*ನಮ್ಮನ್ನಗಲಿದ ಪತ್ರಕರ್ತರಿಗೆ ನುಡಿನಮನ ವಿಶ್ವ ಪತ್ರಿಕಾ ದಿನಾಚರಣೆಗೆ ಮೆರುಗು *
"ಪ್ರಸ್ತುತ ಸಮಾಜಕ್ಕೆ ಪತ್ರಕರ್ತರ ಸೇವಾ ಅಪಾರ"
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ಬರುವ ಸೆಂಟ್ ಮೈಕಲ್ ಸ್ಕೂಲ್ ನಲ್ಲಿ ಕರ್ನಾಟಕ ಪತ್ರಕರ್ತ ರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿನ ತಮ್ಮದೇ ಆದಂತಹ ಪತ್ರಿಕಾ ರಂಗದಲ್ಲಿ ತಮ್ಮ ಅಳಿಲು ಸೇವೆಯನ್ನು ತಮ್ಮ ತಮ್ಮ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿ ಸಮಾಜದ ಅಂಕುಡೊಂಕುಗಳನ್ನು ಪತ್ರಿಕೆಗಳಲ್ಲಿ ಬರೆದು ಸರ್ಕಾರವನ್ನು ತಿದ್ದುವ ನಿಟ್ಟಿನಲ್ಲಿ ತಮ್ಮಗಳ ಪತ್ರಿಕೆ ಯಲ್ಲಿ ಬರವಣಿಗೆ ಮೂಲಕ ಬರೆದು ಸಮಾಜಕ್ಕೆ ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಆಗುವಂತ ಕೆಲಸಗಳು ಹಾಗೂ ಸೌಲಭ್ಯಗಳು ಆಳುವಂತ ಸರ್ಕಾರಗಳಿಗೆ ಪತ್ರಿಕೆಗಳಲ್ಲಿ ಬರೆಯುವುದರೊಂದಿಗೆ ಚಾಟಿ ಬಿಸುವಂತ ಪದಗಳನ್ನು ಪತ್ರಿಕೆಗಳಲ್ಲಿ ಬಳಸಿ ಸುದ್ದಿಗಳನ್ನು ಮಾಡಿ ಕ್ಷೇತ್ರದ ಜನಗಳಿಗೆ ನ್ಯಾಯ ಸಿಗುವಂತೆ ಆ ಸಮಯದ ಶಾಸಕರುಗಳು ಸಹ ಭಯ ಎಂಬ ಅಳುಕನ್ನು ಇಟ್ಟುಕೊಂಡು ಪತ್ರಕರ್ತರನ್ನು ಸ್ನೇಹಿತರಂತೆ ಕಂಡು ಜನಗಳಿಗೆ ಸಮಸ್ಯೆ ಇರುವಂತ ಸ್ಥಳದಲ್ಲಿ ಪತ್ರಿಕೆಯ ವರದಿಗಾರರು ಬಂದರೆ ಸಾಕು, ಆ ಸ್ಥಳದಲ್ಲಿದ್ದ ಸಮಸ್ಯೆ ಪಾರಿವಾರವಾಗುತ್ತೆ ಎಂಬ ದೊಡ್ಡ ನಂಬಿಕೆ ಜನರಿಗೆ ಇತ್ತು,ಅನ್ನುವ ಸಾಮರ್ಥ್ಯ ವನ್ನು ನಮ್ಮ ಹಿರಿಯರಾದ ಹಾಗೂ ಕೆಲ ಕಿರಿಯರಾದ ನಮ್ಮನ್ನಗಲಿದ ಪತ್ರಕರ್ತರ ತಮ್ಮ ಪತ್ರಿಕಾ ರಂಗದಲ್ಲಿ ಅನೇಕ ರೀತಿಯ ಸುದ್ದಿಯನ್ನು ಮಾಡಿದವರ ಬಗ್ಗೆ ಈ ಸಮಯದಲ್ಲಿ ನುಡಿನಮನ ಕಾರ್ಯಕ್ರಮವನ್ನು ಮಾಡುವುದರ ಮೂಲಕ ನಮ್ಮನ್ನಗಲಿದರನ್ನು ಮೆಲುಕು ಹಾಕುವುದರೊಂದಿಗೆ ಈ ವಿಶ್ವ ಪತ್ರಿಕಾ ದಿನಾಚರಣೆಯ ಅಂಗವಾಗಿ ಈ ದಿನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಮ್ಮನ್ನಗಲಿದ ಪತ್ರಕರ್ತರ ನೆನಪಿಗಾಗಿ ಗಿಡ ನೆಡುವುದರ ಮೂಲಕ ಮಾನ್ಯ ತಾಲೂಕು ದಂಡಧಿಕಾರಿಗಳಾದ ಕುಮಾರಿ ವಿ. ಕೆ ನೇತ್ರಾವತಿ ರವರು ಉದ್ಘಾಟನೆ ಮಾಡಿ ಉದ್ಘಾಟನಾ ಭಾಷಣ ಮಾಡುದರ ಮೂಲಕ ವೇದಿಕೆಯಲ್ಲಿ ud ಹಾಗೂ ಮಾನ್ಯ ಡಿ ವೈ ಎಸ್ ಪಿ ಮಲ್ಲೇಶ್ ದೊಡ್ಡ ಮನಿ,ರವರು ಕಾರ್ಯಕ್ರಮ ಕುರಿತು ಮಾತಾಡುತ್ತ ಈಗಿನ ದಿನಮಾನಗಳಲ್ಲಿ ಪತ್ರಕರ್ತರು ನಿಜ ಸಂಗತಿಗಳನ್ನು ಬರೆಯುವಂತ ಪ್ರಾಮಾಣಿಕವಾಗಿ ಪತ್ರಕರ್ತರಿಗೆ ಕಷ್ಟ ಕಾರ್ಪಣ್ಯಗಳನ್ನು ಈ ದಿನ ಅನುಭವಿಸುತ್ತ ಸ್ಥಿತಿ ಉಂಟಾಗಿದೆ ದೇಶದಲ್ಲಿ ಚುನಾಯಿತ ಪ್ರತಿನಿಧಿಗಳು ಪತ್ರಕರ್ತರ ಪ್ರಾಮಾಣಿಕವಾಗಿ ಸುದ್ದಿ ಮಾಡಲು ಆಗದೇ ಇರುವ ಕಾರಣ ಈ ದಿನಮಾನಗಳಲ್ಲಿ ಪತ್ರಕರ್ತರಿಗೆ ಎಲ್ಲಾ ರೀತಿಯ ತೊಂದರೆಗಳು ಉಂಟಾಗುವಂತ ಪರಿಸ್ಥಿತಿ ನಾವು ನೋಡಬಹುದಾಗಿದೆ ಹಾಗೆ ಪತ್ರಕರ್ತರಿಗೆ 20- 25 ವರ್ಷಗಳ ಹಿಂದೆ ಪತ್ರಕರ್ತರು ಹಣಕ್ಕಾಗಿ ಪತ್ರಿಕ ರಂಗದಲ್ಲಿ ಬರುತ್ತಿರಲಿಲ್ಲ ಈ ದೇಶದ ವ್ಯವಸ್ಥೆಯನ್ನು ಸರಿಪಡಿಸಲಿಕ್ಕೆ ತಮ್ಮ ಬರವಣಿಗಳ ಮೂಲಕ ಅಂಕುಡೊಂಕುಗಳನ್ನು ತಿದ್ದುತ್ತಿದ್ದರು ಹಾಗೆ ಜನರಿಗೆ ಬೇಕಾಗುವಂತ ವ್ಯವಸ್ಥೆಗೆ ಸಮಸ್ಯೆಗಳು ಸಹ ಪರಿಹಾರವಾಗುತ್ತಿದ್ದವು . ಈಗಿನ ವಾಸ್ತವವಾಗಿ ನೋಡಿದರೆ ಆ ಒಂದು ಕಾಲದ ಪತ್ರಿಕಾ ರಂಗವು ಕಾಣಲಿಲ್ಲದಂತಾಗಿದೆ ಈ ದಿನಮಾನಗಳಲ್ಲಿ 80ರಷ್ಟು ಪತ್ರಿಕ ರಂಗವೂ ಹಣದ ಹಾದಿಯಲ್ಲಿ ಹೋಗುತ್ತಿದ್ದಾರೆ ಎನ್ನ ಕಲ್ಪನೆ ಜನಗಳಲ್ಲೇ ಮೂಡುತ್ತಿದೆ, ಎಂದು ತಿಳಿಸಿದರು,
ಹಾಗೆ ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಸಿದ್ದರಾಮ ಹಿರೇಮಠ್ ಹಿರಿಯ ಪತ್ರಕರ್ತರು ರವರು ನಮ್ಮ ನಗಲಿದ ಪತ್ರಕರ್ತರ ಕುರಿತು ಅವರ ಒಡನಾಟದಲ್ಲಿದ್ದಂತ ಅನುಭವಗಳನ್ನು ಮೆಲುಕು ಹಾಕುತ್ತಾ ಆ ಸಮಯದಲ್ಲಿ ಎಲ್ಲಾರು ಜೊತೆಗೂಡಿ ಸುದ್ದಿಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿ ನೆನಪಿಸಿಕೊಂಡು ಕಾರ್ಯಕ್ರಮಕ್ಕೆ ಮೆರವ ನೀಡಿದರು.
ಹಾಗೆ ಕರ್ನಾಟಕ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾದ ಬಿ ಎಚ್ ಎಸ್ ರಾಜು ರವರು ಪತ್ರಕರ್ತರ ಕುರಿತು ಮಾತನಾಡಿದರು, ಹಾಗೆ ಸೆಂಟ್ ಮೈಕಲ್ ಸ್ಕೂಲಿನ ವ್ಯವಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿಜಯರಾಜ್ ಗಂಟೆಯಾಳ್ ರವರು ಸಹ ಪತ್ರಕರ್ತರ ನುಡಿ ನಮನದ ಕಾರ್ಯಕ್ರಮ ಕುರಿತು ಮಾತನಾಡಿದರು, ಹಾಗೆ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕಾಟೇರ ಹಾಲೇಶ್ ಸಹ ನಮ್ಮ ಹಿರಿಯ ದಿವಂಗತ ಮಲ್ಲಣ್ಣ ರವರನ್ನು ಹಾಗೆ ಹಿ.ಮಾ ಬಸುರಾಜ್ ರವರನ್ನು ಹಾಗೂ ಇನ್ನುಳಿದ ಎಲ್ಲಾ ಪತ್ರಿಕ ರಂಗದ ಒಡನಾಟದಲ್ಲಿದ್ದಂತವರನ್ನು ನೆನೆಯುವುದರ ಮೂಲಕ ತಮ್ಮ ಅನಿಸಿಕೆ ತಿಳಿಸಿದರು.
ಹಾಗೆ ಈ ಸಂದರ್ಭದಲ್ಲಿ ಕೊಟ್ರೇಶ್ ಕೊಟ್ಟೂರು ಪ್ರೇಸ್ ಕ್ಲಬ್ ನಾ ರಾಜ್ಯ ಉಪಾಧ್ಯಕ್ಷರು ರವರು ಸಹ ಮಾತನಾಡಿದರು ಮಾಜಿ ತಾಲೂಕ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಮ್ಮ ರಾಜಣ್ಣ ರವರು ಸಹ ಮಾತನಾಡಿದರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ವೆಂಕಟೇಶ್, ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷರಾದ ಸುನಿಲ್ ಗೌಡ್ರು ಹಾಗೂ ಕಾರ್ಯದರ್ಶಿಗಳಾದ ಗಿರೀಶ್, ಟಿಎಸ್ಎಸ್ ಸಂಘದ ಜಿಲ್ಲಾ ಪಂಚಾಯತ್ ಸಂಚಾಲಕರಾದ ಎಸ್ ದುರ್ಗೇಶ್, ಶಾಮಿಯಾನ ಅಂಡ್ ಸಪ್ಲೈರ್ ಸಂಘದ ಅಧ್ಯಕ್ಷರಾದ ಮೆಕ್ಕೆಲರ್ ಚಂದ್ರಣ್ಣ, ಹಾಗೂ ನಮ್ಮನಗಲಿದ ಪತ್ರಕರ್ತರ ಕುಟುಂಬದ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ