"ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯ"
12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ
ಕೊಟ್ಟೂರಿನಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬೆಂಗಳೂರು(ರಿ) ಕೊರಚ ಕೊರಮ ಕೊರವ ಸಮುದಾಯಗಳ ಒಕ್ಕೂಟ ರಾಜ್ಯ ಪದಾಧಿಕಾರಿ ಹಾಗೂ ತಾಲೂಕು ಅಧ್ಯಕ್ಷರ ವತಿಯಿಂದ ಸರಳವಾಗಿ ನುಲಿಯ ಚಂದಯ್ಯ ಜಯಂತಿ ಆಚರಣೆ
ಕೊಟ್ಟೂರು:ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯನ್ನು ಗುರುವಾರ ರಂದು ಬೆಳಿಗ್ಗೆ 11ಗಂಟೆಗೆ ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು.
ನಂತರ ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ರಾಜ್ಯದಲ್ಲಿ ಕೊರಮ, ಕೊರಚ ಕೊರವ ಸಮುದಾಯಕ್ಕೆ ಸೇರಿದ ಲಕ್ಷಾಂತರ ಮಂದಿ ಇದ್ದು, 12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಕಾಯಕ ನಿಷ್ಠೆಯನ್ನು ಸಾರಿದ ಮಹಿಮಾ ಪುರುಷ ಎಂದರು.
ಮೂಲತಃ ವಿಜಯಪುರ ಜಿಲ್ಲೆ ಹಿರೇಶಿವಣಗಿಯಲ್ಲಿ ಕ್ರಿ.ಶ.1107ರಲ್ಲಿ ಜನಿಸಿದ ನುಲಿಯ ಚಂದಯ್ಯ, ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಕ್ರಿ.ಶ.1160ರಲ್ಲಿ ಕಲ್ಯಾಣದ ಶಿವಾನುಭವ ಮಂಟಪಕ್ಕೆ ಸೇರಿದರು. ನಂತರ ಕಲ್ಯಾಣದಲ್ಲಾದ ರಾಜಕೀಯ ವಿಪ್ಲವದಿಂದ ತಮ್ಮ ವಚನಸಾಹಿತ್ಯದ ಕಟ್ಟನ್ನು ಹೆಗಲಿಕೆ ಕಟ್ಟಿಕೊಂಡು ಅಕ್ಕ ನಾಗಲಾಂಬಿಕೆ ಜತೆಗೆ ತರೀಕೆರೆ ಸಮೀಪದ ಎಣ್ಣೆಹೊಳೆ ಬಳಿ ಆಗಮಿಸಿದ್ದರು ಎಂದರು
ಎಣ್ಣೆ ಹೊಳೆಯಲ್ಲಿ ಕಾಯಕ-ದಾಸೋಹ ಮಾಡಿದ ಬಗ್ಗೆ ಈಗಲೂ ಐತಿಹ್ಯವಿದೆ. ಅಕ್ಕ ನಾಗಲಾಂಬಿಕೆ ಕಾಲವಾದ ನಂತರ ನಂದಿ ಕ್ಷೇತ್ರದಲ್ಲಿ ತಮ್ಮ ಬೆತ್ತ ಮತ್ತು ಜೋಳಿಗೆ ಇಟ್ಟು ಕಾಯಕ ದಾಸೋಹ ಮಾಡಿ ಹಲವು ವರ್ಷ ನೆಲೆ ನಿಂತಿದ್ದರು. ಎಂದು ಹಿನ್ನೆಲೆಯ ಬಗ್ಗೆ ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಜ್ಯ ಉಪಾಕಾರ್ಯದರ್ಶಿ ಕೆ ಕೊಟ್ರೇಶ್ ಅವರು ಮಾತನಾಡಿ ಹೇಳಿದರು.
ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ರಾಜ್ಯ ಉಪ ಕಾರ್ಯದರ್ಶಿ ಕೆ ಕೊಟ್ರೇಶ್ ಹಾಗೂ ಕೊಟ್ಟೂರು ತಾಲೂಕು ಅಧ್ಯಕ್ಷ ಮಂಜುನಾಥ್ ಭಜಂತ್ರಿ ,ತಾಲೂಕು ಸಂಘಟನಾ ಕಾರ್ಯದರ್ಶಿ, ಬೆಳ್ಳಿ ರಥದ ಸಿದ್ದಣ್ಣ, ಪರಶುರಾಮ್, ಗಜಪುರ ಅಜ್ಜಪ್ಪ, ಸುರೇಶ್ ಕವಾಡಿ, ದ್ಯಾಮಪ್ಪ,ಮತ್ತು ಸಮಾಜದ ಹಿರಿಯ ಮುಖಂಡರು ಯುವಕರು ಉಪಸ್ಥಿತರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ