*ಯುನಿಕ್ ಚಾರಿಟಬಲ್ ಸಮಾಜಮುಖಿ ಸೇವೆ ಶ್ಲಾಘನೀಯ : ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು*

ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮವನ್ನು ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಸಮಾಜಕ್ಕೆ ಉಪಯುಕ್ತವಾದ ಸೇವಾ ಯೋಜನೆಗಳನ್ನು ರೂಪಿಸಿ ಜನರ ಸೇವೆಗೆ ಇದೆ. ಸಂಘಟನೆ ಕಟ್ಟುವ ಮನಸ್ಸು , ಜನಸೇವೆ ಮಾಡುವ ಕನಸು ಸಂಘಟಕರಲ್ಲಿರಬೇಕು. ಯುನಿಕ್ ಟ್ರಸ್ಟ್ ನವರು ತಮ್ಮ ದುಡಿಮೆಯ ಉಳಿತಾಯದಲ್ಲಿ ಇಂಥಾ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು 

ಸೇವಾ ಟ್ರಸ್ಟ್‌ಗಳು ಈ ರೀತಿಯ ಜನ ಉಪಯೋಗಿ ಆರೋಗ್ಯ ಕೇಂದ್ರವನ್ನು ಮಾಡುತ್ತಿರುವುದು ಮೆಚ್ಚುವುದು, ನೇತ್ರ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವವರನ್ನು ಮೆಚ್ಚಿಕೊಳ್ಳುವುದು ಬಡವರಿಗೆ ಉಚಿತ ಕನ್ನಡಕ ಕೊಡುವಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರೂಪಿಸಲು ಟ್ರಸ್ಟ್ ಸದಸ್ಯರಿಗೆ ಕೊಟ್ಟೂರು ಸಮುದಾಯ ಆರೋಗ್ಯ ವೈದ್ಯಾಧಿಕಾರಿ ಬದ್ಯಾನಾಯ್ಕ್ ಟ್ರಸ್ಟ್ ಸದಸ್ಯರಿಗೆ ಸಲಹೆ ನೀಡಿದರು


ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತಮ್ಮ ದುಡಿಮೆಯ ಉಳಿತಾಯ ಹಣದಲ್ಲಿ ಸಮಾಜ ಸೇವೆ ನಡೆಯುತ್ತಿದೆ. ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತರು ಹಾಗೂ ಟ್ರಸ್ಟ್ ಸದಸ್ಯರ ಅಭಿಲಾಷೆ ಆರೋಗ್ಯ ಇಲಾಖೆ ವಿಜಯನಗರ ಮತ್ತು ಸಮುದಾಯ ಕೊಟ್ಟೂರು ಹಾಗೂ ಆರೋಗ್ಯ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರಲ್ಲಿ ಈ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಯಿತು ಎಂದು ಪ್ರಾಸ್ತಾವಿಕವಾಗಿ ಪಿ.ಎಂ. ಈಶ್ವರಯ್ಯ ಮಾತನಾಡಿದರು

ಈ ಸಂದರ್ಭದಲ್ಲಿ ಡಾ. ರಾಜೇಶ್, ಡಾ ||ನಾರಾಯಣಮೂರ್ತಿ, ಟ್ರಸ್ಟ್‌ಗಳಾದ ಕೆ.ಅನಿಲ್ ಕುಮಾರ್, ಹನಸಿ ವಿಜಯ, ಸುರೇಶ್ ಎಸ್. ಕೆ.ಎಸ್. ರುದ್ರೇಶ ಹಾಗೂ 

ಕೊಟ್ಟೂರು,ಹರಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಜಗಳೂರು ತಾಲೂಕಿನ ಹಳ್ಳಿಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 380ಕ್ಕೂ ಹೆಚ್ಚಿನ ಜನರಿಗೆ ತಪಾಸಣೆ ಕಾರ್ಯನಡೆಯಿತು. 143 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಶಿವಮೊಗ್ಗ ಪಟ್ಟಣಕ್ಕೆ ಕರೆದುಕೊಂಡು ಹೋಗಬೇಕೆಂದು ಡಾ|| ವೈಷ್ಣವಿ ನೇತ್ರ ತಜ್ಞರು. ಶಂಕರ್ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಶಿವಪ್ರಸಾದ್ ಕಾಂಪ್ನ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದರು. ನವೀನ್ ಕುಮಾರ್ ಚಟ್ರಿಕಿ ನಿರೂಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ