ಎಲ್ಲರೂ ಕಾಯಕ ಮಾಡಲೇಬೇಕು ಎಂದು ತಮ್ಮ ವಚನಗಳ ಮೂಲಕ . ನುಲಿಯ ಚಂದಯ್ಯನ ರವರು
ಎಲ್ಲರೂ ಕಾಯಕ ಮಾಡಲೇಬೇಕು ಎಂದು ತಮ್ಮ ವಚನಗಳ ಮೂಲಕ . ನುಲಿಯ ಚಂದಯ್ಯನ ರವರು ನಮ್ಮ ಸಮುದಾಯದ ಆದರ್ಶ ಪಿತಾಮಹ ಎಂದರೆ ತಪ್ಪಾಗಲಾರದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು. ಜಂಗಮವಾದಡೂ ಚರಸೇವೆಯ ಮಾಡಬೇಕು. ಕಾಯಕದಿಂದ ಯಾರು ಹೊರತಲ್ಲ.
ಕಾಯಕದ ಮಹತ್ವವನ್ನು ಸಾರಿದ ಮಹಾನ್ ಕಾಯಕಯೋಗಿಗಳಾದ ನೂಲಿ ಚಂದಯ್ಯನವರ ಜಯಂತಿಯ ಶುಭಾಶಯಗಳು.
12 ನೇ ಶತಮಾನದ ಮಹಾನ್ ವ್ಯಕ್ತಿ ಗಳಲ್ಲಿ ಒಬ್ಬರಾದ ನಮ್ಮ ಸಮುದಾಯ ಕಾಯಕಯೋಗಿ ಶಿವಶರಣರು ಬಸವಣ್ಣನವರ ದೀಕ್ಷೆ ಪಡೆದು ಅವರ ತತ್ವಗಳ ಆಧಾರದ ಮೇಲೆ ಕಾಯಕವೇ ನಿಜವಾದ ಮುಕ್ತಿ ನೀಡುತ್ತದೆ ಎಂಬುದನ್ನು ಅರಿತು ದಿನವು ಕಾಯಕ ಮಾಡುತ್ತಾ ತಮ್ಮ ಜೀವನವನ್ನು ಕಾಯಕದಲ್ಲೇ ಕಳೆದು ನಮ್ಮಂತಹ ಸಾವಿರ ಜನರಿಗೆ ಕಾಯಕದ ಕಲ್ಪನೆಯನ್ನು ಬಿತ್ತಿದ ಮಹಾನ್ ಯೋಗಿಗಳಿಗೆ ಕೋಟಿ ಕೋಟಿ ನಮನಗಳು.
ಗುರುವಾರ ಗ್ರಾಮ ಪಂಚಾಯಿತಿ ಚಿಕ್ಕ ಕೊಟ್ನೇಕಲ್ ನಲ್ಲಿ ಹಾಗೂ ನಮ್ಮ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಮಾನ್ವಿ ತಾಲೂಕು ಆಡಳಿತ ಮಂಡಳಿಯಲ್ಲಿ ಕೂಡ ಆಚರಣೆ ಮಾಡಲಾಯಿತು .
ನಂತರ ನೂಲಿಯ ಚಂದಯ್ಯ ನವರ ಕೆಲವು ಆದರ್ಶವಾದ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೇ ನಮ್ಮ ಜೀವನವು ಸುಗಮವಾಗಿ ಸಾಗುತ್ತದೆ. ಎಂಬ ಮಾತುಗಳನ್ನು ಆಡಿ ಈ ಒಂದು ಜಯಂತ್ಸೋವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ