ಮಲ್ಲಿಕಾರ್ಜುನ್ ಬರಬೇಕಾಯಿತು. ಮತ್ತೆ ಅದಕ್ಕೆ ಸದ್ದು ಬಂದಿದ್ದು 2002 ರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮತ್ತೆ ಈ ಗಡಿಯಾರ ಕಂಬಕ್ಕೆ ಕಾಯಕಲ್ಪ ಸಿಕ್ಕಿತು. ಎಚ್ ಎಂ ಟಿ ಸಹಾಯದೊಂದಿಗೆ ಹೊಸ ಗಡಿಯಾರವನ್ನು ಕಂಬಕ್ಕೆ ಅಳವಡಿಸಲಾಯಿತು. ಇದೀಗ ಗಡಿಯಾರ ಚೆನ್ನಾಗಿ ಕೆಲಸ ಮಾಡುತ್ತಿದೆ.

ದಾವಣಗೆರೆಯಲ್ಲಿ ಹೇಗೆ ಇತ್ತು ಸ್ವತಂತ್ರ ಹೋರಾಟ?

ಇಮೇಜ್
 ದಾವಣಗೆರೆ:ದೇಶದ ಸ್ವಾತಂತ್ರ್ಯಕ್ಕಾಗಿ ದೇಶದ ಲಕ್ಷಾಂತರ ಜನ ಪ್ರಾಣ ತೆತ್ತರು. ಆದರೆ, ನಾವು ಓದುವುದು ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಕುರಿತು. ಇದಕ್ಕೆ ಕಾರಣ ನಮ್ಮ ಪಠ್ಯಕ್ರಮ. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಭೋಸ್, ಜವಾಹರ್ ಲಾಲ್ ನೆಹರು ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಅನೇಕರು ಮನೆ, ಮಡದಿ ಮಕ್ಕಳ ಬಿಟ್ಟು ಬೀದಿಗೆ ಇಳಿದು ಹೋರಾಟ ಮಾಡಿದರು. ಇವರಿಗೆ ಒತ್ತಾಸೆಯಾಗಿ ಸ್ಥಳೀಯ ಮಟ್ಟದಲ್ಲಿಯೂ ನೂರಾರು ಜನ ಪ್ರಾಣ ತೆತ್ತಿದ್ದಾರೆ.  ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸಾಲಿಗೆ ದಾವಣಗೆರೆಯ ಅರು ಜನ ಸೇರಿದ್ದಾರೆ. ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಹಮಾಲಿ ತಿಮ್ಮಣ್ಣ, ಮಗಾನಹಳ್ಳಿ ಹನುಮಂತಪ್ಪ, ಹದಡಿ ನಿಂಗಪ್ಪ, ಬಿದರಕುಂದಿ ನಿಂಗಪ್ಪ. ಮಹಾನಗರ ಪಾಲಿಕೆ ಆವರಣದ ಈ ರಾಷ್ಟ್ರ ಲಾಂಛನದ ಸ್ಮರಣಾರ್ಥ ಸಾಲುಗಳನ್ನು ಓದಬಹುದು. ನಗರದ ಕಾಸಲ್ ಶ್ರೀನಿವಾಸ ಶ್ರೇಷ್ಟಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು. ಪ್ರತಿ ಹೋರಾಟಕ್ಕೆ ಕರೆ ಬಂದಾಗಲೂ ಸ್ಥಳೀಯ ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದವು. ಕಾಂಗ್ರೆಸ್ ರಾಷ್ಟ್ರೀಯ ನಾಯಕ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಹೋರಾಟ ನಡೆದವು. ಬಳ್ಳಾರಿ ಸಿದ್ದಮ್ಮ,  1942ರ ಕ್ವಿಟ್ ಇಂಡಿಯಾ ಚಳವಳಿ ವೇಳೆ ನಗರದ ಈಗಿನ ತಹಸೀಲ್ದಾರ್ ಕಚೇರಿ ಬಳಿ ಗೋಲಿಬಾರ್ ಆಗಿತ್ತು. ರೇಣುಕಾ ಮಂದಿರದ ಬಳಿ ಗೋಲಿಬಾರ್ ಮಾಡಿದಾಗ ನಮ್ಮ ಐವರು ನಾಯಕರು ಅಸುನೀಗಿದರು