ಅಲೆಮಾರಿ, ಅರೆಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಮತ್ತು ಸಮುದಾಯ ಭವನಕ್ಕೆ ಬೇಡಿಕೆ
ಅಖಿಲ ಕರ್ನಾಟಕ ಕುಳವ ಮಹಾಸಂಘದ ವತಿಯಿಂದ ಒತ್ತಾಯಿಸಿದರು
ಕೊಟ್ಟೂರು ಪಟ್ಟಣದ ವ್ಯಾಪ್ತಿಯಲ್ಲಿ ಅಲೆಮಾರಿ, ಅರೆಅಲೆಮಾರಿ ಸಮುದಾಯಕ್ಕೆ ಸೇರಿದ ಕೊರಚ/ಕೊರವ/ಕೊರಮ ಜನಾಂಗದ ಕುಟುಂಬಗಳು ೧೦೦೦ ಕ್ಕೂ ಹೆಚ್ಚು ಇದ್ದು, ಈ ಸಮುದಾಯದಲ್ಲಿ ಅಂತ್ಯಕ್ರಿಯೆ ಮಾಡಲು ಪ್ರತ್ಯೇಕ ಸ್ಮಶಾನ ಇಲ್ಲದಿರುವುದರಿಂದ ಮೃತರ ಅಂತ್ಯಸಂಸ್ಕಾರ ಮಾಡಲು ತುಂಬಾ ತೊಂದರೆಯಾಗುತ್ತಿದೆ ಅಲ್ಲದೇ ಈ ಸಮುದಾಯಕ್ಕಾಗಿ ಇದುವರೆಗೂ ಯಾವುದೇ ಸಮುದಾಯ ಭವನ ಇಲ್ಲದೇ ಇರುವುದು ವಿಪರ್ಯಾಸವಾಗಿದೆ. ಸಮುದಾಯದ ಮುಖಂಡರು ಕೊಟ್ಟೂರು ಪಟ್ಟಣದ ಕೊರಚ/ಕೊರಮ/ಕೊರವ ಸಮುದಾಯಕ್ಕೆ ಸಮುದಾಯ ಭವನ ಮತ್ತು ಸ್ಮಶಾನ ಮಂಜೂರು ಮಾಡಿಕೊಡುವಂತೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಸೋಮವಾರ ರಂದು ಮನವಿ ಪತ್ರ ಸಲ್ಲಿಸುವುದರ ಮೂಲಕ ಒತ್ತಾಯಿಸಿದರು. ಮನವಿ ಪತ್ರವನ್ನು ಸ್ವೀಕರಿಸಿ, ಪ್ರತ್ಯೇಕ ಸ್ಮಶಾನಕ್ಕಾಗಿ ಮೇಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಸಮುದಾಯ ಭವನಕ್ಕೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗವನ್ನು ಗುರುತಿಸಿ, ಸಮುದಾಯ ಭವನ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು. ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಉಪಕಾರ್ಯದರ್ಶಿ ಕೆ.ಕೊಟ್ರೇಶ್, ಕೊಟ್ಟೂರು ತಾಲ್ಲೂಕು ಅಧ್ಯಕ್ಷ ಮಂಜುನಾಥ ಭಜಂತ್ರಿ, ಸಂಘಟನಾ ಕಾರ್ಯದರ್ಶಿ ಬೆಳ್ಳಿರಥದ ಸಿದ್ದಣ್ಣ, ಬತ್ತನಹಳ್ಳಿಯ ಹಿರಿಯ ಮುಖಂಡ ಕೆ.ಹಾಲೇಶ್, ವೆಂಕಟೇಶ್ ಶೇಬಿ, ವೆಂಕಣ್ಣ, ರೇವಣ್ಣ, ಗ್ರಾ.ಪಂ. ಸದಸ್ಯ ಪ್ರಸನ್ನಕುಮಾರ, ಪರಶುರಾಮ, ರಮೇಶ್, ಗಾಳೆಪ್ಪ , ಕೊಟ್ರೇಶ್, ಪರಶುರಾಮ್, ರುದ್ರೇಶ್,ಇನ್ನು ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ