ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೭೯ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸೋಣ – ಕೆ ನೇಮಿರಾಜನಾಯ್ಕ ಶಾಸಕರು

ಇಮೇಜ್
ಕೊಟ್ಟೂರು :೭೯ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲು ಪೂರ್ವಸಿದ್ದತಾ ಸಭೆಯನ್ನು ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ನೇಮಿರಾಜನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಹಗರಿಬೊಮ್ಮನಹಳ್ಳ್ಗೆ ಧ್ವಧಜಾರೋಹಣ ಕಾರ್ಯಕ್ಕೆ ಹೋಗಬೇಕಾದ ಕಾರಣ ಕೊಟ್ಟೂರಿನಲ್ಲಿ ಎಲ್ಲಾ ಶಾಲಾ-ಕಾಲೇಜಿನಲ್ಲಿ ಬೆಳಿಗ್ಗೆ ೭.೦೦ ಗಂಟೆಗೆ ಧ್ವಜಾರೋಹಣ ನೆರವೇರಿಸಿಕೊಂಡು ತಾಲೂಕು ಮಟ್ಟದಲ್ಲಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೮.೦೦ ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲು ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.   ಕಾರ್ಯಕ್ರಮವನ್ನು ಯಾವುದೇ ರೀತಿಯಲ್ಲಿ ಲೋಪವಾಗದಂತೆ ಅಚ್ಚುಕಟ್ಟಾಗಿ ಆಚರಿಸಬೇಕು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದು ಕಾರ್ಯಕ್ರಮ ಮುಗಿಯುವವರೆಗೂ ಇರಬೇಕು. ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ಲಕ್ಷ ವಹಿಸದೇ ನಿರ್ವಹಿಸುವಂತೆ ತಿಳಿಸಿದರು. ದೇಶ ರಕ್ಷಣೆಗೆ ದುಡಿದು ನಿವೃತ್ತಿಯಾದ ಸೈನಿಕರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ತಾಲೂಕಿನಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸುವಂತೆ ತಿಳಿಸಿದರು.   ತಹಶೀಲ್ದಾರರಾದ ಅಮರೇಶ ಜಿಕೆ ಇವರು ಹಾಜರಾದ ಎಲ್ಲರಿಗೂ ಸ್ವಾಗತವನ್ನು ಕೋರುತ್ತಾ, ನಿಗದಿತ ಸಮ...

ಕೋರಖಣ ನಾಗರಾಜ ಶಾಲೆಯಲ್ಲಿ ಪಂಚಮಿ ಆಚರಣೆ

ಇಮೇಜ್
*ಹಬ್ಬದ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮ, ಹಿರಿಯ ಕಲಾವಿದರಿಂದ ಎರಡು ದಿನ ಭಜನೆ ಕಾರ್ಯಕ್ರಮ,ಮಕ್ಕಳ ಕುಣಿತ, ಮಹಿಳೆಯರು ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ* ಕೊಟ್ಟೂರು : ನಾಗರ ಪಂಚಮಿ ಎಂದರೆ ಮಹಿಳೆಯರಿಗೆ ಸಡಗರ ಸಂಭ್ರಮ. ಪಟ್ಟಣದಲ್ಲಿ ಮಂಗಳವಾರ ನಾಗರ ಪಂಚಮಿ ಹಬ್ಬವನ್ನು ಭಕ್ತರು ಕೋರಖಣದ ನಾಗರಾಜ ಪ್ರಾಥಮಿಕ ಶಾಲೆಯಲ್ಲಿರುವ ನಾಗರಕಲ್ಲಿಗೆ ಕುಟುಂಬ ಸಮೇತ ಸಡಗರದಿಂದ ಹಾಲು ಎರೆದು ಪಂಚಮಿ ಹಬ್ಬವನ್ನು ಆಚರಿಸಿದರು, ಭಕ್ತರು ತಾವು ಹೊತ್ತುಕೊಂಡ ಹರಕೆಗಳನ್ನು ಈಡೇರಿಸಿದ ನಾಗರಹಾವಿನ ಮೂರ್ತಿಗೆ ಹಾಲು ಎರೆಯುವುದರ ಮೂಲಕ ತಮ್ಮ ಹರಕೆಗಳನ್ನು ಪೂರೈಸಿದರು. ಪ್ರತಿ ವರ್ಷದಂತೆ ನಾಗರಾಜ ಭಜನಾ ಸಂಘ ಕೋರಖಣ ಇವರಿಂದ ಭಕ್ತಿ ಪೂರ್ವಕವಾಗಿ ಭಜನಾ ಕಾರ್ಯಕ್ರಮ ಬೆಳಗಿನ ಜಾವದಿಂದ ಮರುದಿನ ಬೆಳಗಿನವರೆಗೂ ಆಯೋಜಿಸಿದ್ದಾರೆ. ಹಿರಿಯರ ಜನಪದ ಭಜನಾ ಹಾಡುಗಳಿಗೆ ಮಕ್ಕಳು ನೃತ್ಯದಿಂದ ಕುಣಿದು ಕುಪ್ಪಳಿಸಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಪಟ್ಟಣದ ವಿವಿಧ ಕಡೆಯಲ್ಲಿ ಪಂಚಮಿಯ ಹಿಂದಿನ ದಿವಸ ರೊಟ್ಟಿ ಹಬ್ಬ ಮಾಡಿ, ತರತರಹದ ರೊಟ್ಟಿಗಳನ್ನು ಮಾಡಿ ವಿಧವಿಧವಾದ ಪಲ್ಯಗಳನ್ನು ಮಾಡಿ ಹಬ್ಬ ಆಚರಿಸುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.  ಈ ಹಬ್ಬಕ್ಕಾಗಿ ಹೆಣ್ಣುಮಕ್ಕಳು ವರ್ಷವಿಡೀ ಕಾಯುತ್ತಿರುತ್ತಾರೆ. ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ. ಶ್ರಾವಣ ಮಾಸ ಆರಂಭವಾಗುತ್ತಿದಂತೆ ಕರ್ನಾಟಕದಲ್ಲಿ ಹಬ...

*ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ*

ಇಮೇಜ್
ಬಳ್ಳಾರಿ: ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಸ್ಥಾಪನೆಯಾಗಿ 77 ವರ್ಷಗಳು ತುಂಬಿದೆ. ಎಲ್ಲ ಅಧ್ಯಕ್ಷರು ಮತ್ತು ಸದಸ್ಯರು ಸಹಕಾರದಿಂದ ಸಾಕಷ್ಟು ಅಭಿವೃದ್ಧಿಯತ್ತ ಸಾಗುತ್ತದೆ.ಈ ಸಂದರ್ಭಿಕವಾಗಿ ಬಳ್ಳಾರಿ ರಾಘವ ಕನ್ನಡ ಮತ್ತು ತೆಲುಗು ರಾಜ್ಯ ಪ್ರಶಸ್ತಿ ಪ್ರದಾನ, ನಾಟಕೋತ್ಸವ ಆಚರಣೆ ಸಂತಸದಿಂದ ಹಮ್ಮಿಕೊಳ್ಳಲಾಗಿದೆ. ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ ರವರು ರಂಗಭೂಮಿ ಸೇವೆ ಕರ್ನಾಟಕದ ಬಳ್ಳಾರಿ ನಗರದದಿಂದಲೇ ಆರಂಭವಾಗಿದೆ. ರಾಘವರ ಅಭಿನಯ ಪ್ರತಿಭೆಯಿಂದ ನಾಟಕ ಕಲೆಯ ಬಗ್ಗೆ ಅವರಿಗಿದ್ದ ಅಪಾರ ಜ್ಞಾನ, ಪ್ರಖ್ಯಾತ ನ್ಯಾಯವಾದಿಯಾಗಿ ಅಗ್ರ ನಟರಾಗಿ ನಾಟಕಗ್ರೇಸರ ಚಕ್ರವರ್ತಿಯೆಂದು ಹೆಸರು ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.ಅವರ ಪ್ರತಿಭೆ ಬೆಂಗಳೂರು, ಮದ್ರಾಸ್,ಮುಂಬಯಿಗಳಲ್ಲಿ ವಿಕಾಸಗೊಂಡು ಆಂಧ್ರ, ಬಂಗಾಳಿ, ಬರ್ಮಾದ ವರೆಗೆ ತಮ್ಮ ನಟನೆಯನ್ನು ಪ್ರದರ್ಶಿಸಿ ಕರ್ನಾಟಕ ಮತ್ತು ಬಳ್ಳಾರಿ ಕೀರ್ತಿಯನ್ನು ಪ್ರಸಿದ್ದಿ ಗೊಳಿಸಿದ್ದಾರೆ.ರಾಘವರವರು ಯುರೋಪ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಇನ್ನೂ ಮುಂತಾದ ದೇಶಗಳಲ್ಲಿ ನಟನೆಯನ್ನು ಪ್ರದರ್ಶಿಸಿ ಅಂತರಾಷ್ಟ್ರೀಯ ಕೀರ್ತಿಯನ್ನು ಪಡೆದಿದ್ದಾರೆ. ಬಳ್ಳಾರಿ ರಾಘವ ಕನ್ನಡ, ತೆಲುಗು,ಹಿಂದಿ, ಇಂಗ್ಲಿಷ್, ಮರಾಠಿ, ಭಾಷೆಗಳಲ್ಲಿ ನಟನೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.ರಾಘವರವರು *ಸರಿಪಡನಿ ಸಂಗತಲು* ಎಂಬ ನಾಟಕವನ್ನು ರಚಿಸಿದ್ದಾರೆ. *ಬಳ್ಳಾರಿ ರಾಘವ ರವರು ರೈತು ಬಿಡ್ಡ* ಚಲನಚಿತ್ರ...

* ಜಿಲ್ಲಾಧಿಕಾರಿಗಳ ದಿಟ್ಟ ನಿರ್ಧಾರಕ್ಕೆ 18 ವರ್ಷಗಳ ನಂತರ ಕೂಡಿಬಂದಿದೆ ರಥೋತ್ಸವದ ಯೋಗ.! ಹಿರಿಯ ಮುಸದ್ದಿಗಳ ಆಶಯ ಹಿಡಿರುತ್ತದೆ ಕಾದು ನೋಡಬೇಕು*

ಇಮೇಜ್
  "ಮೂಗಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಯೋಗ..!" ಕೊಟ್ಟೂರು ತಾಲ್ಲೂಕು ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವ ನಿಂತು ೧೮ ವರ್ಷಗಳಾಗಿವೆ. ೧೮ ವರ್ಷಗಳ ಹಿಂದೆ ರಾಂಪುರ ಗ್ರಾಮದ ಚಿರಿಬಿ ಗ್ರಾಮಸ್ಥರ ನಡುವೆ ಕಾರಣಾಂತರಗಳಿಂದ ಜಾತ್ರೆ ನಡೆದಿರಲಿಲ್ಲ. ಆ ಕಾರಣಕ್ಕೆ ಪ್ರತೀವರ್ಷ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಹೊಂದಾಣಿಕೆ ಬಾರದ ಕಾರಣಕ್ಕೆ ರದ್ದಾಗುತ್ತಲೇ ಸಾಗಿತ್ತು.  ಆದರೆ ಈ ಸಲ ರಥೋತ್ಸವ ನಡೆಸುವಂತಹ ಎಲ್ಲಾ ಲಕ್ಷಣಗಳು ಗೋಚರಿಸಿದ್ದು, ರಥೋತ್ಸವ ಸ್ವಚ್ಛತಾ ಕಾರ್ಯ ಬರದಿಂದ ನಡೆದಿದೆ ಭಕ್ತ ಸಾರ್ವಜನಿಕರು ರಥೋತ್ಸವ ನೋಡಲು ಕುತೂಹಲದಿಂದ ಕಾದಿದ್ದಾರೆ. ಈಗ ದೇವಸ್ಥಾನ ಸರ್ಕಾರದ ವಶದಲ್ಲಿರುವುದರಿಂದ ಯಾವುದೇ ಗಲಭೆಗಳು ಆಗದಂತೆ ಕಟ್ಟೆಚ್ಚರದಿಂದ ಯಾವುದೇ ರೀತಿಯ ವಿಘ್ನಗಳು ಬಾರದಂತೆ ರಥೋತ್ಸವ ನಡೆಸಲು ಇಲಾಖೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆದಿದ್ದು,  ಜಾತ್ರೆ ನಡೆಯುವುದು ಬಹುತೇಕ ಖಚಿತವಾಗಿದೆ. ಊರಿನ ಹಿರಿಯ ಮುಸದ್ದಿಗಳಾಗಿರುವ ಗ್ರಾಮಸ್ಥರು ಜಾತ್ರೆ ನಡೆಸಬೇಕೆಂಬ ಮಹದಾಸೆ ಹೊಂದಿದ್ದಾರೆ. ಆಗಸ್ಟ್ ೧೮ ರಂದು ಮೂಗಬಸವೇಶ್ವರ ಸ್ವಾಮಿ ರಥೋತ್ಸವ ನಡೆಸಲು ನಿರ್ಧರಿಸಿದ್ದೇವೆ ಎಂದು ಗ್ರಾಮದ ಪ್ರಕಾಶ್ ತಿಳಿಸಿದ್ದಾರೆ. ಮೂಗಬಸವೇಶ್ವರ ಜಾತ್ರೆಯಲ್ಲಿ ಈ ಹಿಂದೆ ಕುಸ್ತಿ ಆಟಗಳು ಸೇರಿದಂತೆ ಎಲ್ಲಾ ಗ್ರಾಮೀಣ ಕ್ರೀಡೆಗಳು ನಡೆಯುತ್ತಿದ್ದವು....

*ಗಮಕ ಕಲಾನಿಧಿ ಡಾಕ್ಟರ್ ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ*

ಇಮೇಜ್
ಬಳ್ಳಾರಿ: ಇಂದು ಚಳ್ಳೆರ್ಗುಕಿ ಎರ್ರಿತಾತ ಜೀವ ಸಮಾದಿ ಮಠದಲ್ಲಿ ರಂಗ ತೋರಣ, ಬಳ್ಳಾರಿ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ, ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಡಾಕ್ಟರ್ ಜೋಳದರಾಶಿ ದೊಡ್ಡನಗೌಡ 116ನೇಜಯಂತಿ ಕಾರ್ಯಕ್ರಮವನ್ನು ರಂಗ ಜ್ಯೋತಿ ಮೂಲಕ ಚಾಲನೆ ನೀಡಲಾಯಿತು.ನಂತರ ಡಾಕ್ಟರ್ ಜೋಳದರಾಶಿ ದೊಡ್ಡನಗೌಡ ಸಮಾದಿಗೆ ಆಗಮಿಸಿ ಆ ಸ್ಥಳದಲ್ಲಿ ಪೂಜೆ ಸಲ್ಲಿಸಿ ಭಜನೆ ಹಾಡುಗಳು ಹಾಡಲಾಯಿತು.ತದನಂತರ ಡಾಕ್ಟರ್ ಜೋಳದರಾಶಿ ದೊಡ್ಡನಗೌಡ ಆವರ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನೇರವೇರಿಸಲಾಯಿತು.ಈ ಸಂದರ್ಬದಲ್ಲಿ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಕೆ ಪೊಂಪನಗೌಡ,ರಂಗತೋಣ ಕಾರ್ಯದರ್ಶಿ ಶ್ರೀ ಕಪ್ಪಗಲ್ಲು ಪ್ರಭುದೇವ, ಬಳ್ಳಾರಿ ಜಿಲ್ಲೆ ಕಲಾವಿದರ ಸಂಘದ ಅಧ್ಯಕ್ಷರಾದ ಶ್ರೀಯಲ್ಲನಗೌಡ ಶಂಕರ ಬಂಡೆ, ಕಾರ್ಯದರ್ಶಿ ಶ್ರೀ ಮುದ್ದಟನೂರು ತಿಪ್ಪೇಸ್ವಾಮಿ ಖಜಾಂಚಿ ಶ್ರೀ ರಮಣಪ್ಪ ಭಜಂತ್ರಿ ಸಹ ಕಾರ್ಯದರ್ಶಿಗಳಾದ ಶ್ರೀ ಸುಬ್ಬಣ್ಣ, ವೀರೇಶ ದಳಾವಾಯಿ,  ಎಮ್ಮಿಗನೂರು ಜಡೆಪ್ಪ, ಶಿವಶ್ವರ ಗೌಡ ಕಲ್ಲು ಕಂಭ,ಜೋಳದರಾಶಿ ಬಸವರಾಜ,ಅಮರೇಶ, ನಾಗನಗೌಡ, ಶಿವರುದ್ರ ಸ್ವಾಮಿ, ವಿರುಪಾಕ್ಷಪ್ಪ,ಸಿಂದುವಾಳ ಶಶಿ, ಕೊಟ್ರಪ್ಪ , ಹುಸೇನ್,ಸುಂಕಪ್ಪ, ಕುಮಾರ್ ಗೌಡ, ಜಯಣ್ಣ, ವನ್ನೂರ ಸ್ವಾಮಿ ಹಾಗೂ ಜೋಳದರಾಶಿ ಗ್ರಾಮಸ್ಥರು ಭಾಗವಹಿಸಿದ್ದರು.

*ನಮ್ಮನ್ನಗಲಿದ ಪತ್ರಕರ್ತರಿಗೆ ನುಡಿನಮನ ವಿಶ್ವ ಪತ್ರಿಕಾ ದಿನಾಚರಣೆಗೆ ಮೆರುಗು *

ಇಮೇಜ್
  "ಪ್ರಸ್ತುತ ಸಮಾಜಕ್ಕೆ ಪತ್ರಕರ್ತರ ಸೇವಾ ಅಪಾರ" ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ಬರುವ ಸೆಂಟ್ ಮೈಕಲ್ ಸ್ಕೂಲ್ ನಲ್ಲಿ ಕರ್ನಾಟಕ ಪತ್ರಕರ್ತ ರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿನ ತಮ್ಮದೇ ಆದಂತಹ ಪತ್ರಿಕಾ ರಂಗದಲ್ಲಿ ತಮ್ಮ ಅಳಿಲು ಸೇವೆಯನ್ನು ತಮ್ಮ ತಮ್ಮ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿ ಸಮಾಜದ ಅಂಕುಡೊಂಕುಗಳನ್ನು ಪತ್ರಿಕೆಗಳಲ್ಲಿ ಬರೆದು ಸರ್ಕಾರವನ್ನು ತಿದ್ದುವ ನಿಟ್ಟಿನಲ್ಲಿ ತಮ್ಮಗಳ ಪತ್ರಿಕೆ ಯಲ್ಲಿ ಬರವಣಿಗೆ ಮೂಲಕ ಬರೆದು ಸಮಾಜಕ್ಕೆ ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಆಗುವಂತ ಕೆಲಸಗಳು ಹಾಗೂ ಸೌಲಭ್ಯಗಳು ಆಳುವಂತ ಸರ್ಕಾರಗಳಿಗೆ ಪತ್ರಿಕೆಗಳಲ್ಲಿ ಬರೆಯುವುದರೊಂದಿಗೆ ಚಾಟಿ ಬಿಸುವಂತ ಪದಗಳನ್ನು ಪತ್ರಿಕೆಗಳಲ್ಲಿ ಬಳಸಿ ಸುದ್ದಿಗಳನ್ನು ಮಾಡಿ ಕ್ಷೇತ್ರದ ಜನಗಳಿಗೆ ನ್ಯಾಯ ಸಿಗುವಂತೆ ಆ ಸಮಯದ ಶಾಸಕರುಗಳು ಸಹ ಭಯ ಎಂಬ ಅಳುಕನ್ನು ಇಟ್ಟುಕೊಂಡು ಪತ್ರಕರ್ತರನ್ನು ಸ್ನೇಹಿತರಂತೆ ಕಂಡು ಜನಗಳಿಗೆ ಸಮಸ್ಯೆ ಇರುವಂತ ಸ್ಥಳದಲ್ಲಿ ಪತ್ರಿಕೆಯ ವರದಿಗಾರರು ಬಂದರೆ ಸಾಕು, ಆ ಸ್ಥಳದಲ್ಲಿದ್ದ ಸಮಸ್ಯೆ ಪಾರಿವಾರವಾಗುತ್ತೆ ಎಂಬ ದೊಡ್ಡ ನಂಬಿಕೆ ಜನರಿಗೆ ಇತ್ತು,ಅನ್ನುವ ಸಾಮರ್ಥ್ಯ ವನ್ನು ನಮ್ಮ ಹಿರಿಯರಾದ ಹಾಗೂ ಕೆಲ ಕಿರಿಯರಾದ ನಮ್ಮನ್ನಗಲಿದ ಪತ್ರಕರ್ತರ ತಮ್ಮ ಪತ್ರಿಕಾ ರಂಗದಲ್ಲಿ ಅನೇಕ ರೀತಿಯ ಸುದ್ದಿಯನ್ನು ಮಾಡಿದವರ ಬಗ್ಗೆ ಈ ಸಮಯದಲ್ಲಿ ನುಡಿನಮನ ಕಾರ್ಯಕ್ರಮವನ...

ಧರ್ಮಸ್ಥಳ ಧರ್ಮಾಧಿಕಾರಿ ರಾಜ್ಯ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಜ್ಯಾಧ್ಯಕ್ಷೆ ವಿಜಯರಾಣಿ ಸಿರವಾರ ಆಗ್ರಹ

ಇಮೇಜ್
  ಮಸ್ಕಿ : ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ಧರ್ಮಸ್ಥಳ ಫೈಲ್ಸ್ ವಿಷಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅನುಮಾನಾಸ್ಪದ ನಡೆಯನ್ನು ಖಂಡಿಸುತ್ತೇವೆ. ಕಳೆದ ಮೂವತ್ತು ವರ್ಷಗಳಿಂದ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ಹಾಗೂ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶದ ಜನರೇ ಭಯಭೀತರಾಗಿದ್ದಾರೆ. ದಿನಕ್ಕೊಂದು ಮಾಹಿತಿಗಳು ಮತ್ತು ತಿರುವುಗಳನ್ನು ಪಡೆದುಕೊಂಡು ಜನರಲ್ಲಿ ಆತಂಕ ಉಂಟು ಮಾಡಿದೆ. ಧಾರ್ಮಿಕ ಸ್ಥಳಗಳಲ್ಲಿ ಕೊಲೆ ಅತ್ಯಾಚಾರ ಹೆಚ್ಚುತ್ತಲೇ ಇರುವುದು ಭಕ್ತರನ್ನು ದಿಕ್ಕು ತಪ್ಪಿಸಿದೆ ಇದಕ್ಕೆಲ್ಲ ಕಾರಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಇನ್ನಿತರ ಕುಟುಂಬಸ್ಥರು ಎಂಬ ನೇರ ಆರೋಪಕ್ಕೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗೂ ಅವರ ವಿರುದ್ಧ ಆರೋಪಗಳು ಇದ್ದಾಗ್ಯೂ ಅವರ ನಡೆ ಅನುಮಾನಾಸ್ಪದವಾಗಿದೆ ಮತ್ತು ಪ್ರಸ್ತುತ ಮಾಡಿರುವ ಆರೋಪಗಳಿಗೆ ಪುಷ್ಟಿ ನೀಡುವಂತಹದ್ದಾಗಿದೆ. ಇದು ಧಾರ್ಮಿಕ ಸ್ಥಳಗಳಲ್ಲಿ ಅಪವಿತ್ರ ಆನೈತಿಕ ಕಾರ್ಯಗಳನ್ನು ನಡೆಸಿದ್ದು ಮೇಲ್ನೋಟಕ್ಕೆ ನಿಜವೆಂದು ಕಂಡು ಬರುತ್ತಿದೆ. ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರಕಾರ ಸಾಲು ಸಾಲು ಸರಣಿ ಪ್ರಕರಣವನ್ನು ಎಸ್ ಐಟಿ ಗೆ ವಹಿಸಿ "నివి ತಂಡವನ್ನು ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಹಾಗೆಯೇ ಸೌಜನ್ಯ ಪ್ರಕರಣವನ್ನು ಕೂಡಾ ಎಸ್. ಐ.ಟ...

ಎಕ್ಕುಂಬಿ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ದುರಸ್ತಿಗೆ ಭೂಮಿಪೂಜೆ ಚಾಲನೆ: ಕೆ ನೇಮಿರಾಜನಾಯ್ಕ

ಇಮೇಜ್
  ಕೊಟ್ಟೂರು ಪಟ್ಟಣದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ಎಕ್ಕುಂಬಿ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ದುರಸ್ತಿ ಕಾಮಗಾರಿಗೆ ಶಾಸಕ ಕೆ ನೇಮಿರಾಜನಾಯ್ಕ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೊಟ್ಟೂರು ಪಟ್ಟಣದಿಂದ ಹರಪನಹಳ್ಳಿ ರಸ್ತೆಗೆ ಹೋಗುವ ಕೆ.ಅಯ್ಯನಹಳ್ಳಿ ಗ್ರಾಮದ ನಂತರ ರಸ್ತೆ ಇತ್ತೀಚಿನ ದಿನಗಳಲ್ಲಿ ಈ ರಸ್ತೆ ತುಂಬಾ ಗುಂಡಿಗಳು ನಿರ್ಮಾಣವಾಗಿದ್ದು, ಓಡಾಡಲು ತುಂಬಾ ತೊಂದರೆಯಾಗಿ ಕೆಲವೊಂದು ಅಪಘಾತಗಳೂ ಸಂಭವಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ, ಸರ್ಕಾರದಿಂದ ಅನುದಾನ ತಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಕಾಮಗಾರಿ ಅಂದಾಜು ವೆಚ್ಚ ೧೫೦.೩೫ ಲಕ್ಷ ಲೆಕ್ಕಶೀರ್ಷಿಕೆ ೫೦೫೪ ಅಪೆಂಡಿಕ್ಸ್ ಇ ೨೦೨೫-೨೬ರಡಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿಯು ೧೫೦.೩೦೫ ರಿಂದ ೧೫೧.೧೪೧ ಕಿ.ಮೀ. ವರೆಗೆ ಆಯ್ದ ಭಾಗಗಳನ್ನು ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು. ಎರಡು ವರ್ಷಗಳಲ್ಲಿ ಅತೀ ಹೆಚ್ಚು ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಗಮನ ಸೆಳೆದು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಎಂ.ಎಂ.ಜೆ.ಹರ್ಷವರ್ಧನ್, ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಕುಮಾರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ರೂಪಾ ಇದ್ದರು.

*ಪ್ರಶ್ನಿಸುವ ಮನೋಭಾವನೆ ನಮ್ಮೆಲ್ಲರಲ್ಲಿ ಬೆಳೆಸಿಕೊಳ್ಳಬೇಕು : ಹೆಚ್ ವಿರಣ್ಣ*

ಇಮೇಜ್
"ಅಖಿಲ ಭಾರತ ಕಮ್ಯುನಿಸ್ಟ್ ಪಕ್ಷವು ( ಸಿಪಿಐ ) ಯಾವುದೇ ರೀತಿ ರಾಜಕೀಯ ಮಾಡದೆ ಕಮ್ಯೂನಿಸ್ಟ್ ಪಕ್ಷವು ದೀನ ದಲಿತರ ಮತ್ತು ಸಮಾಜದ ತುಳಿತಕ್ಕೊಳಗಾದ ವ್ಯಕ್ತಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸಿಪಿಐ ಪಕ್ಷದ ವಿಜಯನಗರ ಜಿಲ್ಲೆಯ ಕಾರ್ಯದರ್ಶಿ ಹೆಚ್ ವಿರಣ್ಣ ಹೇಳಿದರು." ಕೊಟ್ಟೂರು : ಪಟ್ಟಣದ ರೇಣುಕಾ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಎರಡನೇ ತಾಲೂಕು ಸಮ್ಮೇಳನವನ್ನು  ಬುಧವಾರ ಏರ್ಪಡಿಸಿದ್ದರು. ವೇದಿಕೆಯ ಮೇಲೆ ಇರುವ  ಎಲ್ಲಾ ಕಾಮ್ರೆಡ್  ಮತ್ತು ಸಂಗಾತಿಗಳಿಂದ ಗಿಡಕ್ಕೆ ನೀರು ಹಾಕುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರಕಿತು. ನಂತರ ಕಮ್ಯುನಿಸ್ಟ್ ಪಾರ್ಟಿಯ ವಿಜಯನಗರ ಜಿಲ್ಲಾ ಕಾರ್ಯದರ್ಶಿಯಾದ ಹೆಚ್ ವಿರಣ್ಣ ಅವರು ಮಾತನಾಡಿ ಕೊಟ್ಟೂರು ತಾಲೂಕು ಘೋಷಣೆಯಾಗಿ ಸುಮಾರು ಐದಾರು ವರ್ಷ ಕಳೆದರೂ ಯಾವುದೇ ರೀತಿಯ ಕಚೇರಿಗಳು ತೆರೆದಿಲ್ಲ ಇದರಿಂದ ಸಾಕಷ್ಟು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕೊಟ್ಟೂರು- ಕೂಡ್ಲಿಗಿ ತಾಲೂಕಿನ ಕಚೇರಿಗಳಿಗೆ ಪ್ರತಿನಿತ್ಯ ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಇನ್ನು ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಷ್ಟು ಬಡವರಿಗೆ ಸರ್ಕಾರದ ವಸತಿ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ ಹಾಗೂ ಕಟ್ಟಡ ಕಾರ್ಮಿಕರಿಗೆ ಯಾವುದೇ ರೀತಿ ಸಾಮಾಜಿಕ ಭದ್ರತೆ ಸಿಗುತ್ತಿಲ್ಲ .ಬಡವರಿಗೆ ಎಂದು ಸರ್ಕಾರವು ಹಲವು ಯೋಜನೆಗಳು ತಂದಿವೆ ಆದರೆ ಈ ಯೋಜನೆಗಳು ಬಡವರ ಕೈ ಸೇರುತ್ತಿಲ್ಲ ಸರ್ಕಾರ ಸೌಲಭ್ಯಗಳು ಪಡೆಯಬೇಕಾದರೆ...

"ಎಲ್ಲರಿಗೂ ಪ್ರೀತಿಯ ಆಹ್ವಾನ ಕರ್ನಾಟಕ ಪ್ರಸ್ ಕ್ಲಬ್ ಕೊಟ್ಟೂರು ತಾಲೂಕು ಪತ್ರಿಕಾ ದಿನಾಚರಣೆ-2025"

ಇಮೇಜ್
ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಅಧ್ಯಕ್ಷರು, ರಾಜ್ಯ ಉಪಾಧ್ಯಕ್ಷ  ನೇತೃತ್ವದಲ್ಲಿ ಹಾಗೂ ವಿಜಯನಗರ ಜಿಲ್ಲಾ  ತಾಲೂಕು ಘಟಕಗಳ ಪದಗ್ರಹಣ ಕಾರ್ಯಕ್ರಮ ಕೊಟ್ಟೂರು ತಾಲೂಕು ವತಿಯಿಂದ ಮೊದಲನೇ ಪತ್ರಿಕಾ ದಿನಾಚರಣೆ-2025 ಜುಲೈ 13 ಭಾನುವಾರ ರಂದು  ನೆಡೆಯುವ ಕಾರ್ಯಕ್ರಮ  ಕೊಟ್ಟೂರು: ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಅಧ್ಯಕ್ಷರು ದಯಾನಂದ , ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಜಿ , ಮತ್ತು ಹಗರಿ ಬೊಮ್ಮನಹಳ್ಳಿಯ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯಕ್ , ಮಾಜಿ ಸಚಿವರು ಶ್ರೀರಾಮುಲು ,ಕೆಎಂಎಫ್ ರಾಜ್ಯಾಧ್ಯಕ್ಷರು ಎಸ್ ಭೀಮ ನಾಯಕ್, ಜೆಡಿಎಸ್ ರಾಜ್ಯ ವಕ್ತಾರರು ರಾಜುಗೌಡ್ರು,ಬೆಂಗಳೂರು ಇವರುಗಳು ಆಗಮಿಸಲಿದ್ದು. ಕರ್ನಾಟಕ ಪ್ರಸ್ ಕ್ಲಬ್  ಕೊಟ್ಟೂರು ಘಟಕದ ವತಿಯಿಂದ‌ ಬಾಲಾಜಿ ಕಲ್ಯಾಣ ಮಂಟಪ  ಸಭಾಂಗಣದಲ್ಲಿ  ವಿಜಯನಗರ ಜಿಲ್ಲಾ ಹಾಗೂ ತಾಲೂಕು ಘಟಕಗಳ  ಪದಗ್ರಹಣ ಸಮಾರಂಭ ಮತ್ತು ಪತ್ರಿಕಾ ದಿನಾಚರಣೆ 13.07.2025 ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪತ್ರಿಕಾ ವಿತರಕರು, ಸೈನಿಕರು, ಶಿಕ್ಷಕರು, ಆರೋಗ್ಯ ಇಲಾಖೆ, ಹಿರಿಯ ಪತ್ರಕರ್ತರಿಗೆ ಸನ್ಮಾನ,ಪ್ರತಿಭಾವಂತ ವಿದ್ಯಾರ್ಥಿಗಳು, ಜೆಸ್ಕಾಂ ಸಿಬ್ಬಂದಿಯವರಿಗೆ ಸನ್ಮಾನ, ಅಂಗನವಾಡಿ ಕಾರ್ಯಕರ್ತರಿಗೆ, ಬಿಸಿ ಊಟ ಮಹಿಳಾ ಕಾರ್ಯಕರ್ತರಿಗೆ ,ಚೌರಿಕರು,ಆಟೋ ಚಾಲಕರು, ಪೌರಕಾರ್ಮಿಕರು, ರೈತ ಸಂಘಟನೆ ಹಾಗೂ ಕೃಷಿಕ ರೈತ ಮಿತ್ರರು ಸಂಘಟನ...

*ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಕಾಕುಬಾಳು ಅವಿರೋಧ ಆಯ್ಕೆ.*

ಇಮೇಜ್
 *ವಿಜಯನಗರದಲ್ಲಿ ಉದ್ಘಾಟನೆಗೊಂಡ ಕರ್ನಾಟಕ ಪ್ರೆಸ್ ಕ್ಲಬ್.*  "ಅನ್ಯಾಯ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದಾಗ ಮಾತ್ರ ಆಡಳಿತ ವ್ಯವಸ್ಥೆ ಸುಧಾರಿಸಲು ಸಾಧ್ಯ : ಕೆ ಕೊಟ್ರೇಶ್ " ಕೊಟ್ಟೂರು : ಕರ್ನಾಟಕ ಪ್ರೆಸ್ ಕ್ಲಬ್ ನ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಕಾಕುಬಾಳು, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಕೆ.ಕೊಟ್ರೇಶ ಹಾಗು ರಾಜ್ಯ ಸಂಘಟನಾ ಕಾರ್ಯದರ್ಶಿ  ಡಾಕ್ಟರ್ ನಂದು ಪೂಜಾರಿ ಅವರು ಮಂಗಳವಾರ ಅಮರಾವತಿ ಪ್ರವಾಸಿ ಮಂದಿರದಲ್ಲಿ ಘೋಷಿಸಿದರು. ಉಪಾಧ್ಯಕ್ಷರಾಗಿ ಅಂಬರೀಶ, ಉಮೇಶ ನೆಲ್ಕುದುರೆ, ಡಿ.ಮುಕುಂದಗೌಡ, ಖಜಾಂಚಿಯಾಗಿ  ಸುಗ್ಗೇನಹಳ್ಳಿ ವೆಂಕಟೇಶ, ಕಾರ್ಯದರ್ಶಿಗಳಾಗಿ ಸುರೇಶ ಯಳಕಪ್ಪನವರ, ಸತೀಶ ಗಜಾಪುರ, ಬಸವರಾಜಸ್ವಾಮಿ, ವೆಂಕಟೇಶ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ, ಗಣೇಶ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಕುಂಬಾರ , ಸಲಹಾ ಸಮಿತಿ ಸದಸ್ಯರಾಗಿ ಡಿ.ವಿಶ್ವನಾಥ, ಎ.ಕೆ.ಬಾಬಣ್ಣ ಸಲಹಾ ಸದಸ್ಯರಾಗಿ ಗಿರೀಶಕುಮಾರ, ಪ್ರಶಾಂತ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಬಳಿಕ ರಾಜ್ಯ ಉಪಾಧ್ಯಕ್ಷ ಕೆ.ಕೊಟ್ರೇಶ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದಾಗ ಮಾತ್ರ ಆಡಳಿತ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು. ಕರ್ನಾಟಕ ಪ್ರೆಸ್ ಕ್ಲಬ್ ನಿಂದ ನಮ್ಮ ಸಂಘದ ಪತ್ರಕರ್ತರಿ...

ಮಸ್ಕಿ : ಮೊಹರಮ್ ಕಡೆಯ ದಿನ,ದೇವರ ದಪ್ನ

ಇಮೇಜ್
ಮಸ್ಕಿ : ತಾಲ್ಲೂಕಿನ ಮೇದಿಕಿನಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬ ಮೊಹರಂ ಭಾನುವಾರ ಕಡೆಯ ದಿನ ದೇವರ ದಪ್ನ. ಕಳೆದ ಐದು ದಿನಗಳ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಮೊಹರಂ ಎಂದರೆ ಜಾತ್ಯಾತೀತವಾಗಿ ಆಚರಣೆ ,ಕುಣಿತ,ವಿವಿಧ ವೇಷ, ಮುಖ್ಯವಾಗಿ ಅಳ್ಳಾಳಿ ಬವ್ವಾ ವೇಷಧಾರಿಗಳು ಐದಾರು ದಿನಗಳ ಕಾಲ ಬಿಕ್ಷಾಟನೆ ಮಾಡಿ ದೇವರಿಗೆ ಹರಕೆ ಸಮರ್ಪಣೆ ವಾಡಿಕೆ ಇದೆ. ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬ ಬಲು ಜೋರು ವಿಶೇಷವಾಗಿ ಎಷ್ಟೋ ಗ್ರಾಮಗಳಲ್ಲಿ ಮುಸ್ಲಿಂ ಇಲ್ಲದಿದ್ದರೂ ಕೂಡ ಮೊಹರಂ ಹಬ್ಬ ಮನೆಮಾತು .ಮೇದಿಕಿನಾಳ ಗ್ರಾಮದ ಮಸೀದಿಯಲ್ಲಿ ಹಿಮಾಮ್ ಖಾಸಿಂ,ಹಸೇನ್ ,ಹುಸೇನ್,ಹುಸೇನಬಾಷ,ಮೌಲಾಲಿ,ಹಜರತ್ ಮೌಲಾಲಿ ಈ ರೀತಿಯಾಗಿ ಒಟ್ಟು ಆರು ದೇವರುಗಳು ಇದ್ದು , ಐದು ದಿನಗಳ ಕಾಲ ಗದ್ದಲದಲ್ಲಿ ಕೇಂದ್ರವಾಗಿ ಕಂಡು ಬರುತ್ತಿದೆ. ಮೇದಿಕಿನಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಪುರಸಭೆಗೆ ಬಂದು ಕೆಂಪು ಸಕ್ಕರೆ, ಮಾದಲಿ, ಸಜ್ಜೆರೊಟ್ಟಿ, ಬೆಲ್ಲದ ಹಾಲು ನೈವೇದ್ಯ ತಂದು ದೇವರಿಗೆ ಅರ್ಪಿಸಲು ಅನೇಕರು ಬರುತ್ತಾರೆ, ಕಥಲ್ ರಾತ್ರಿ ದಿನವಂದು ಹೋಗುವ ಕೆಂಡದ ಬೆಂಕಿಯ ಮುಂದೆ ಅಲಾಯಿ ಕುಣಿತ,ಹೆಜ್ಜೆ ,ಬೆಂಕಿಯಲ್ಲಿ ನಡೆದಾಡುವುದು ವಿವಿಧ ವೇಷಭೂಷಣ ಹೀಗೆ ಹತ್ತು ಹಲವು ಬಗೆಯ ಆಚರಣೆಯನ್ನು ಕಾಣುತ್ತೇವೆ, ಮೊಹರಂ ಎಂದರೆ ಹಲಗೆ ಬಹಳ ಮುಖ್ಯ,ಮೊಹರಂ ಆರಂಭದಿಂದ ಕೊನೆಯ ತನಕ ಹಲಗೆ ನಾದ ಪ್ರಸಿದ್ಧತೆ ಪಡೆದಿದೆ. ಮೊಹರಂ ಕೊನೆಯದಿ...

ಮಸ್ಕಿ : ಮೊಹರಮ್ ಹಬ್ಬದ ಪ್ರಯುಕ್ತ ಸಕ್ಕರೆ ಹೊದಿಕೆ

ಇಮೇಜ್
  *ಮಸ್ಕಿ* ತಾಲ್ಲೂಕಿನ ಮೆದಿಕಿನಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬ ಮೊಹರಮ್ ಇಂದು ಸಕ್ಕರೆ ಹೊದಿಕೆ ಸಂಭ್ರಮಾಚರಣೆ ಹಬ್ಬರ.  ಹಾಗೆಯೇ ಕಳೆದ ನಾಲ್ಕು ದಿನಗಳ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ. ಮೊಹರಮ್ ಎಂದರೆ ಜಾತ್ಯಾತೀತವಾಗಿ ಆಚರಣೆ ,ಕುಣಿತ,ವಿವಿಧ ವೇಷ, ಮುಖ್ಯವಾಗಿ ಅಳ್ಳಾಳಿ ಬವ್ವಾ ವೇಷಧಾರಿಗಳು ಐದಾರು ದಿನಗಳ ಕಾಲ ಬಿಕ್ಷಾಟನೆ ಮಾಡಿ ದೇವರಿಗೆ ಹರಕೆ ಸಮರ್ಪಣೆ ವಾಡಿಕೆ ಇದೆ.   ಉತ್ತರ ಕರ್ನಾಟಕದಲ್ಲಿ ಮೊಹರಮ್ ಹಬ್ಬ ಬಲು ಜೋರು ವಿಶೇಷವಾಗಿ ಎಷ್ಟೋ ಗ್ರಾಮಗಳಲ್ಲಿ ಮುಸ್ಲಿಂ ಇಲ್ಲದ ಊರಲ್ಲಿ ಕೂಡ ಮೊಹರಮ್ ಹಬ್ಬ ಮನೆಮಾತು ಮಾಡಿದೆ.ಮೆದಿಕಿನಾಳ ಗ್ರಾಮದ ಮಸೀದಿಯಲ್ಲಿ ಹಿಮಾಮ್ ಖಾಸಿಂ,ಹಸೇನ್ ,ಹುಸೇನ್,ಹುಸೇನಬಾಷ,ಮೌಲಾಲಿ,ಹಜರತ್ ಮೌಲಾಲಿ ಈ ರೀತಿಯಾಗಿ ಒಟ್ಟು ಆರು ದೇವರುಗಳು ಇದ್ದು , ಐದು ದಿನಗಳ ಕಾಲ ಮಸೀದಿಯಲ್ಲಿ ಗದ್ದಲದ ಕೇಂದ್ರವಾಗಿ ಕಂಡು ಬರುತ್ತಿದೆ. ಹಾಲಾಪೂರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಮಸೀದಿಗೆ ಬಂದು ಕೆಂಪು ಸಕ್ಕರೆ, ಮಾದಲಿ,ಸಜ್ಜೆರೊಟ್ಟಿ, ಬೆಲ್ಲದ ಹಾಲು ನೈವೇದ್ಯ ತಂದು ದೇವರಿಗೆ ಅರ್ಪಿಸಲು ಅನೇಕರು ಬರುತ್ತಾರೆ, ಕಥಲ್ ರಾತ್ರಿ ದಿನವಂತು ಊರಿಯುವ ಕೆಂಡದ ಬೆಂಕಿಯ ಮುಂದೆ ಅಲಾಯಿ ಕುಣಿತ,ಹೆಜ್ಜೆ ,ಬೆಂಕಿಯಲ್ಲಿ ನಡೆದಾಡುವುದು ವಿವಿಧ ವೇಷಭೂಷಣ ಹೀಗೆ ಮೊಹರಮ್ ಎಂದರೆ ಹತ್ತು ಹಲವಾರು ಬಗೆ ಬಗೆಯ ಆಚರಣೆಯನ್ನು ಕಾಣುತ್ತೇವೆ,ಮೊಹರಮ್ ಎಂದರೆ ಹಲಗ...

ಹಕ್ಕುಪತ್ರ ಕೊಡಿ ಇಲ್ಲ ರೈತರಗೆ ಭೂಮಿ ನೀಡಿ ; ಸಿದ್ದನಗೌಡ ತುರುವಿಹಾಳ

ಇಮೇಜ್
  ಮಸ್ಕಿ : ಪಟ್ಟಣದ ಪರಾಪುರ ರಸ್ತೆ ಯಲ್ಲಿನ ಪುರಸಭೆ ವತಿಯಿಂದ ಜನವಸತಿಗಾಗಿ ಖರೀದಿಸಿದ ಭೂಮಿಯು ರಸ್ತೆ ಇಲ್ಲದೇ ಅವೈಜ್ಞಾನಿಕವಾಗಿದ್ದು,  ಸರಿ ಸುಮಾರು ಮೂರನಾಲ್ಕು ವರ್ಷಗಳೇ ಗತಿಸಿದರೂ ಇಲ್ಲಿಯವರೆಗೆ ಪುರಸಭೆ ಚುಕ್ಕಾಣಿ ಹಿಡಿದವರು ಹಾಗೂ ಅಧಿಕಾರಿಗಳು ವಸತಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡದೇ ಬೇರೆಯವರ ಬಗ್ಗೆ ಮಾತನಾಡುತ್ತಾ ಇರುವುದು ಎಷ್ಟರ ಮಟ್ಟಿಗೆ ಸರಿ..! ಎಂದು ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ತುರುವಿಹಾಳ ರವರು ಖಡಕ್ ಎಚ್ಚರಿಕೆ ನೀಡಿದರು. ಗುರುವಾರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ನೆನೆಗುದಿಗೆ ಬಿದ್ದಿರುವ ವಸತಿ ಮನೆಗಳ ಹಂಚಿಕೆಯನ್ನು ತಾಲೂಕು ಪಂಚಾಯತ್ ಇಒ ಅವರು ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು. ಜನರಿಗೆ ದಾರಿ ತಪ್ಪಿಸುವ ಕೆಲಸ ಬಿಟ್ಟು ಪುರಸಭೆಯಲ್ಲಿ ಆಡಳಿ ವಹಿಸಿಕೊಂಡವರು ಸರಕಾರಕ್ಕೆ ಹಾಗೂ ಜನರಿಗೆ ಮೋಸ ಮಾಡಿದ್ದೀರಿ ಎಂದು ಆರೋಪಿಸಿದರು. ಫಲಾನುಭವಿಗಳ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಆದಷ್ಟೂ ಬೇಗನೆ ಹಕ್ಕು ಪತ್ರವನ್ನು ನೀಡಬೇಕು ಇಲ್ಲವಾದರೆ ರೈತರಿಂದ ಪಡೆದುಕೊಂಡ ಭೂಮಿಯನ್ನು ಮರಳಿ ಕೊಡಿ ಎಂದು ಪತ್ರಿಕಾ ಹೇಳಿಕೆ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ, ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ,ನಾರಾಯಣಪ್ಪ ಕಾಸ್ಲಿ, ಮಲ್ಲಯ್ಯ ಮುರಾರಿ,ಯೂತ್ ಕಾಂಗ್ರೆಸ್...

"ಸುದೀರ್ಘ ೩೨ ವರ್ಷಗಳ ಶಿಕ್ಷಕವೃತ್ತಿಗೆ ವಿದಾಯ ಹೇಳಿದ ಎಚ್ ಕುಲುಸಂಬಿ"

ಇಮೇಜ್
*ವಿದ್ಯಾರ್ಥಿಯ ಅಚ್ಚು ಮೆಚ್ಚಿನ ಶಿಕ್ಷಕಿ ಎಚ್ ಕುಲುಸಂಬಿ * ಕೊಟ್ಟೂರು: ಸುದೀರ್ಘವಾಗಿ ೩೨ ವರ್ಷಗಳ ಪವಿತ್ರವಾದ ಶಿಕ್ಷಕ ವೃತ್ತಿಗೆ ಕೊಟ್ಟೂರಿನ ಕುಲುಸಂಬಿ ಅವರು ಸಾಕ್ಷಿಯಾಗಿದ್ದಾರೆ. ಶಿಕ್ಷಕ ವೃತ್ತಿಯೇ ಪವಿತ್ರವಾದದ್ದು ಎಂಬುದು ಜನರ ಅಭಿಮತ. ಅಂತಹ ಶಿಕ್ಷಕ ವೃತ್ತಿಯಲ್ಲಿ ಸುದೀರ್ಘವಾಗಿ ೩೨ ವರ್ಷಗಳನ್ನು ನಿರಂತರವಾಗಿ ಯಶಸ್ವಿಯಾಗಿ ನಿರ್ವಹಿಸಿ, ನಿವೃತ್ತಿಯಾಗಿದ್ದಾರೆ. ಕುಲುಸಂಬಿಯವರು ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯಲ್ಲಿ ೪ ವರ್ಷ ಶಿಕ್ಷಕಿಯಾಗಿ ನಂತರ  ಕೊಟ್ಟೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೀವನಗರದಲ್ಲಿ ೨೮ ವರ್ಷಗಳ ಕಾಲ ಶಿಕ್ಷಕರಾಗಿ, ಮಕ್ಕಳಿಗೆ, ಪೋಷಕರಿಗೆ ಅಚ್ಚು ಮೆಚ್ಚಿನವರಾಗಿದ್ದು, 30.06.2025 ಸೋಮವಾರ ದಂದು ವಯೋ ನಿವೃತ್ತಿ ಹೊಂದಿದ್ದು ಅವರ ಜೀವನ ಯಶಸ್ಸಿನಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳು ,ಪೋಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

ತಾಲೂಕು ಕಛೇರಿಯಲ್ಲಿ ಕಂದಾಯ ದಿನಾಚರಣೆ ಕಾರ್ಯಕ್ರಮ

ಇಮೇಜ್
  ಕೊಟ್ಟೂರಿನಲ್ಲಿ ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಕ ನುಡಿಗಳನ್ನು ನುಡಿಯುತ್ತಾ, ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಯಗಳನ್ನು ಮಾಡಿ ಟಿಜಿಟಲೀಕರಣಗೊಳಿಸಲಾಗುತ್ತಿದೆ. ಭೂಸುರಕ್ಷಾ ಯೋಜನೆಯಡಿಯಲ್ಲಿ ಭೂಸುರಕ್ಷಾ ಯೋಜನೆ ಅಡಿ ಅಭಿಲೇಖಾಲಯದ ಕೈಬರಹ ಪಹಣಿ ಹಾಗೂ ಇತರೆ ದಾಖಲೆಗಳನ್ನು ಟಿಜಿಟಲೀಕರಣ ಮಾಡಲಾಗುತ್ತಿದ್ದು, ಈವರೆಗೆ 7,22,218 ಪುಟಗಳಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿರುತ್ತದೆ. ಜನರಿಗೆ ತ್ವರಿತ ಸೇವೆಯನ್ನು ಮಾಡುತ್ತಾ ಜನರಿಗೆ ಹತ್ತಿರವಾಗಿರುವ ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದೆ ಎಂದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಕೆ.ನೇಮಿರಾಜನಾಯ್ಕ ರವರು ಕಾರ್ಯಕ್ರವನ್ನು ಉದ್ಘಾಟಿಸಿ ಇತ್ತೀಚಿನ ದಿನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮೊಬೈಲ್ ನಲ್ಲಿ ಅನೇಕ ಯ್ಯಾಪ್ಗಳ ಮೂಲಕ ಕಾರ್ಯವನ್ನು ನಿರ್ವಹಿಸಬೇಕಾಗಿರುತ್ತದೆ. ಇವರಿಗೆ ಇದರಿಂದ ತೊಂದರೆಯಾಗುತ್ತಿರುವುದನ್ನು ಅರಿತು ಸರ್ಕಾರದಿಂದ ಲ್ಯಾಪ್ಟಾಪ್ಗಳನ್ನು ನೀಡಲಾಗಿದೆ. ಇದರಿಂದ ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯವನ್ನು ತ್ವರಿತವಾಗಿ ಮಾಡಲು ಅನುಕೂಲವಾಗಲಿದೆ.  ಕಂದಾಯ ಇಲಾಖೆಗೆ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಸೌಜನ್ಯಯುತವಾಗಿ ವರ್ತಿಸಿ ಅವರಿಗೆ ಸಹಾಯವನ್ನು ಮಾಡುವಂತೆ ಕಿವಿಮ...