ಅಫ್ಘಾನ್ ಕರೆನ್ಸಿ ಮುಂದೆಯೂ ಮಂಡಿಯೂರಿತು ರೂಪಾಯಿ!
ಹಿಂದೊಮ್ಮೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದವರು ಭಾರತದ ಕರೆನ್ಸಿ ಮುಂದೆ ಅಮೆರಿಕ ಡಾಲರ್ ಪಾತಾಳಕ್ಕೆ ಇಳಿಯುತ್ತೆ ಅಂದಿದ್ದರು. ಇಂದು ಒಂದು ಅಮೆರಿಕ ಡಾಲರ್ ಖರೀದಿಸಲು ನಾವು 88.81 ರೂ. ಕೊಡಬೇಕು!
ವಿಷಯ ಅದಲ್ಲ; ಆ ಲೀಡರು ಏನೋ ಹೇಳಿದ ಅಂತ 2014ರಲ್ಲಿ ನಾವು ಸಾಲಾಗಿ ನಿಂತು ವೋಟ್ ಹಾಕಿ ಅವರ ಪಕ್ಷ ಗೆಲ್ಲಿಸಿದೆವು. ಇಂದು ಭಾರತದ ರೂಪಾಯಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಇಳಿಯುತ್ತಿದೆ.
2014ಕ್ಕೂ ಮುನ್ನ ಡಾಲರ್ ಬೆಲೆ 61 _ 63 ರೂಪಾಯಿ ಆಸುಪಾಸಿನಲ್ಲಿ ಇತ್ತು ಇಂದು 90 ರುಪಾಯಿಗೆ ರೂಪಾಯಿ ಇಳಿದಿದೆ. ಇದು ದೊಡ್ಡ ವಿಷಯ ಅಲ್ಲ ಅನ್ನೋಣ ಬಿಡಿ. ಇದಕ್ಕೆ ನಮ್ಮ ವಿತ್ತ ಸಚಿವರು ಹೇಳೋದು ಬೇರೇನೇ ಇದೆ.
ಈಗ ರೂಪಾಯಿ ವಿಷಯದಲ್ಲಿ ಮತ್ತೊಂದು ರೋಚಕ (ನಾಚುವಂತಹ) ವಿಷಯ ಇಲ್ಲಿ ಹಂಚಿಕೊಳ್ಳಬೇಕಿದೆ. ಅದೇನೆಂದರೆ ನಮ್ಮ ರೂಪಾಯಿ ಈಗ ಅಫ್ಘಾನಿಸ್ತಾನದ ಅಫ್ಘಾನ್ ಮುಂದೆಯೂ ಮಂಡಿಯೂರಿದೆ! ಒಂದು ಅಫ್ಘಾನ್ ಬೆಲೆ ಈಗ 1 ರೂಪಾಯಿ 36 ಪೈಸೆಗೆ ಏರಿದೆ. ಇದೇ ಕರೆನ್ಸಿ 2014ರಲ್ಲಿ 93 ಪೈಸೆ ಇತ್ತು. ನಾವೆತ್ತ ಸಾಗುತ್ತಿದ್ದೇವೆ ನೀವೇ ಯೋಚಿಸಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ