ತಾಲೂಕು ಆಡಳಿತದಿಂದ ಕಾಟಾಚಾರಕ್ಕೆ ನಡೆದ ಕನ್ನಡ ರಾಜ್ಯೋತ್ಸವ
*ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವಕ್ಕೆ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು,ಇನ್ನು ಅನೇಕ ಅಧಿಕಾರಿಗಳು ಬಾರದೇ ಇರುವುದು ಗಮನ ಸೆಳೆಯಿತು.*
ಕೊಟ್ಟೂರು : ಕನ್ನಡ ಭಾಷೆ ನೆಲ ಜಲ ಪರಂಪರೆ ಸಂಸ್ಕೃತಿ ಇತಿಹಾಸವನ್ನು ಯುವ ಪೀಳಿಗೆ ತಿಳಿಸುವ ಕೆಲಸ ನಡೆಯಬೇಕಿದೆ ಎಂದು ಕನ್ನಡ ಉಪನ್ಯಾಸಕ ಅಂಜಿನಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಗಣ್ಯ ಮಾನ್ಯರಿಂದ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ರಾಜ್ಯ ರೈತ ಸಂಘದ ಮುಖಂಡರುಗಳನ್ನು ಹಾಗೂ ಕೆಲ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ನಿರ್ಲಕ್ಷಿಸಿ ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮೂರ್ನಾಲ್ಕು ವರ್ಷಗಳಿಂದ ಪ್ರತಿ ವರ್ಷ ಇವರನ್ನೊಬ್ಬನನ್ನು ಬಿಟ್ಟರೆ ಮತ್ತೆ ಯಾರು ಇಲ್ಲದಂತೆ ತಾಲೂಕು ಆಡಳಿತ ಇವರನ್ನು ಕರೆತಂದು ಉಪನ್ಯಾಸ ನಡೆಯುತ್ತಿದ್ದಾರೆ
ಕನ್ನಡದ ನೆಲದ ಬಗ್ಗೆ ಉಪನ್ಯಾಸ ನೀಡಲು ಸಾವಿರಾರು ಯುವ ಪೀಳಿಗೆಗಳು ಇದ್ದಾರೆ ಅಂಥವರನ್ನು ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಉತ್ತಮವಾದ ಉಪನ್ಯಾಸವನ್ನು ನೀಡಬಹುದಾಗಿತ್ತು.
ಉಪನ್ಯಾಸ ನೀಡಲು ಬಂದಿದ್ದ ಕನ್ನಡ ಉಪನ್ಯಾಸಕರಾದ ಅಂಜಿನಪ್ಪ ರವರು ಮಾತನಾಡಿ ಕನ್ನಡ ಭಾಷೆಗೆ ಸುಮಾರು ೨೦೦೦ ವರ್ಷಗಳ ಇತಿಹಾಸ ಹೊಂದಿದೆ. ಹಿಂದಿನ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಕಂಗೊಳಿಸುವAತೆ ಮಾಡಿದ್ದಾರೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಎಂಟಕ್ಕೆ ಜ್ಞಾನಪೀಠ ಪ್ರಶಸ್ತಿ ನಿಲ್ಲದೆ ಮುಂದುವರೆಯಬೇಕು. ಕರ್ನಾಟಕ ರಾಜ್ಯದ ಕೆಲವು ಪ್ರದೇಶಗಳು ಕೈ ತಪ್ಪಿದೆ ಹೋಗಿದೆ ಮಹಾರಾಷ್ಟ ರಾಜ್ಯದ ಅರ್ಧ ಭಾಗವು ಕರ್ನಾಟಕ ಪ್ರದೇಶಗಳಾಗಿದೆ ಎಂದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಭಾರತದವರು ಅತಿ ಹೆಚ್ಚು ಇದ್ದು ಸ್ವಲ್ಪ ದಿನದಲ್ಲೇ ಬೆಂಗಳೂರಿನಲ್ಲಿ ಕನ್ನಡಿಗರು ಬೆರಳು ಎಣಿಕೆ ಅಷ್ಟೇ ಜನರು ಸಿಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನು ನಮ್ಮ ನೆಲ, ಭಾಷೆ, ಜಲ ಸಂಸ್ಕೃತಿ ಧಕ್ಕೆ ಬಂದರೆ ಸ್ವಾಭಿಮಾನದಿಂದ ಹೋರಾಡೋಣ ನಮ್ಮ ಕನ್ನಡ ಭಾಷೆ ಬಗ್ಗೆ ಯುವ ಪೀಳಿಗೆ ಯುವಕರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಇವರ ಉಪನ್ಯಾಸ ಮುಗಿಯುವುದರೊಳಗೆ ಬಂದಂತ ವಿದ್ಯಾರ್ಥಿಗಳು ಕೆಲ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದ ವೈಖರ್ಯವನ್ನು ನೋಡಿ ಅಲ್ಲಿಂದ ಹೊರಟು ಹೋದ ದೃಶ್ಯಗಳು ಕಂಡುಬಂದವು.
ಇದೇ ಸಂದರ್ಭದಲ್ಲಿ ವಿಶೇಷ ಸಾಧಕರಿಗೆ ಸನ್ಮಾನಿಸಲಾಯಿತು. ತುಂಬುರಗುದ್ದಿ ಚಾರ್ಟರಿಬಲ್ ಟ್ರಸ್ಟ್ ಆಸ್ಪತ್ರೆ ಗಂಗಮ್ಮ ಅನೇಕ ರೀತಿಯಲ್ಲಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು, ಪುಸ್ತಕ,೧೦ ವರ್ಷಗಳಿಂದ ದಾನ ಮಾಡುತ್ತಾ ಬಂದಿದ್ದಾರೆ. ಹೀಗೆ ನಾನಾ ರೀತಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಜಾರ್ಕಣ್ಣಲ್ಲಿ ನಡೆದ ಖೋ ಖೋ ಕ್ರೀಡೆಯಲ್ಲಿ ಗುರುದೇವ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಪ್ರತೀಕ್ಷ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಕೊಟ್ಟೂರಿಗೆ ಹೆಮ್ಮೆಯನ್ನು ತಂದಿದ್ದಾಳೆ ಹಾಗೂ ಚಿತ್ರ ಲಿಂಗಮ್ಮ ಅವರು ಜಾನಪದ ಹಾಡುಗಳನ್ನು ಶಾಲೆಯ ಮಕ್ಕಳಿಗೆ ರಾಗವಾಗಿ ಹೇಳುತ್ತಾ, ಪರಿಸರ ಬಗ್ಗೆ ಮಕ್ಕಳಲ್ಲಿ ವಿಶಿಷ್ಟ ರೀತಿ ಮೂಲಕ ಜಾಗೃತಿ ಮೂಡಿಸಿದ್ದಾಳೆ ಇಂತಹ ಸಾಧನೆ ಮಾಡಿದ ಮೂವರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದ್ವಾರಬಾಗಲು ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು. ದಾರಿ ಉದ್ದಕ್ಕೂ ಮಕ್ಕಳು ಕನ್ನಡ ಜಯ ಘೋಷ ಬಿತ್ತಿ ಪತ್ರಗಳ ಕೂಗುತ್ತಾ ಜನರಿಗೆ ಕನ್ನಡ ರಾಜ್ಯೋತ್ಸವ ಬಗ್ಗೆ ಜಾಗೃತಿ ಮೂಡಿಸಿದರು. ವಿಶೇಷ ಎಂದರೆ ಗಂಗೋತ್ರಿ ಶಾಲೆ ನಾರಾಯಣ ತಮ್ಮ ಶಾಲೆಯ ಮಕ್ಕಳೊಂದಿಗೆ ಭುವನೇಶ್ವರ ಗೀತೆಗಳನ್ನು ಸೌಂಡಸಿಸ್ಟಮ್ ನಲ್ಲಿ ಜನರಿಗೆ ಕೇಳಿಸುತ್ತ ಮೆರವಣಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಅಮರೇಶ್ ಜಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಮನಿ ಕೊಟ್ರೇಶ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಿ.ಸಿದ್ದಯ್ಯ ಮಾತನಾಡಿದರು.
ತಾ. ಪಂ. ಇ ಓ ಬಾಳಪ್ಪನವರ ಆನಂದ್ ಕುಮಾರ್, ಪ. ಪಂ ಮುಖ್ಯಧಿಕಾರಿ ಎ ನಸ್ರುಲ್ಲಾ, ಪ. ಪ. ಪಂ. ಅಧ್ಯಕ್ಷ ರು ಬಿ.ರೇಖಾ ರಮೇಶ್, ಎಪಿಎಂಸಿ ಕಾರ್ಯದರ್ಶಿ ವೀರಣ್ಣ, ಪಟ್ಟಣ ಪಂ. ಸದಸ್ಯ ಕೆಂಗಪ್ಪ, ಇಸಿಓ ಲಿಂಗಪ್ಪ, ಅಣಜಿ ಸಿದ್ದಲಿಂಗಪ್ಪ ಎನ್ ಸಿ ಸಿ ವಿದ್ಯಾರ್ಥಿಗಳು ವಿವಿಧ ಶಾಲೆಯ ಮಕ್ಕಳು ಶಿಕ್ಷಕರು ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ.ಜಗದೀಶ್ ಚಂದ್ರ ಭೋಸ್ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಕೊಟ್ಟೂರು ಇವರು ಸ್ವಾಗತಿಸಿ ನಿರೂಪಿಸಿದರು.
ಕೋಟ್ ೦೧
ಇಲ್ಲಿನ ತಾಲೂಕು ಆಡಳಿತವು ಕನ್ನಡ ರಾಜ್ಯೋತ್ಸವ ದಿನಾಚರಣೆ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ತನ್ನ ಇಚ್ಛೆ ಬಂದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆ. ನನಗೆ ಅಗೌರವ ತೋರುವ ಖಂಡಿಸುತ್ತೇನೆ.ಸಂಘ ಸಂಸ್ಥೆಯ ಮುಖಂಡರನ್ನು ಕರೆಯದೆ ಸರ್ವಾಧಿಕಾರಿಯಂತೆ ನಡೆಸುತ್ತಿದ್ದಾರೆ ಈಗ ಮಾಡಿದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತೇನೆ- ಎನ್. ಭರಮಣ್ಣ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೊಟ್ಟೂರು.
ಕೋಟ್ ೦೨
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರೇ ಪದಾಧಿಕರಿಗೆ ಸರಿಯಾದ ಮಾಹಿತಿ ನೀಡದೆ ತಾಲೂಕು ಆಡಳಿತವು ಸರ್ವಧಿಕಾರಿಯಂತೆ ವರ್ತಿಸುತ್ತಿದ್ದಾರೆ.ರಾಷ್ಟ್ರೀಯ ಹಬ್ಬ ಆಚರಣೆಯ ಅಧ್ಯಕ್ಷರಾಗಿರುವ ಇವರ ಕಾರ್ಯಕ್ರಮಗಳಲ್ಲಿ ರಾಜಕೀಯ ದುರುದ್ದೇಶ ಮತ್ತು ಇವರ ಹಿಂಬಾಲಕರ ಮಾಹಿತಿ ಮೇರೆಗೆ ಆಚರಣೆಗಳನ್ನು ಮಾಡುತ್ತಿದ್ದಾರೆ. ಹೀಗೆ ಮುಂದುವರೆದರೆ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು. ಈ ಬಗ್ಗೆ ಎಂದು ಎಚ್ಚರಿಸುತ್ತೇನೆ - ಎಂ ಶ್ರೀನಿವಾಸ್. ಕರವೇ ತಾಲೂಕು ಅಧ್ಯಕ್ಷರು ಕೊಟ್ಟೂರು.
ಕೊಟ್ -3
ಸ್ಟೇಜ್ ಮೇಲಿ ರುವಂತಹ ಗಣ್ಯ ಮಾನ್ಯರು, ಅಧಿಕಾರಿಗಳು ಅವರು ಪಾದರಕ್ಷೆಗಳನ್ನು ಮೆಟ್ಟು ಕೊಂಡೆ ಸ್ಟೇಜ್ ಮೇಲೆ ಇರುವುದು ಕಂಡುಬಂದಿತು ಕನ್ನಡ ತಾಯಿ ಭುವನೇಶ್ವರಿ ದೇವಿಯ ಸಣ್ಣದಾದ ಭಾವಚಿತ್ರವನ್ನು ಕಾರ್ಯಕ್ರಮದ ಸ್ಟೇಜ್ ಕೆಳಭಾಗದಲ್ಲಿ ಇಟ್ಟು ಅವಮಾನ ಪಡಿಸಿದ್ದಾರೆ. ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟೂರಿನಲ್ಲಿ ನಾನು ಕಂಡತೆ ಅನೇಕ ಉಪನ್ಯಾಸಕರಿದ್ದರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಕು.ವಿ ರವರಿದ್ದಾರೆ, ಹಲವು ಯುವ ಕವಿಗಳು, ಬರಹ್ಅಋಉ, ಪತ್ರಕರ್ತರು, ವಾಗ್ಮಿಗಳಿದ್ದಾರೆ, ಅಂಥವರನ್ನು ಗುರುತಿಸಿ ಸಾರ್ಥಕ ಕಾರ್ಯಕ್ರಮ ತಾಲೂಕು ಆಡಳಿ ಮಾಡಬೇಕು. ಕಾಟಾಚಾರಕ್ಕೆ ಮಾಡುವ ಕಾರ್ಯಕ್ರಮ ಕನ್ನಡದ ಹಬ್ಬ ಆಗದಿರಲಿ ಕನ್ನಡಭಿಮಾನಿ
ಪ್ರತ್ಯುತ್ತರಅಳಿಸಿ