ಬಹು ಭಾರತೀಯರಿಗೆ ವೇದಗಳ ಕುರಿತು ಯಾಕೆ ತಿಳಿದಿಲ್ಲ!?
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ . ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು . ಅದರಾಚೆ ಅಂಬೇಡ್ಕರ್ ಇದ್ದಾರೆ . ಅವರೊಬ್ಬ ಆರ್ಥಿಕ ತಜ್ಞ , ಸಾಮಾಜಿಕ ಚಿಂತಕ , ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ . ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು . ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ . ಓದಿ ಇತರರಿಗೆ ಹಂಚಿ. ವೇದಗಳಿಂದಲೇ ಇಂದಿನ ವಿಜ್ಞಾನ ಬೆಳೆದಿದ್ದು, ವೇದಗಳಲ್ಲಿ ಎಲ್ಲವೂ ಇದೆ, ವೇದ ದೇವವಾಣಿ ಆಗಿದೆ, ವೇದವೇ ಎಲ್ಲಕ್ಕೂ ಮೂಲ....! ಹೀಗೆ ವೇದಗಳ ಕುರಿತು ತುಂಬಾ ಪಂಡಿತರು ಮಾತನಾಡುತ್ತಾರೆ. ಅದರಲ್ಲೂ ಬ್ರಾಹ್ಮಣರು, ಕಟ್ಟರ್ ಹಿಂದುವಾದಿಗಳು ಇದರ ವಿಷಯದಲ್ಲಿ ಪುಂಖಾನುಪುಂಖ ಭಾಷಣ ಬಿಗಿಯುತ್ತಾರೆ. ಹಾಗಿದ್ದರೆ ಯಾಕೆ ಭಾರತೀಯರಿಗೆ ವೇದದ ಕುರಿತು ಅರಿವಿಲ್ಲಎಂಬ ಪ್ರಶ್ನೆ ಸಹಜ ಅಲ್ಲವೇ? ಇದಕ್ಕೆ ಉತ್ತರವನ್ನು ಅಂಬೇಡ್ಕರ್ ಹೇಳುತ್ತಾರೆ. ಅಂಬೇಡ್ಕರ್ ಹೇಳುವ ಹಾಗೆ ಹಿಂದೂ ಧಾರ್ಮ ಶಾಸ್ತ್ರಗಳು, ಮನು ಸ್ಮೃತಿ ಮತ್ತು ಗೌತಮ ಮುನಿಗಳ ಬರಹದ ಅನ್ವಯ ವೇಗಳಗ ಅಧ್ಯಯನ ಮತ್ತು ಭೋಧನೆಯನ್ನು ಹಿಂದೆ ಬರೀ ಬ್ರಾಹ್ಮಣರೇ ಮಾಡಬೇಕಿತ್ತು. ಕಲ