ಜೀವನಶೈಲಿಯನ್ನು ಬದಲಾಯಿಸಿ ಸಾವಯವ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ : ತಹಸೀಲ್ದಾರ್ ಡಾ:ಮಲ್ಲಪ್ಪ. ಕೆ.ಯರಗೋಳ ಕರೆ
ಮಸ್ಕಿ : ಪಟ್ಟಣದ ಅಮರ ಪ್ರೇಮ ಕಾನ್ವೆಂಟ್ ನಲ್ಲಿ ಬಳ್ಳಾರಿ ಧರ್ಮ ಪ್ರಾಂತ್ಯ ಅಭಿವೃದ್ಧಿ ಸಂಸ್ಥೆಯ ಸಹಕಾರದಲ್ಲಿ ಉಜ್ಜೀವನ ಯೋಜನೆಯ ಸಾವಯವ ಕೃಷಿಯ ಕುರಿತು ಇಲಾಖೆಗಳ ಅಧಿಕಾರಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಜೀವನ ಶೈಲಿಯನ್ನು ಬದಲಾಯಿಸಿ ಸಾವಯ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ತಹಶೀಲ್ದಾರರಾದ ಡಾ : ಮಲ್ಲಪ್ಪ.ಕೆ.ಯರಗೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅಮರೇಗೌಡ ತಾಲೂಕ ಪಶು ವೈದ್ಯಾಧಿಕಾರಿಗಳು ಮಸ್ಕಿ ಇವರು ಪಶು ಇಲಾಖೆಯಿಂದ ದೊರೆಯುವ ಸೌಕರ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾದ ಶ್ರೀ ಮಲ್ಲಪ್ಪ ಕೆ ವ್ಯವಸ್ಥಾಪಕರು ನೀರಾವರಿಯಲಕ್ಕೆ ಮಸ್ಕಿ ಇವರು ಸಾವಯವ ಕೃಷಿಯ ಮಹತ್ವದ ಕುರಿತು ಮಾತನಾಡಿದರು. ಅತಿಥಿಗಳಾದ ಶ್ರೀ ಅರಳಪ್ಪ ಹಾಗೂ ಯೋಜನಾ ಸಂಯೋಜಕರಾದ ಶಾಂತಪ್ಪ ಸೋಮನಮರಡಿ ಇವರು ಸಾವಯವ ಕೃಷಿಯ ಕುರಿತು ಮಾಹಿತಿಯನ್ನು ತಿಳಿಸಿದರು.
ಈ ಕಾರ್ಯಗಾರದಲ್ಲಿ ನೂರಾರು ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಅಮರ ಪ್ರೇಮ ಕಾನ್ವೆಂಟಿನ ಸಿಸ್ಟರ್ ದೀಪ, ಶ್ರೀ ಮುದುಕಪ್ಪ ಪರಾಪೂರ, ವಿಜಯಕುಮಾರ್ ಕಾಟಿಗಲ್, ಹನುಮಂತ ಬೆನಕನಾಳ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ