ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

 


*ಏಕಮುಖವಾಗಿ ತಮಗೆ ಬೇಕಾದ ಹಾಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಕಾಳಾಪುರ ಪಿಡಿಓ ಜಯಮ್ಮ..?*



"ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿಯವರನ್ನು ಕೂಡಲೇ ಅಮಾನತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯ"

ಕೊಟ್ಟೂರು ತಾಲ್ಲೂಕು ಕಾಳಾಪುರ ಗ್ರಾಮ ಪಂಚಾಯಿತಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರನ್ನು ಸದರಿ ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನಿಸದೇ ಪ್ರೊಟೋಕಾಲ್ ಸರಿಯಾಗಿ ಪಾಲಿಸಿಲ್ಲದ ಕಾರಣ ಹತ್ತು ಮಂದಿ ಮಂಜುನಾಥ್ ಪೂಜಾರ್ ಕಾಳಾಪುರ, ನಾಗಪ್ಪ ಕನ್ನಕಟ್ಟೆ ಕಾಳಾಪುರ,ಸಾತಾಳ ಅಂಜಿನಪ್ಪ ಚೀನ್ನೇನಹಳ್ಳಿ, ಮಾರಕ್ಕ ಕಾಳಾಪುರ, ಭರಮಪ್ಪ ಹಾರಕನಾಳು, ಶಿವಮ್ಮಚೀನ್ನೇನಹಳ್ಳಿ,ಸಿ ನಾಗರಾಜ್ ಗೌಡ ನಡುಮಾವಿನಹಳ್ಳಿ,ನಿಂಗಮ್ಮಹಾರಕನಾಳು,ನಾಗರಾಜ ಹಿರೇ ವಡ್ಡರಹಳ್ಳಿ ,ಗೀತಮ್ಮ ನಡುಮಾವಿನಹಳ್ಳಿ,ಗ್ರಾಮ ಪಂಚಾಯಿತಿ ಸದಸ್ಯರು ಹಕ್ಕುಚ್ಯುತಿ ಮಂಡಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹತ್ತು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಸಲ್ಲಿಸಿರುವ ಹಕ್ಕುಚ್ಯುತಿ ಪತ್ರದಲ್ಲಿ ಈ ಹಿಂದೆ ಪಿಡಿಓ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಪೂರ್ವಭಾವಿ ಸಭೆಗೆ ಹಾಜರಾಗುವಂತೆ ಕರೆಯೋಲೆ ನೀಡಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ನಂತರ ಸದರಿ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗುವಂತೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಇತ್ತು. 

*ಬೇಕಾ ಬಿಟ್ಟಿ ಮಾಡಿದ ಕಾರ್ಯಕ್ರಮ ಛಯಾ ಚಿತ್ರ*


ಇದು ಸರ್ಕಾರದ ನಿಯಮವೂ ಆಗಿರುತ್ತದೆ. ಆದರೆ ಈಗ ಕಾಳಾಪುರ ಪಿಡಿಓ ಶ್ರೀಮತಿ ಜಯಮ್ಮ ಮತ್ತು ಕಾರ್ಯದರ್ಶಿ ಎಸ್.ಕೆ. ಕೊಟ್ರೇಶ ಇಬ್ಬರು ಸೇರಿ ಬೇಕಂತಲೆ ನಮ್ಮಗಳ ಮೇಲೆ ಇರುವ ವೈಷಮ್ಯದಿಂದ ಹಾಗೂ ಸಿಟ್ಟಿನಿಂದ ೨೦೨೫ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಭೆ ನಡೆಸದೇ ಹಾಗೂ ಸದರಿ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡದೇ ನಮ್ಮಗಳ ಹತ್ತು ಜನ ಜನಪ್ರತಿನಿಧಿಗಳನ್ನು ಹಕ್ಕುಚ್ಯುತಿ ಬರುವಂತೆ ಮಾಡಿದ್ದಾರೆ. ನಾವು ಜನಪ್ರತಿನಿಧಿಗಳಾಗಿದ್ದು ನಮ್ಮನ್ನು ಸರ್ಕಾರಿ ಕಾರ್ಯಕ್ರಮವನ್ನು ನಡೆಯುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ನಿರ್ವಹಿಸಲು ಸರ್ವ ಸದಸ್ಯರನ್ನು ಪೂರ್ವಭಾವಿ ಸಭೆ ಕರೆದು, ಸರ್ವ ಸದಸ್ಯರ ಅಭಿಪ್ರಾಯಗಳನ್ನು ಪಡೆದು, ಒಮ್ಮತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುವುದನ್ನು ಬಿಟ್ಟು, ಏಕಮುಖವಾಗಿ ತಮಗೆ ಬೇಕಾದ ಹಾಗೆ ಆಚರಿಸಿದ್ದಾರೆ. ಆದ್ದರಿಂದ ಕಾಳಾಪುರ ಗ್ರಾಮ ಪಂಚಾಯಿತಿಯ ಪಿಡಿಓ ಮತ್ತು ಕಾರ್ಯದರ್ಶಿಯವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಕ್ಕುಚ್ಯುತಿ ಮಂಡಿಸಿದ್ದಾರೆ. ಜನಪ್ರತಿನಿಧಿಗಳನ್ನು ಆಹ್ವಾನಿಸುವುದು ಪ್ರೊಟೋಕಾಲ್ ಪ್ರಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ಕಾರಿ ಕಾರ್ಯಕ್ರಮಗಳನ್ನು ನಿರ್ವಹಿಸಬೇಕಾದುದು ಅಧಿಕಾರಿಗಳ ಕರ್ತವ್ಯ ಆದರೆ, ಪಿಡಿಓ ಮತ್ತು ಕಾರ್ಯದರ್ಶಿ ಇದನ್ನು ಮಾಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ಹಕ್ಕುಚ್ಯುತಿ ಮಂಡಿಸುತ್ತಿದ್ದೇವೆಂದು ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*