ನಾರಾಯಣಪುರ ಬಲದಂಡೆ ಕಾಲುವೆ ತುಂಬಿ ಹರಿಯುತ್ತಿದ್ದರು.45ರ ವಿತರಣಾ ನಾಲೆಸಂಖ್ಯೆ8(ಎ)ಗೇಟ್ ತೆರೆಸಿ ರೈತರ ಜಮೀನಿಗೆ ನೀರು ಹರಿಸಿ.

 

ಲಿಂಗಸಗೂರು:ಹಟ್ಟಿ ಚಿನ್ನದ ಗಣಿ ಸಮೀಪದ ನಾರಾಯಣಪುರ ಬಲದಂಡೆ ಕಾಲುವೆಗೆ ಹೊಂದಿಕೊಂಡಿರುವ ತಾಲೂಕಿನ ಪರಿಶಿಷ್ಟ ಜಾತಿ.ಪರಿಶಿಷ್ಟ ಪಂಗಡ.. ಬುಡುಕಟ್ಟು ಸಮುದಾಯದ.ಅತಿ ಹೆಚ್ಚು ಜನ ವಾಸ ಮಾಡುವ ಗೌಡೂರು. ಗೌಡರು ತಾಂಡ. ಹೊಸಗುಡ್ಡ.ಹೊಸಗುಡ್ಡ ತಾಂಡ.ಪೂಜಾರಿ ತಾಂಡ.ಬೆಂಚಲ ದೊಡ್ಡಿ. ಬೆಂಚಿನ ದೊಡ್ಡಿ ತಾಂಡಗಳಿಗೆ.ಕೃಷ್ಣಭಾಗ್ಯ ಜಲ ನಿಗಮದಿಂದ ನಾರಾಯಣಪುರ ಬಲದಂಡೆ ಮುಖ್ಯನಾಲೆಯ 45ಕಿ.ಮೀ ಗೌಡೂರು ಗ್ರಾಮದ ಬಳಿರುವ ವಿತರಣಾ ನಾಲೆ 8(ಎ)ಯನ್ನು ನಿರ್ಮಿಸಿ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ.ಆದರೆ ವಿತರಣಾ ನಾಲೆ ನಿರ್ಮಾಣಗೊಂಡು ಈಗಾಗಲೇ 14 ವರ್ಷಗಳು ಆಗಿದೆ. ವಿತರಣಾ ನಾಲೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ಭೂಸಂತ್ರಸ್ತರಿಗೆ. ಪರಿಹಾರ ನೀಡುವಂತೆ ಸಂಬಂಧಿಸಿದ ಕೃಷ್ಣಭಾಗ್ಯ ಜನ ನಿಗಮದ ರೋಡಲ ಬಂಡ(ಯುಕೆಪಿ) ಹುಣಸಗಿ ತಾಲೂಕಿನ ನಾರಾಯಣಪುರ. ದೇವದುರ್ಗ ತಾಲೂಕಿನ ಚಿಕ್ಕ ಹೂನಕುಣಿ. ಅಮರಾವತಿ. ರಾಯಚೂರು ನಗರ ಹಾಗೂ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಕಚೇರಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನವಿ ಪತ್ರ ಕೊಟ್ಟರು ಇದುವರೆಗೂ ನ್ಯಾಯ ಪೈಸೆ ಪರಿಹಾರ ನೀಡಿಲ್ಲ. ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆಗೆ ರೋಷಿ ಹೋದ ಭೂಮಿ ಕಳೆದುಕೊಂಡ ರೈತರು ವಿತರಣಾ ನಾಲೆ ಮೂಲಕ ಸಮತಟ್ಟಾದ ಪ್ರದೇಶಕ್ಕೆ ನೀರು ಹರಿಸಲು ಅವಕಾಶ ನೀಡುತ್ತಿಲ್ಲ.ಅಚ್ಚು ಕಟ್ಟು ಪ್ರದೇಶದಲ್ಲಿ ಬೆಳೆಯುವ.ಭತ್ತ.ಮಣಸಿನ ಕಾಯಿ.ಹತ್ತಿ. ಸಜ್ಜಿ.ಸೂರ್ಯಪಾನ. ಶೇಂಗಾ ಬಿತ್ತನೆ ಮಾಡಿದ ಬೆಳೆಗಳು ನೀರು ಕಾಣದೆ ಒಣಗಿ ಹೋಗುತ್ತಿವೆ.

18-10-2024 ರಂದು 45ರ ವಿತರಣಾ ನಾಲೆ ಸಂಖ್ಯೆ8(ಎ)ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪೂಜೆ ಮಾಡಿ ರೈತರ ಹೊಲಗಳಿಗೆ ನೀರು ಹರಿಸಿ ಹೋದರು. ನಂತರ ಕೆಲವೇ ದಿನಗಳಲ್ಲಿ.ಭೂಮಿ ಕಳೆದುಕೊಂಡ ರೈತರು ನಾಲೆ ಗೇಟನ್ನು ಬಂದು ಮಾಡಿದ ಕಾರಣ ಸುಮಾರು ಏಳು ಹಳ್ಳಿಗಳ ಜಮೀನಿನಲ್ಲಿ ಬೆಳೆದಂತಹ ಬೆಳೆಗೆ ನೀರು ಕಾಣದೆ ಬೆಳೆ ಬಾಡಿ ಹೋಗುವ ಹಂತದಲ್ಲಿ ಇವೆ.ರೈತರು ಸಾಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಗೊಬ್ಬರ ಹಾಗೂ ಕ್ರಿಮಿನಾಶಕ ಔಷಧಿಗಳನ್ನು ತಂದು ಬಿತ್ತಿದಂತ ಬೀಜಕ್ಕೆ ನೀರಿಲ್ಲದಿದ್ದರೆ ಆ ದೇವರೇ ಗತಿ? ಆದುದರಿಂದ ನಾರಾಯಣಪುರ ಬಲದಂಡೆ ಕಾಲುವೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರೈತರ ಜಮೀನುಗಳಿಗೆ ನೀರು ಬಿಡುವ ವ್ಯವಸ್ಥೆ ಮಾಡಿ. ಇಲ್ಲದೆ ಹೋದರೆ ರೈತರಿಗೆ ಆಗುವ ಅನಾಹುತಕ್ಕೆ ನಾರಾಯಣಪುರ ಬಲದಂಡೆ ಕಾಲುವೆ ಅಧಿಕಾರಿಗಳೇ ಜವಾಬ್ದಾರರು.ಎಂದು ಗೌಡೂರು ತಾಂಡದ ಪ್ರಮುಖರಾದ ಪೀರಪ್ಪ ನೀಲಪ್ಪ.ಯಾಕಪ್ಪ ಗಂಗಪ್ಪ.ಹಂಪಣ್ಣ ಗೇಮಣ್ಣ.ತಿಪ್ಪ ನಾಯಕ್ ಶಿವಪ್ಪ ನಾಯಕ್. ಗೋಪಾಲ್ ಭೀಮಣ್ಣ ಕಾರಬಾರಿ.ಸೋಮಾಲಿ ಬಾಯಿ.ಧರ್ಮಲಿಂಬಣ್ಣ. ರೇಣುಕಮ್ಮ. ರೂಪಾಲಿಬಾಯಿ. ಸುರೇಶ್.ಬಿಕಪ್ಪ. ಹಂಪಣ್ಣ.ಮಲ್ಲೇಶ್.ರವಿ ಚಂದ್ರು. ಇನ್ನು ಅನೇಕರು ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ