ಸರಕಾರಿ ಶಾಲೆಯಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

 

ಮಸ್ಕಿ : ಪಟ್ಟಣದ ಧನಗರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರಿಕಾಂತಮ್ಮ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದ ಮುಖ್ಯ ಘಟ್ಟ ಉದ್ಘಾಟನೆ ಉದ್ಘಾಟಕರಾಗಿ ಆಗಮಿಸಿದ್ದ ತಹಶೀಲ್ದಾರ್ ಡಾ.ಮಲ್ಲಪ್ಪ.ಕೆ.ಯರಗೋಳ ರವರು ವೇದಿಕೆಯು ಗಣ್ಯರೊಂದಿಗೆ ಸಸಿಯ ಕುಂಡಲಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ 

ಪವಿತ್ರಾ ಶಿಕ್ಷಕಿ ಇವರಿಂದ ಪ್ರಾರ್ಥನಾ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭ ತದ ನಂತರ ಶಾಲಾ ಮಕ್ಕಳಿಂದ ಮಕ್ಕಳ ದಿನಾಚರಣೆಯ ಗೀತೆ ಹಾಡಲಾಯಿತು. ಮಮತಾ ತಂಡದವರಿಂದ ತಮ್ಮ ಶಕ್ತಿ ಮೀರಿ ಮಧುರ ಕಂಠದಿಂದ ದೇಶಭಕ್ತಿ ಗೀತೆ ಹಾಡಿದರು.

ಮಕ್ಕಳ ದಿನಾಚರಣೆ ಪ್ರಯುಕ್ತ ಶಿಕ್ಷಣದ ಮಹತ್ವದ ಕುರಿತು ಶಾಲಾ ಅವಧಿಯಲ್ಲಿ ಶಿಕ್ಷಕರು ಹೇಳಿದ ಪಾಠವನ್ನು ಅಂದೇ ಮುಗಿಸಿ ಅವರು ಕೊಟ್ಟ ಮನೆ ಕೆಲಸವನ್ನು ಅಂದೇ ಮಾಡಿ ಮುಗಿಸಿ ಬೆಳಗ್ಗೆ ಅವರಿಗೆ ಒಪ್ಪಿಸುವ ಮೂಲಕ ಸೈ ಎನಿಸಿಕೊಂಡು ಮುಂದೆ ಒಬ್ಬ ಒಳ್ಳೆ ನಾಗರೀಕ ವ್ಯಕ್ತಿ ಅಗಿಯೋ ಅಥವಾ ಒಬ್ಬ ಅಧಿಕಾರಿಯೋ ಆದರೆ ನಿಮ್ಮ ಮನೆಯರಿಗಿಂತ ಮೊದಲು ಶಿಕ್ಷಕರು ಸಂತೋಷಪಡುತ್ತಾರೆ.ಆದ್ದರಿಂದ ಎಲ್ಲಾ ಮಕ್ಕಳು ಶಿಕ್ಷಕರು ಹೇಳಿದ ಎಲ್ಲವನ್ನೂ ಚಾಚೂ ತಪ್ಪದೇ ಮಾಡುವ ಮೂಲಕ ಒಳ್ಳೆಯ ವಿದ್ಯಾರ್ಥಿಯಾಗಿ ಜೀವಿಸಿ ಜೀವನದಲ್ಲಿ ಸಾಧಿಸಿ ಎಂದರು ಹಾಗಾಯೇ ಇಲ್ಲಿ ವೇದಿಕೆಯ ಮೇಲೆ ಕುಳಿತ ಶಾಲಾ ಆಡಳಿತ ಮಂಡಳಿಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಿದ್ದೀರಾ ನಿಜ ಜೀವನದಲ್ಲಿಯೂ ಇಂತಹ ಉನ್ನತ ಮಟ್ಟದ ಸ್ಥಾನವನ್ನು ಅಲಕರಿಸುವ ಮೂಲಕ ಶಾಲೆಯ ಹಾಗೂ ನಿಮ್ಮ ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಬಹಳ ಅಚ್ಚುಕಟ್ಟಾಗಿ ಅರ್ಥಗರ್ಭಿತವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ತಮ್ಮ ಉದ್ಘಾಟನಾ ಭಾಷಣದಲ್ಲಿ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ತಿಳಿಸಿದರು.

ನಂತರ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಬಂದಿದ್ದ ಪುರಸಭೆಯ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ ಅವರು ಮಾತನಾಡಿ ಇಲ್ಲಿ ನೆರದ ನನ್ನ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಭವಿಷ್ಯದಲ್ಲಿ ಸಾಧಿಸುವ ಹಂತಗಳು ಬಹಳ ಇದೆ ನಿಮ್ಮ ಇಂದಿನ ಸತತ ಪ್ರಯತ್ನದಿಂದಲೇ ಜೀವನದ ಗುರಿ ಸಾಧನೆ ಸುಲಭ ಹಾಗಾಗಿ ನಿಮ್ಮ ಪ್ರಯತ್ನವನ್ನು ಯಾವತ್ತೂ ಬಿಡಬೇಡಿ ಹಾಗೇ ನಿಮ್ಮ ತಂದೆ ತಾಯಿಯ ಆಸೆಯನ್ನು ಹಿಡೇರಿಸುವ ಮೂಲಕ ಮನೆತನದ ಕೀರ್ತಿಯನ್ನು ಹೆಚ್ಚಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮಧ್ಯದಲ್ಲಿ ತಾಲೂಕ ದಂಡಾಧಿಕಾರಿ ಡಾ.ಮಲ್ಲಪ್ಪ.ಕೆ ಯರಗೋಳ,ಪಂಪಾಪತಿ ಹೂಗಾರ್ ಶಿಕ್ಷಕರು,ಉದಯಕುಮಾರ್ ನಿಲಯಪಾಲಕರು ಮೆದಿಕಿನಾಳ,ಗ್ಯಾನಪ್ಪ ದೊಡ್ಡಮನಿ ಪತ್ರಕರ್ತರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರ ಶಾಲಾ ಮಕ್ಕಳಿಂದ ಅತೀ ಹೆಚ್ಚು ಜಂಗಮವಾಣಿ (ಮೊಬೈಲ್)ಬಳಕೆ ಮಾಡುವುದರಿಂದ ಆಗುವ ಪರಿಣಾಮ ಹಾಗೂ ಈ ಹಿಂದೆ ಯಾವುದೇ ಜಂಗಮವಾಣಿ ಬಳಸದೇ ಎಂಥಹ ಪ್ರೀತಿ ವಿಶ್ವಾಸದಿಂದ ಜೀವಿಸುತ್ತಿದ್ದರು ಎಂಬುದರ ವ್ಯತ್ಯಾಸವನ್ನು ಆಂಗ್ಲ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಮಧ್ಯದಲ್ಲಿ ನೃತ್ಯಕ್ಕೆ ತಕ್ಕಂತಹ ಸಂಗೀತ ಲಹರಿ ಹಾಕುವ ಮೂಲಕ ಇಂದಿನ ದಿನಮಾನಗಳಲ್ಲಿ ಜಂಗಮವಾಣಿಯ ದುಷ್ಪರಿಣಾಮವನ್ನು ಹಾಗೇ ಜಂಗಮವಾಣಿ ಬರದ ಸಂದರ್ಭದಲ್ಲಿನ ಕುಟುಂಬ ಮತ್ತು ಸಮಾಜದ ಜೀವನ ಹೇಗೆ ಇತ್ತು ಎಂಬುದರ ಒಂದು ಚಿಕ್ಕ ನೃತ್ಯದ ಮೂಲಕ ವಿದ್ಯಾರ್ಥಿಗಳು ಅದ್ಭುತವಾದ ತೋರಿಸಿದರು.

ಕಾರ್ಯಕ್ರಮದ ಕುರಿತು ಪಂಪಾಪತಿ ಹೂಗಾರಶಿಕ್ಷಕರು ಮಸ್ಕಿ, ಉದಯಕುಮಾರ್ ನಿಲಯಪಾಲಕರು ಮೆದಿಕಿನಾಳ, ರವಿ ಚಿಗರಿ ಕಾಂಗ್ರೇಸ್ ಮುಖಂಡರು ಮಾತನಾಡಿದರು.ಮಧುಮತಿ ಶಿಕ್ಷಕಿ ಕಾರ್ಯಕ್ರಮಕ್ಕೆ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಮಣ್ಣ ಹರ್ವಾಪುರ,ಶಾಲಾ ಕಟ್ಟಡದ ಭೂ ದಾನಿಗಳಾದ ಅರ್ಜುನ್ ಸಿಂಗ್ ಮಾಲಿ ಪಾಟೀಲ್,ರಾಮಪ್ಪ ಚೌತ್ರಿ ಮಾಜಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಈರಪ್ಪ ಚೌದ್ರಿ ಕುರುಬ ಸಮಾಜದ ಮುಖಂಡರು,ಮಹಾಂತೇಶ್ ಮಸ್ಕಿ ಗ್ರಾಮ ಲೆಕ್ಕಾಧಿಕಾರಿ,ಪತ್ರಕರ್ತರಾದ ಗ್ಯಾನಪ್ಪ ದೊಡ್ಡಮನಿ,ಪ್ರಭಾರಿ ಮುಖ್ಯ ಗುರುಗಳಾದ ಶ್ರೀಕಾಂತಮ್ಮ,ಮಧುಮತಿ ಶಿಕ್ಷಕಿ,ಮಲ್ಲಮ್ಮ, ಕಲಾವತಿ, ಪವಿತ್ರಾ, ಶಿವಾನಂದ, ಕಮಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ