ನಮ್ಮ ದೇಶದಲ್ಲಿರುವ ಮುಸ್ಲಿಮರು ದಲಿತರೆನ್ನಲು ಸಾಕ್ಷ್ಯ
ಅಂಬೇಡ್ಕರ್ ಭಾಷಣ ಬರಹದಲ್ಲಿದೆ ಇಂತಹದ್ದೊಂದು ರೋಚಕ ಸತ್ಯ
ನಮ್ಮ ದೇಶದಲ್ಲಿರುವ ಮುಸಲ್ಮಾನರು ದೂರದ ಮರಳುಗಾಡಿನಿಂದ ಬಂದು ನೆಲೆಸಿದವರಲ್ಲ. ಇಲ್ಲೇ ಹುಟ್ಟಿ ಬೆಳೆದ ದಲಿತರು. ಬಲ ಪಂಥೀಯರು ಹೇಳುವಂತೆ ಈ ಮುಸಲ್ಮಾನರು ಯಾರದ್ದೋ ಭಯಕ್ಕೆ ಈಡಾಗಿ ಹಿಂದು ಧರ್ಮ ತೊರೆದವರಲ್ಲ. ಬದಲಿಗೆ ಹಿಂದು ಧರ್ಮದ ಅನಿಷ್ಟ ಆಚರಣೆಗಳನ್ನು, ಮೇಲು ಕೀಳು ಭಾವನೆಗಳಿಂದ ಸಿಡಿದೆದ್ದು ಇಸ್ಲಾಂ ಧರ್ಮ ಸ್ವೀಕರಿಸಿದರು ಎಂಬುದಕ್ಕೆ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳು ಸರಣಿಯ 22 ಸಂಪುಟದ ಪಿಡಿಎಫ್ ಪುಟ ಸಂಖ್ಯೆ 83ರಿಂದ 86ರವರೆಗೆ ಪ್ರಸ್ತಾಪ ಮಾಡಿರುವ ವಿಷಯಗಳಿಂದ ತಿಳಿಯಬಹುದಾಗಿದೆ.
ಅಂಬೇಡ್ಕರ್ ಅವರು ಪ್ರಸ್ತಾಪ ಮಾಡಿದ ಹಾಗೆ ವರಾಡ್(ಮಹಾರಾಷ್ಟ್ರ?)ನ ಜಳ್‌ಗಾಂವ್‌ನ ಐದು ಸಾವಿರ ಜನರು ಒಂದು ಪ್ರಕಟಣೆ ನೀಡಿ ಒಂದು ವೇಳೆ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ನಿವಾರಿಸದೇ ಹೋದರೆ 5 ಸಾವಿರ ಜನರು ಇಸ್ಲಾಂ ಧರ್ಮ ಸ್ವೀಕರಿಸುವುದಾಗಿ ಎಚ್ಚರಿಸಿದರು. ಪತ್ರಿಕೆಗಳಲ್ಲಿ ವಿಷಯ ಪ್ರಕಟ ಆಗುತ್ತಲೇ ಬ್ರಾಹ್ಮಣರು ನಿರ್ಲಕ್ಷ್ಯತನದಿಂದ ನೋಡಿದರು.
ಆದರೆ, ಈ ಮಹಾರ್ ಜನಾಂಗದವರು ದೃಢ ನಿರ್ಧಾರ ಮಾಡಿದ್ದರು. ಮಹಾರ್ ಜನರ ಈ ನಿರ್ಧಾರದ ದಾರಿ ತಪ್ಪಿಸಲು ಉನ್ನತ ಜಾತಿಯವರು ಮೊದಲು ನಿಮ್ಮಲ್ಲೇ ಇರುವ ಮೇಲು, ಕೀಳು ಭಾವನೆ ತೊರೆದು ಬನ್ನಿ ಆಗ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದರು. ತಕ್ಷಣ ಮಹಾರ್, ಮಾಂಗ್, ಚಾಂಭಾರ್, ಭಂಗಿಯೇ ಮುಂತಾದ ಎಲ್ಲರೂ ಒಟ್ಟಾಗಿ ಸಹಭೋಜನ ಮಾಡಿ ನಮ್ಮಲ್ಲಿ ಯಾವುದೇ ವಿಷಮತೆ ಇಲ್ಲ ಎಂದು ಸಾಬೀತುಮಾಡಿದರು. ಇದಕ್ಕೆ ಉನ್ನತ ಜಾತಿಯವರು ಸೊಪ್ಪು ಹಾಕಲಿಲ್ಲ. ಆಗ 8 ಜನ ಇಸ್ಲಾಂಗೆ ಮತಾಂತರ ಆಗಿಬಿಟ್ಟರು. ಆಗ ಉನ್ನತ ಜಾತಿಯವರಿಗೆ ಏಕಾಏಕಿ ಸಿಡಿಲು ಬಡಿದಂತೆ ಆಯಿತು.
ತಕ್ಷಣ ಈ ಮಹಾರ್ ಜನಾಂಗದ ನಾಯಕರನ್ನು ಕರೆಯಿಸಿ, ಮಾತುಕತೆ ನಡೆಸಿದರು. ಸಾರ್ವಜನಿಕ ಬಾವಿಗಳಲ್ಲಿನ ನೀರು ಸೇದಲು ಅವಕಾಶ ಮಾಡಿಕೊಟ್ಟರು. ವೀಳ್ಯ ನೀಡಲು ಸಮಾಜದ ಮುಖಂಡರನ್ನು ತಮ್ಮ ಮನೆಗೆ ಕರೆಯಿಸಿದರು.
ಒಂದು ವೇಳೆ ಇದೇ ರೀತಿ ಮತಾಂತರ ಆಗುತ್ತಾ ಹೋದರೆ ಮುಸ್ಲಿಂ ಬಾಹುಳ್ಯ ಹೆಚ್ಚಾಗಿ, ಹಿಂದೂಗಳ ಸಂಖ್ಯೆ ಇಳಿಕೆ ಆಗುತ್ತದೆ. ಇಂದು ದೇವಾಲಯಗಳ ಮೇಲೆ ದಾಳಿಮಾಡಿದಾಗ ಅದರ ರಕ್ಷಣೆಗೆ ಬಂದು ನಿಲ್ಲುವ ಇದೇ ಜನ ಮುಂದೆ ಮುಸ್ಲಿಮರ ಜೊತೆ ನಿಲ್ಲಲಿದ್ದಾರೆ ಎಂಬುದನ್ನು ಮನಗಂಡ ಶ್ರೇಷ್ಠ ಹಿಂದೂಗಳು ಅಸ್ಪೃಶ್ಯರ ಬಗ್ಗೆ ಕಾಳಜಿ ತೋರಲು ಆರಂಭಿಸಿದರು ಎಂಬುದನ್ನು ಅಂಬೇಡ್ಕರ್‌ರ ಬರಹ, ಭಾಷಣದ ಸಂಪುಟ 22ರಲ್ಲಿ ಇದೆ.
#ambedkar #ambedkarchintane #ambedkarkuritu #ambedkarbadukubaraha
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ