ಮಸ್ಕಿ : ಮೊಹರಮ್ ಕಡೆಯ ದಿನ,ದೇವರ ದಪ್ನ

ಮಸ್ಕಿ : ತಾಲ್ಲೂಕಿನ ಮೇದಿಕಿನಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬ ಮೊಹರಂ ಭಾನುವಾರ ಕಡೆಯ ದಿನ ದೇವರ ದಪ್ನ.

ಕಳೆದ ಐದು ದಿನಗಳ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಮೊಹರಂ ಎಂದರೆ ಜಾತ್ಯಾತೀತವಾಗಿ ಆಚರಣೆ ,ಕುಣಿತ,ವಿವಿಧ ವೇಷ, ಮುಖ್ಯವಾಗಿ ಅಳ್ಳಾಳಿ ಬವ್ವಾ ವೇಷಧಾರಿಗಳು ಐದಾರು ದಿನಗಳ ಕಾಲ ಬಿಕ್ಷಾಟನೆ ಮಾಡಿ ದೇವರಿಗೆ ಹರಕೆ ಸಮರ್ಪಣೆ ವಾಡಿಕೆ ಇದೆ. ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬ ಬಲು ಜೋರು ವಿಶೇಷವಾಗಿ ಎಷ್ಟೋ ಗ್ರಾಮಗಳಲ್ಲಿ ಮುಸ್ಲಿಂ ಇಲ್ಲದಿದ್ದರೂ ಕೂಡ ಮೊಹರಂ ಹಬ್ಬ ಮನೆಮಾತು .ಮೇದಿಕಿನಾಳ ಗ್ರಾಮದ ಮಸೀದಿಯಲ್ಲಿ ಹಿಮಾಮ್ ಖಾಸಿಂ,ಹಸೇನ್ ,ಹುಸೇನ್,ಹುಸೇನಬಾಷ,ಮೌಲಾಲಿ,ಹಜರತ್ ಮೌಲಾಲಿ ಈ ರೀತಿಯಾಗಿ ಒಟ್ಟು ಆರು ದೇವರುಗಳು ಇದ್ದು , ಐದು ದಿನಗಳ ಕಾಲ ಗದ್ದಲದಲ್ಲಿ ಕೇಂದ್ರವಾಗಿ ಕಂಡು ಬರುತ್ತಿದೆ. ಮೇದಿಕಿನಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಪುರಸಭೆಗೆ ಬಂದು ಕೆಂಪು ಸಕ್ಕರೆ, ಮಾದಲಿ, ಸಜ್ಜೆರೊಟ್ಟಿ, ಬೆಲ್ಲದ ಹಾಲು ನೈವೇದ್ಯ ತಂದು ದೇವರಿಗೆ ಅರ್ಪಿಸಲು ಅನೇಕರು ಬರುತ್ತಾರೆ, ಕಥಲ್ ರಾತ್ರಿ ದಿನವಂದು ಹೋಗುವ ಕೆಂಡದ ಬೆಂಕಿಯ ಮುಂದೆ ಅಲಾಯಿ ಕುಣಿತ,ಹೆಜ್ಜೆ ,ಬೆಂಕಿಯಲ್ಲಿ ನಡೆದಾಡುವುದು ವಿವಿಧ ವೇಷಭೂಷಣ ಹೀಗೆ ಹತ್ತು ಹಲವು ಬಗೆಯ ಆಚರಣೆಯನ್ನು ಕಾಣುತ್ತೇವೆ,


ಮೊಹರಂ ಎಂದರೆ ಹಲಗೆ ಬಹಳ ಮುಖ್ಯ,ಮೊಹರಂ ಆರಂಭದಿಂದ ಕೊನೆಯ ತನಕ ಹಲಗೆ ನಾದ ಪ್ರಸಿದ್ಧತೆ ಪಡೆದಿದೆ. ಮೊಹರಂ ಕೊನೆಯದಿನದಂದು ಗ್ರಾಮದ ಬೀದಿಗಳಲ್ಲಿ ಅಲಾಯಿಗಳ ದೇವರ ದಫನ್ ನಡೆಯುತ್ತೆ ಇದರಲ್ಲಿ ಗ್ರಾಮಸ್ಥರು ಸೇರಿ ಭಕ್ತಿ ಮೆರೆಯುತ್ತಾರೆ. ಒಟ್ಟಾರೆ ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆಯುವ ಮೊಹರಂ ಐದು ದಿನಗಳ ಕಾಲ ಸಂಭ್ರಮದ ಮನೆಯಲ್ಲಿ ಮಾಡಿ ಇಂದು ಗೆಜ್ಜೆ ನಾದ ತಮಟೆ ಪಟಾಕಿ ಸಿಡಿಸಿ ಗ್ರಾಮದ ಸರ್ವರೂ ಕುಣಿದು ಕುಪ್ಪಳಿಸುವ ಮೂಲಕ ವಿಶೇಷವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೊನೆಯಲ್ಲಿ ಎರಡು ದೇವರುಗಳು ಪರಸ್ಪರ ಅಪ್ಪುಗೆ ಮೂಲಕ ಭೇಟಿಯಾಗಿ ನಂತರ ಒಟ್ಟಿಗೆ ತಮಟೆ ನಾದ ಪಟಾಕಿ ಶಬ್ದಗಳ ನಡುವೆ ಎಲ್ಲಾ ದೇವರುಗಳು ಹರ್ಷದಿ ದಪ್ನ ಆಗುತ್ತವೆ.ಯಾವುದೇ ಅಹಿತಕರ ಘಟನೆಗಳು ನಡೆದಂತೆ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ

ಇದೇ ಸಂದರ್ಭದಲ್ಲಿ ಮೇದಿಕಿನಾಳ ಗ್ರಾಮದ ಹಿಂದೂ ಸಮುದಾಯದ ಸರ್ವ ಸದ್ಭಕ್ತರು ಗ್ರಾಮದ ಗುರು ಹಿರಿಯರು ಸೇರಿದಂತೆ ವಿವಿಧ ಗ್ರಾಮದ ಭಕ್ತರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*