ದೇವೇಗೌಡ 2 ನಾಲಿಗೆ ಮನುಷ್ಯ
ಸುದೀರ್ಘ ದಿನಗಳ ನಂತರ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ತಮ್ಮ ರಾಜಕೀಯ ಕಡುವೈರಿ ಎನಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರನ್ನು ಗುಣಗಾನ ಮಾಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರು ಟೀಕಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಬದುಕಿದ್ದಾಗ ಒಂದು ರೀತಿ ಕಷ್ಟ ಕೊಟ್ಟು ಅವರನ್ನು ಪಕ್ಷದಿಂದಲೇ ಉಚ್ಛಟನೆ ಮಾಡಿಸಿದ್ದ ದೇವೇಗೌಡ ರು ಈಗ ಆತ್ಮೀಯತೆಯ ಮಾತಾಡಿರುವುದು ಎರಡು ಬಗೆಯ ನಾಲಿಗೆಗೆ ಉದಾಹರಣೆಯಾಗಿದೆ.
ದೇವೇಗೌಡರು ರಾಮಕೃಷ್ಣ ಹೆಗ್ಗಡೆಯವರಿಗೆ ಮೋಸ ಮಾಡಿದ್ದಾರೆ 1994 ರಲ್ಲಿ ಮುಖ್ಯಮಂತ್ರಿ, 1996 ರಲ್ಲಿ ಪ್ರಧಾನಿಯಾಗಬೇಕಿದ್ದದ್ದು ದೇವೇಗೌಡರಲ್ಲ ಬದಲಾಗಿ ರಾಮಕೃಷ್ಣ ಹೆಗ್ಗಡೆಯವರು.1994 ರಲ್ಲಿ ಜನಾತಾಪಕ್ಷ ಅಧಿಕಾರಕ್ಕೆ ಬಂದಾಗ ವಿಧಾನಸೌಧದ ಸುತ್ತಲೂ ಸೇರಿದ್ದ ಅರ್ತಾತ್ ಸೇರಿಸಿದ್ದ ಜನಸಂದಣಿ ಯಾರ ವಿರುದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಹಾಗೆಯೇ ಹೆಗಡೆಯವರು ಮುಂದೆ ಹಾಸನದಲ್ಲಿ ಲೋಕ ಶಕ್ತಿ ಪಕ್ಷದ ಪ್ರಚಾರಕ್ಕೆ ಹೋದಾಗ ಹೆಗಡೆಯವರ ಮೇಲಾದ ಕಲ್ಲೆಸೆತದ ಹಿಂದೆ ಯಾರಿದ್ದರು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.
ವೀರೇಂದ್ರ ಪಾಟೀಲರು, ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಹಾಗೂ ಬೊಮ್ಮಯಿ ಈ ನಾಲ್ವರೂ ಒಬ್ಬರಿಗೊಬ್ಬರು ಪರಮ ಮಿತ್ರರು ಮೇಲಾಗಿ ನಿಜಲಿಂಗಪ್ಪನವರ ಪರಮ ಶಿಷ್ಯರು.
ದೇವೇಗೌಡರು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೇವೇಗೌಡರು ನೀಡಿದ ಕಿರುಕುಳಕ್ಕೆ ವೀರೇಂದ್ರ ಪಾಟೀಲರು ಕೆರಳಿ ದೇವೇಗೌಡ ಸ್ನೇಹಕೂಟದಿಂದ ದೂರವಾಗಿ ಜನತಾ ಪಕ್ಷ ತೊರೆದು ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಈ ರೀತಿಯ ನಿದರ್ಶನಗಳು ಸಾಕಷ್ಟಿವೆ.
ಇನ್ನೂ ಮಾನ್ಯ ಸಿದ್ದರಾಮಯ್ಯ ನವರ ಬಗ್ಗೆ ಹೇಳುವುದಾದರೆ
1983ರಲ್ಲಿ ಸ್ವಂತ ಬಲದಿಂದ ಗೆದ್ದು ಬಂದವರು ಸಿದ್ದರಾಮಯ್ಯ
ಆಗ ದೇವೇಗೌಡರು ಯಾರು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಎರಡು ಬಾರಿ ಯಾರ ಹಂಗಿಲ್ಲದೇ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಸಿದ್ದರಾಮಯ್ಯನವರನ್ನು
ರಾಮಕೃಷ್ಣ ಹೆಗಡೆ ಅವರು ತಮ್ಮ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಮಾಡಿದ್ದರು. ನಂತರದಲ್ಲಿ ಹೆಗಡೆ ಅವರ ನಡುವಿನ ಮನಸ್ತಾಪದ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ದೇವೇಗೌಡರು ಕರೆದುಕೊಂಡು ಹೋದರು.
ಹಾಗಾಗಿ ಸಿಎಂ ಸಿದ್ದರಾಮಯ್ಯ ರವರ ರಾಜಕೀಯ ಗುರು ಎಚ್.ಡಿ ದೇವೇಗೌಡರಲ್ಲ. ಸಿಎಂ ಸಿದ್ದರಾಮಯ್ಯ ರವರ ರಾಜಕೀಯ ಗುರು ರಾಮಕೃಷ್ಣ ಹೆಗಡೆಯವರು. ಸಿದ್ದರಾಮಯ್ಯರವರು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದು ದೇವೇಗೌಡರಿಂದಾಗಿ ಅಲ್ಲ, ರಾಮಕೃಷ್ಣ ಹೆಗಡೆಯವರು ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ಬೆಳೆಸಿದವರು. ತದನಂತರದಲ್ಲಿ ಸ್ವಂತ ಸಾಮರ್ಥ್ಯದಿಂದ
ಸಿದ್ದರಾಮಯ್ಯನವರೇ ದೇವೇಗೌಡರ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ರವರನ್ನು ರಾಜಕೀಯವಾಗಿ ಬೆಳೆಸಿದ್ದು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರೇ ಹೊರತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಲ್ಲ.
ಪ್ರತಿಸಾರಿ ಸಿದ್ದರಾಮಯ್ಯನವರನ್ನು ಬೆಳೆಸಿದ್ದು ನಾನು ಎಂದು ದೇವೇಗೌಡರು ಹೇಳಿಕೊಳ್ಳುತ್ತಾರೆ ಅಷ್ಟೇ. ಅವರದ್ದು ಕುಟುಂಬ ರಾಜಕಾರಣ. ಬೇರೆಯವರು ಬೆಳೆಯುವುದನ್ನು ದೇವೇಗೌಡರ ಕುಟುಂಬ ಸಹಿಸುವುದಿಲ್ಲ. ಸಿದ್ದರಾಮಯ್ಯ ನವರ ಬಲದಿಂದ ದೇವೇಗೌಡರು ಬೆಳೆದಿದ್ದು ಸಿದ್ದರಾಮಯ್ಯ ನವರು ದೇವೇಗೌಡರನ್ನು ಬಿಟ್ಟ ಮೇಲೆ ಅವರ ಪಕ್ಷ ಹೀನಾಯ ಸ್ಥಿತಿ ತಲಿಪಿರುವುದು ಕಟು ಸತ್ಯ ಎಂದು ಡಿ. ಬಸವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ