ಮಸ್ಕಿ : ಮೊಹರಮ್ ಹಬ್ಬದ ಪ್ರಯುಕ್ತ ಸಕ್ಕರೆ ಹೊದಿಕೆ
*ಮಸ್ಕಿ* ತಾಲ್ಲೂಕಿನ ಮೆದಿಕಿನಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬ ಮೊಹರಮ್ ಇಂದು ಸಕ್ಕರೆ ಹೊದಿಕೆ ಸಂಭ್ರಮಾಚರಣೆ ಹಬ್ಬರ.
ಹಾಗೆಯೇ ಕಳೆದ ನಾಲ್ಕು ದಿನಗಳ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ. ಮೊಹರಮ್ ಎಂದರೆ ಜಾತ್ಯಾತೀತವಾಗಿ ಆಚರಣೆ ,ಕುಣಿತ,ವಿವಿಧ ವೇಷ, ಮುಖ್ಯವಾಗಿ ಅಳ್ಳಾಳಿ ಬವ್ವಾ ವೇಷಧಾರಿಗಳು ಐದಾರು ದಿನಗಳ ಕಾಲ ಬಿಕ್ಷಾಟನೆ ಮಾಡಿ ದೇವರಿಗೆ ಹರಕೆ ಸಮರ್ಪಣೆ ವಾಡಿಕೆ ಇದೆ.
ಉತ್ತರ ಕರ್ನಾಟಕದಲ್ಲಿ ಮೊಹರಮ್ ಹಬ್ಬ ಬಲು ಜೋರು ವಿಶೇಷವಾಗಿ ಎಷ್ಟೋ ಗ್ರಾಮಗಳಲ್ಲಿ ಮುಸ್ಲಿಂ ಇಲ್ಲದ ಊರಲ್ಲಿ ಕೂಡ ಮೊಹರಮ್ ಹಬ್ಬ ಮನೆಮಾತು ಮಾಡಿದೆ.ಮೆದಿಕಿನಾಳ ಗ್ರಾಮದ ಮಸೀದಿಯಲ್ಲಿ ಹಿಮಾಮ್ ಖಾಸಿಂ,ಹಸೇನ್ ,ಹುಸೇನ್,ಹುಸೇನಬಾಷ,ಮೌಲಾಲಿ,ಹಜರತ್ ಮೌಲಾಲಿ ಈ ರೀತಿಯಾಗಿ ಒಟ್ಟು ಆರು ದೇವರುಗಳು ಇದ್ದು , ಐದು ದಿನಗಳ ಕಾಲ ಮಸೀದಿಯಲ್ಲಿ ಗದ್ದಲದ ಕೇಂದ್ರವಾಗಿ ಕಂಡು ಬರುತ್ತಿದೆ. ಹಾಲಾಪೂರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಮಸೀದಿಗೆ ಬಂದು ಕೆಂಪು ಸಕ್ಕರೆ, ಮಾದಲಿ,ಸಜ್ಜೆರೊಟ್ಟಿ, ಬೆಲ್ಲದ ಹಾಲು ನೈವೇದ್ಯ ತಂದು ದೇವರಿಗೆ ಅರ್ಪಿಸಲು ಅನೇಕರು ಬರುತ್ತಾರೆ, ಕಥಲ್ ರಾತ್ರಿ ದಿನವಂತು ಊರಿಯುವ ಕೆಂಡದ ಬೆಂಕಿಯ ಮುಂದೆ ಅಲಾಯಿ ಕುಣಿತ,ಹೆಜ್ಜೆ ,ಬೆಂಕಿಯಲ್ಲಿ ನಡೆದಾಡುವುದು ವಿವಿಧ ವೇಷಭೂಷಣ ಹೀಗೆ ಮೊಹರಮ್ ಎಂದರೆ ಹತ್ತು ಹಲವಾರು ಬಗೆ ಬಗೆಯ ಆಚರಣೆಯನ್ನು ಕಾಣುತ್ತೇವೆ,ಮೊಹರಮ್ ಎಂದರೆ ಹಲಗೆ ಬಹಳ ಮುಖ್ಯ,ಮೊಹರಮ್ ಆರಂಭದಿಂದ ಹಿಡಿದು ಕೊನೆಯ ತನಕ ಹಲಗೆ ನಾದ ಪ್ರಸಿದ್ಧತೆ ಪಡೆದಿದೆ. ಮೊಹರಮ್ ಕೊನೆಯದಿನದಂದು ಗ್ರಾಮದ ಬೀದಿಗಳಲ್ಲಿ ಅಲಾಯಿ ದೇವರುಗಳ ದಫನ್ ನಡೆಯುತ್ತೆ ಇದರಲ್ಲಿ ಗ್ರಾಮಸ್ಥರು ಸೇರಿ ಭಕ್ತಿ ಮರೆಯುತ್ತಾರೆ.ಒಟ್ಟರೆ ಭಾವೈಕ್ಯತೆ ಮೆರೆಯುವ ಮೊಹರಮ್ ಐದು ದಿನಗಳ ಕಾಲ ಸಂಭ್ರಮದ ಮನೆ ಮಾಡುತ್ತದೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ