3 ಸಾವಿರ ಕ್ಯೂಸೆಕ್ ಗಡಿ ದಾಟಿದ ಭದ್ರಾ ಜಲಾಶಯದ ಒಳ ಹರಿವು!
ದಾವಣಗೆರೆ:ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದ ಒಳ ಹರಿವು ನಿನ್ನಗೆ ಹೋಲಿಸಿದರೆ ಇಂದು ಡಬಲ್ ಆಗಿದೆ.
ನಿನ್ನೆ ಬೆಳಗಿನ ಜವ 1511 ಕ್ಯೂಸೆಕ್ ಒಳ ಹರಿವು ದಾಖಾಗಿತ್ತು. ಇಂದು ಒಳ ಹರಿವಿನ ಪ್ರಮಾಣ 3224 ಕ್ಯೂಸೆಕ್ ಗೆ ಏರಿದೆ. ಜಲಾಶಯದ ನೀರು ಸಂಗ್ರಹ ಪ್ರಮಾಣ ಯಥಾಸ್ಥಿತಿ ಕಂಡುಕೊಂಡಿದೆ. ಹೊರ ಹರಿವು ಸಹ 3224 ಕ್ಯೂಸೆಕ್ ಇರುವುದೇ ಇದಕ್ಕೆ ಕಾರಣ.
ಇಂದು ಸಹ ಕರಾವಳಿ ಭಾಗದಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಹೀಗಾಗಿ ಒಳ ಹರಿವು ಇದೇ ಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆ ಇದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ