"ರೈತರಿಗೆ ವಕ್ಫ್ ನೀಡಿರುವ ನೋಟೀಸ್‌ಗಳನ್ನು ವಾಪಸ್ಸು ಪಡೆಯಲು ಸಿ.ಎಂ. ಸಿದ್ದರಾಮಯ್ಯ ಸೂಚಿನೆ"

 

*ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಎಬಿಡಿಎಂಟ್ ಕಂಪನಿ ಇಂದ ಪರ್ಸೆಂಟ್ ಕಮಿಷನ್ ದಂದೆ.... ಮಾಜಿ ಶಾಸಕ ಭೀಮನಾಯ್ಕ ಆರೋಪ*

"ಕೆ.ಎಂ.ಎಫ್.ನ ಘಟಕವೊಂದು 21 ರಂದು ದೆಹಲಿಯಲ್ಲಿ ಚಾಲನೆ"


ಕೊಟ್ಟೂರು: ಪಟ್ಟಣದಲ್ಲಿ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಸೋಮವಾರ ಆಗಮಿಸಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಎಸ್ ಭೀಮನಾಯ್ಕ್ ಅವರು ಮಾತನಾಡಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸರ್ಕಾರಕ್ಕೆ ಕೊಟ್ಟಂತಹ ಅನುದಾನಗಳನ್ನು ಈಗ ಶಾಸಕ ನೇಮಿರಾಜ್ ನಾಯ್ಕ ಅವರು ರಾಜ್ಯ ಸರ್ಕಾರಕ್ಕೆ ಗುತ್ತಿಗೆ ನೀಡಿ ಆ ಕಂಪನಿಯಿಂದ ಶೇ.60ರಷ್ಟು ಕಮಿಷನ್ ಕೇಳಿದರು. ಕ್ಷೇತ್ರದ ತುಂಬೆಲ್ಲ ಕಳಪೆ ಮಟ್ಟದ ಕಾಮಗಾರಿಗಳನ್ನು ನಾನು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ ಅಂತಹ ಕಂಪನಿಗಳಿಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ.

ಹಾಗೂ ನನ್ನ 10 ವರ್ಷಗಳ ಕಾಮಗಾರಿಗಳಿಗೆ ಅನುದಾನ ತಂದು ಕಾರ್ಯರೂಪಕ್ಕೆ ಬರುವಂತೆ ಶ್ರಮಪಟ್ಟಿದ್ದೇನೆ.

ಕಮಿಷನ್ ದಂಧೆ ಹಾಗೂ ಈ ಕ್ಷೇತ್ರದಲ್ಲಿ ಕಳಪೆಯಾಗಿ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಶಾಸಕರ ಆಪ್ತ ಸಹಾಯಕರು ಹಾಗೂ ಅವರೇ ಅವರೇ ಕ್ಷೇತ್ರದಲ್ಲಿ ಪ್ರತಿಯೊಂದು ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.ಇವರ ಜೈಲಿಗೆ ಕಳಿಸಲು ಪುರಾವೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಗುಡಿಗಿದರು.


ಸೊಂಡೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ  ಅನ್ನಪೂರ್ಣ ತುಕರಾಂ ಅವರು 25, ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದೆ .ನಮ್ಮ ಮುಖ್ಯಮಂತ್ರಿಗಳು ಐದು ವರ್ಷಗಳ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯನವರು ಹಾಗೂ ಐದು ವರ್ಷಗಳ ಪೂರ್ಣ ಅವಧಿಗೆ ಐದು ಉಚಿತ ಯೋಜನೆಗಳನ್ನು ಸಹ ಸಂಪೂರ್ಣಗೊಳಿಸಲಾಗಿದೆ.

ಸರ್ಕಾರವನ್ನು ಬೀಳಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಬಿಜೆಪಿಯವರು ನಮ್ಮ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ನೋಡಿ ಅವರಿಗೆ ಹೊಟ್ಟೆ ಉರಿ ಬಿಜೆಪಿಯವರು ಅವರ ಆಡಳಿತ ಇದ್ದಾಗ ಯಾವ ರೈತರಿಗೆ ಹಾಗೂ ರಾಜ್ಯದ ಜನತೆಗೆ ಅವರ ಕೊಡುಗೆ ಏನು ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಮ್ಮ ರಾಜ್ಯದ ಜನತೆಗೆ ಮನೆ ಬಾಗಿಲಿಗೆ ಯೋಜನೆಗಳನ್ನು ನೀಡುತ್ತೇವೆ. 


ಸರ್ಕಾರದ ಪಂಚ ಗ್ಯಾರಂಟಿಗಳು ಮುಂದುವರಿಯುವುದು ಖಚಿತ ಇದಕ್ಕೆ ವಿರೋಧ ಪಕ್ಷಗಳು ಯಾವುದೇ ಷಡ್ಯಂತ್ರ ನಡೆಸಿದರೂ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.ಎಂದು ಮಾಜಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಎಸ್ ಭೀಮ್ ನಾಯಕ್ ಈ ಸಂದರ್ಭದಲ್ಲಿ ಹೇಳಿದರು.

ರೈತರ ಪಾಣಿಗಳಲ್ಲಿ ವಕ್ಫ್ ಬೋರ್ಡ್ ಎಂದು ಬಂದಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು ರೈತರಿಗೆ ವಕ್ಫ್ ನೀಡಿರುವ ನೋಟೀಸ್‌ಗಳನ್ನು ವಾಪಸ್ಸು ಪಡೆಯಲು ಸಿ.ಎಂ. ಸಿದ್ದರಾಮಯ್ಯ ಸೂಚಿಸಿದ್ದಾರೆ.

ಪಡಿತರ ಚೀಟಿ ರದ್ದಾಗಿರುವುದಕ್ಕೆ ಮೂಲಕಾರಣ ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರದ ಖಜಾನೆಯಲ್ಲಿ ಹಣ ಕಾಲಿ ಆಗಿಲ್ಲ ಆಹಾರ ಇಲಾಖೆಯಿಂದ ತಾಂತ್ರಿಕ ದೋಷ ಆಗಿರಬಹುದು ಇದನ್ನು ಮಾನ್ಯ ಮುಖ್ಯಮಂತ್ರಿ ಗಮನಕ್ಕೆ ತಂದು ಸರಿಪಡಿಸಲು ತಿಳಿಸುತ್ತೇನೆ.

ಕರ್ನಾಟಕದ ಕೆ.ಎಂ.ಎಫ್.ನ ಘಟಕವೊಂದು ಶುಕ್ರವಾರ ಆರಂಭವಾಗಲಿದೆ,  ಕೆಎಂಎಫ್ ನಿಂದ ದೆಹಲಿಗೆ 3 ಲಕ್ಷ ಲೀಟರ್ ಹಾಲು ಪೂರೈಕೆ ಹಾಗೂ ಇನ್ನೀತರೆ ರವಾನಿಸಲು ಒಪ್ಪಂದವಾಗಿದೆ . ಶೀಘ್ರವೇ ಕೆ.ಎಂ.ಎಫ್. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಅವರಿಂದ 21 ರಂದು ದೆಹಲಿಯಲ್ಲಿ ಆಗಲಿದೆ .ಕೆಎಂಎಫ್ ಘಟಕದ ಅಧ್ಯಕ್ಷ ಭೀಮಾ ನಾಯಕ್ ಅವರ ಅವಧಿಯಲ್ಲಿ ನಮ್ಮ ಹಗರಿ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಬಿಡಿಸಿ ಬ್ಯಾಂಕ್ ಉಪಾಧ್ಯಕ್ಷರಾದ ದ್ವಾರಕೀಶ್. ಎಪಿಎಂಸಿ ಅಧ್ಯಕ್ಷರಾದ ನಂಜಪ್ಪ.ಶಿವಣ್ಣ. ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಶಿರಿಬಿ ಕೊಟ್ರೇಶ್ ,ಗೂಳಿ ಮಲ್ಲಿಕಾರ್ಜುನ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ,ಬದ್ದಿ ಮರಿಸ್ವಾಮಿ. ಎಂ ಶ್ರೀನಿವಾಸ್, ರಾಂಪುರ ಬರ್ಮಣ್ಣ. ತೋಟದ ರಾಮಣ್ಣ.ಪ. ಪಂ. ಸದಸ್ಯ ಶಫೀ. ಇನ್ನು ಅನೇಕ ಕಾಂಗ್ರೆಸ್ ಪ್ರಮುಖರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ