ಕೊಟ್ಟೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ ಬಂಧನ

ಕೊಟ್ಟೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಬಂಧನವಾಗಿದೆ. ರಾಂಪುರ ಗ್ರಾಮದ ಹೆಚ್.ಮೂಗಣ್ಣ ತಂದೆ ಅಂಜಿನಪ್ಪ ಆದಿ ಕರ್ನಾಟಕ ಜನಾಂಗ ಇವರು ನೀಡಿದ ದೂರಿನನ್ವಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆ ೩೦೭, ೩೨೩, ೩೨೪, ೩೪೧, ೪೨೭, ೫೦೪, ೫೦೬ ರನ್ವಯ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಫಿರ್ಯಾದುದಾರರಾದ ಹೆಚ್.ಮೂಗಣ್ಣ ಇವರನ್ನು ಆರೋಪಿ ವೆಂಕಟೇಶ್ ನಾಯ್ಕ ಎನ್ನುವವರು ಮಂಗಳವಾರ ರಾತ್ರಿ ೮.೩೦ ಗಂಟೆಗೆ ಟ್ರ್ಯಾಕ್ಟರ್‌ಗೆ ಅಳವಡಿಸುವ ಟ್ರ್ಯಾಲಿಯನ್ನು ಪ್ರತಿ ತಿಂಗಳಿಗೆ ೬೦೦೦/- ನಂತೆ ಫಿರ್ಯಾದಿಯ ಅಣ್ಣನಿಗೆ ಬಾಡಿಗೆ ಕೊಟ್ಟಿದ್ದು ೨ ತಿಂಗಳ ಬಾಡಿಗೆಯನ್ನು ಕೊಡದೇ ಮುಂದಿನ ತಿಂಗಳು ಕೊಡುತ್ತೇನೆಂದು ಹೇಳಿದ್ದಕ್ಕೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಕೊಂದುಬಿಡುತ್ತೇನೆಂದು ಫಿರ್ಯಾದುದಾರನಿಗೆ ಒದ್ದು, ಫಿರ್ಯಾದಿಯ ಮೊಬೈಲ್ ಎಸೆದು ಮಾರಣಾಂತಿಕ ಹಲ್ಲೆ ಮಾಡಿದ ಕಾರಣಕ್ಕಾಗಿ ಬುಧವಾರ ಪ್ರಕರಣ ದಾಖಲಾಗಿದೆ. ಕೊಟ್ಟೂರು ಪಿ.ಎಸ್.ಐ. ಗೀತಾಂಜಲಿ ಶಿಂಧೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗೂ ಮುಂದಿನ ವಿಚಾರಣಾ ತನಿಖೆಯನ್ನು ಕೈಗೊಂಡಿದ್ದಾರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*