ಉಜ್ಜನಿ ಸದ್ಧರ್ಮ ಪೀಠದಲ್ಲಿ ಸಂಸ್ಕೃತಿ ಸೌಹಾರ್ದತೆಗೆ ಪ್ರಾಮುಖ್ಯತೆ:ಜಿಲ್ಲಾಧಿಕಾರಿ ಎಂ.ಸಿ. ದಿವಾಕರ್
ನಂತರ ವಿಜಯನಗರ ಜಿಲ್ಲಾಧಿಕಾರಿ ಎಂ.ಸಿ. ದಿವಾಕರ್ ಅವರು ಮಾತನಾಡಿ ತನ್ನದೇ ಆದ ಸಂಸ್ಕೃತಿ ಸೌಹಾರ್ದತೆ ಬೆಳೆಸಿಕೊಂಡು ಬಂದಿರುವಂತಹ ಉಜ್ಜನಿ ಸದ್ಧರ್ಮ ಪೀಠದಲ್ಲಿ ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ.ಮತ್ತು ಯಾರೋ ಏನೊ ಅಂದರು ಎಂದು ಅದನ್ನು ಸ್ಟೇಟಸ್ ನಲ್ಲಿ ಹಾಕಿಕೊಳ್ಳುವುದರಿಂದ ದ್ವೇಷಕ್ಕೆ ಕಾರಣವಾಗುಬಹುದು ಅದ್ದರಿಂದ ದ್ವೇಷ ಬಿಟ್ಟು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕು ನೆಡೆಸಿ. ಪ್ರವಚನಗಳಲ್ಲಿ ಅನೇಕ ಉಪಕಥೆಗಳನ್ನು ಹೇಳುವ ಮೂಲಕ ಜೀವನ ಪಠಗಳನ್ನು ತಿಳಿಸಲಾಗುತ್ತದೆ. ಪ್ರತಿ ಹಂತದಲ್ಲಿಯೂ ಮನುಷ್ಯನಿಗೆ ಸಹಜವಾದ ಚಿಂತನೆಗಳು ಇರುತ್ತವೆ.
ಈ ಚಿಂತನೆಗಳು ಮನುಷ್ಯನನ್ನು ನಕರಾತ್ಮಕ ಯೋಜನೆಗಳಿಗೆ ದೂಡುತ್ತವೆ. ಆದರೆ ನಾವು ಯಾವಾಗಲು ಸಕರಾತ್ಮಕವಾಗಿರುವ ಯೋಚನೆಗಳನ್ನೇ ಮಾಡಬೇಕು. ಇದರಿಂದ ಸಮಾಜಕ್ಕೂ, ಕುಟುಂಬಕ್ಕೂ, ನಮ್ಮ ಮನಸ್ಸಿಗೂ ನೆಮ್ಮದಿ ನೀಡುತ್ತವೆ. ವರಮಹಲಕ್ಷ್ಮಿಪೂಜೆ ಸಕಲರಿಗೂ ಆರೋಗ್ಯ, ನೆಮ್ಮದಿ ಆಶ್ವರ್ಯ ನೀಡಲು ಎಂದು ಅವರು ಅಶಿಸಿದರು.
ಸಾನ್ನಿಧ್ಯ ವಹಿಸಿದ್ದ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾ ಸ್ವಾಮೀಜಿಗಳು ಆಶೀರ್ವಚನ ನೀಡುತ್ತ, ಸಕಲ ಜೀವಿಗಳಿಗೂ ಜಗದ್ಗುರು ಮರುಳಾಧ್ಯರು ಲೇಸನ್ನು ಉಂಟು ಮಾಡಲಿ, ಉತ್ತಮ ಮಳೆ ಬಂದು ರೈತರು ಸಮೃದ್ಧ ಬೆಳೆ ಬೆಳೆಯುವಂತಾಗಲಿ, ವರಮಹಲಕ್ಷ್ಮಿ ಪೂಜೆ ಮಹಿಳೆಯರಿಗೆ ಸೌಭಾಗ್ಯವನ್ನು ನೀಡಲಿ ಎಂದು ಆಶೀರ್ವಾಧಿಸಿದರು.
ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ, ಕೊಟ್ಟೂರು ತಹಶೀಲ್ದಾರ್ ಅಮರೇಶ್ವರ ಜಿ.ಕೆ, ಸಿಬ್ಬಂದಿ ವರ್ಗದವರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ