ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಕಲಚೇತನರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಮಾಚ್-2025ರ ಬಜೆಟ್ ನಲ್ಲಿ ಅನೋಮದನೆ ಮಾಡುವಂತೆ ಸರ್ಕಾರಕ್ಕೆ ಮನವಿ

ಇಮೇಜ್
  ಬೆಂಗಳೂರು : ವಿಕಲಚೇತನರಿಗೆ ತಿಂಗಳಿಗೆ ಮಾಸಾಸನ ತಿಂಗಳಿಗೆ ರೂ.5,000/-, ಹಿರಿಯ ನಾಗರೀಕರಿಗೆ ತಿಂಗಳಿಗೆ ರೂ.3,000/-, ವಿಕಲಚೇತನರಿಗೆ ಪ್ರತಿಯೊಂದು ಜಿಲ್ಲೆಯ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ 10 ತ್ರಿಚಕ್ರ ವಾಹನ ಒದಗಿಸುವ ಕುರಿತು ವಿಕಲಚೇತನರಿಗೆ ಉದ್ಯೋಗದ ಸಲುವಾಗಿ ರೂ.3.00 ಲಕ್ಷದಿಂದ 5.00 ಲಕ್ಷದವರೆಗೂ ಸಬ್ಸಿಡಿ ಮೂಲಕ ಸಾಲ ಒದಗಿಸುವ ಕುರಿತು, ವಿಕಲಚೇತನರಿಗೆ ವಿವಾಹವಾಗಲು ಆಯಾಯ ಜಿಲ್ಲಾಧಿಕಾರಿಗಳ ಮೂಲಕ 2.3.00 ಲಕ್ಷಗಳನ್ನು ವಿವಾಹಕ್ಕೆ ಪ್ರೋತ್ಸಾಹ ನೀಡುವ ಮೂಲಕ ವಿಕಲಚೇತನರಿಗೆ ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಈ ಬಗ್ಗೆ ಸರ್ಕಾರಕ್ಕೆ ಸೂಕ್ತ, ಸಲಹೆ, ಮಾರ್ಗದರ್ಶನ ಮತ್ತು ನಿರ್ದೇಶನ ನೀಡಿ ಕರ್ನಾಟಕ ರಾಜ್ಯದ ವಿಕಲಚೇತನರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಮಾಚ್-2025ರ ಬಜೆಟ್ ನಲ್ಲಿ ಅನೋಮದಿನೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿಸಿ ಕರ್ನಾಟಕ ರಾಜ್ಯದ ಎಲ್ಲಾ ವಿಕಲಚೇತನರಿಗೂ ಅನುಕೂಲ ಮಾಡಿಕೊಡಬೇಕಾಗಿ ಸಮಸ್ ವಿಕಲಚೇತನರ ಪರವಾಗಿ ಬೆಂಗಳೂರು ಉತ್ತರ ಮಾಜಿ ಎಂಪಿ ಅಭ್ಯರ್ಥಿ ಪರಸಪ್ಪ ಗಜ್ಜರಿ ಮನವಿ ಸಲ್ಲಿಸಿದರು..

ಯೂಲು ಡೆಲಿವರಿ ರೈಡರ್ಗಳಿಗಾಗಿ ಭಾರತದ ಮೊದಲ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತಾ ಕಲಿಕಾ ಉಪಕ್ರಮ ಪ್ರಾರಂಭ

ಇಮೇಜ್
  ಬೆಂಗಳೂರು, ಫೆ, 27; ಕಂಪನಿಯ ಉದ್ಯೋಗಿಯಲ್ಲದ, ಸ್ವತಂತ್ರವಾಗಿ ಹಾಗೂ ಒಪ್ಪಂದದ ಮೇಲೆ ಕೆಲಸ ಮಾಡುವವರಿಗಾಗಿ ಯುಲುಕಂಪೆನಿಯು ದೇಶದಲ್ಲೇ ಮೊದಲ ಬಾರಿ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತಾ ಕಲಿಕಾ ಮಾದರಿಯನ್ನು ಬಿಡುಗಡೆ ಮಾಡಿದೆ.  ಸಂಸ್ಥೆಯ ಮಾಹಿತಿ ಪ್ರಕಾರ 3600 ಯೂಲು ಚಾಲಕರು ಈಗಾಗಲೇ ಅಭಿಯಾನದ ಮೊದಲ ಹಂತದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣ ಹಾಗೂ ಕ್ವಿಜ್ ನ್ನು ಪೂರ್ಣಗೊಳಿಸಿದ್ದು ಯೂಲುವಿನಿಂದ ‘ ಸೇಫ್ ರೈಡರ್ ಬಿಗಿನರ್ ( ಸುರಕ್ಷಿತ ಚಾಲಕರು) ಎಂಬ ಬ್ಯಾಡ್ಜ್ ಪಡೆದುಕೊಂಡಿದ್ದಾರೆ. ಜತೆಗೆ 1200 ಚಾಲಕರು ವಿಡಿಯೋ ಮೂಲಕ ರಸ್ತೆ ಸುರಕ್ಷತೆಗೆ ಸಪಥ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.   ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಮೂರು ವಿಷಯದ ಬಗ್ಗೆ ಯೂಲು ಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಸಂಚಾರ ನಿಯಮದ ಬಗ್ಗೆ ಎಲ್ಲಾ ಚಾಲಕರಲ್ಲಿ ಅರಿವು ಮೂಡಿಸುವುದು, ಗೊಂದಲ ಪರಿಹರಿಸುವುದು ಮೊದಲ ಹೆಜ್ಜೆಯಾಗಿದೆ. ನಿರ್ಬಂಧಿತ ಹಾದಿಯಲ್ಲಿ ಸಂಚಾರ, ಪಾದಾಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ಸಿಗ್ನಲ್ ಜಂಪ್ ಮಾಡುವುದು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.   ಭಾರತದಲ್ಲಿ ಕಡಿಮೆ ವೇಗದ ವಾಹನಕ್ಕೆ ಹೆಲ್ಮೇಟ್ ಕಡ್ಡಾಯವಲ್ಲದಿದ್ದರೂ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಲು ಉತ್ತೇಜಿಸಲಾಗಿದೆ. ಜತೆಗೆ ನಿಯಮ ಉಲ್ಲಂಘಿಸಿದಲ್ಲಿ ಸಂಚಾರ ಅಧಿಕಾರಿಗಳು ಹಾಗೂ ಯೂಲು ಎರಡು ಕಡೆಯಿಂದ ದಂಡ ವಿಧ...

ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಸಂಗೀತ ಹಾಡು ಹಾಡುವ ಮೂಲಕ ಗಮನ ಸೆಳೆದ ಶಾಸಕರು

ಇಮೇಜ್
  ಮಸ್ಕಿ : ಮಾನವಿ ಪಟ್ಟಣದ ಸೂರ್ಯ ಕಲ್ಯಾಣ ಮಂಟಪದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರವರ ಮಗಳ ಹಾಗೂ ಮಸ್ಕಿ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರುವಿಹಾಳ ರವರ ಮಗನ ಆರತಕ್ಷತೆ ಸಮಾರಂಭದಲ್ಲಿ ಸಂಗೀತ ಆಯೋಜನೆ ಕಾರ್ಯಕ್ರಮದಲ್ಲಿ ಹಾಡು ಹಾಡಿ ಜನರನ್ನು ಹುರಿದುಂಬಿಸಿದರು. ವರನಟ ಡಾ. ರಾಜಕುಮಾರ್ ನಟಿಸಿ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು  ಹಾಡುವ ಮುಖಾಂತರ ಕನ್ನಡ ಪ್ರೇಮ ಮೆರೆದ ಮಸ್ಕಿ ಶಾಸಕ‌.ಆರ್ ಬಸನಗೌಡ ತುರುವಿಹಾಳ ಹಾಗೂ ಶಾಸಕ ಬಸನಗೌಡ ದದ್ದಲ ಅವರು ಸಕತ್ ಸ್ಟೆಪ್ ಹಾಕಿದರು.

ಮಸ್ಕಿ : ವಿವಿಧ ದೇವಸ್ಥಾನಗಳಲ್ಲಿ ಶಿವಸ್ಮರಣೆ

ಇಮೇಜ್
ಮಸ್ಕಿ: ಶಿವರಾತ್ರಿ ಅಂಗವಾಗಿ 2ನೇ ಶ್ರೀಶೈಲ ಎಂದೇ ಪ್ರಖ್ಯಾತಿ ಪಡೆದಿರುವ ಪಟ್ಟಣದ ಐತಿಹಾಸಿಕ ಬೆಟ್ಟದ ಮಲ್ಲಿಕಾರ್ಜುನ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ಪುರಸ್ಕಾರಗಳು ನಡೆದವು. ಬೆಟ್ಟದ ಮಲ್ಲಿಕಾರ್ಜುನ ದೇವರ ಅರ್ಚಕರಾದ ಸಿದ್ಧಯ್ಯ ಹೆಸರೂರು ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ ಕೈಂಕರ್ಯಗಳು ನಡೆದವು. ಭಕ್ತರು ಉಪವಾಸ ವ್ರತ ಕೈಗೊಂಡು ಶಿವನ ಕೃಪೆಗೆ ಪಾತ್ರರಾದರು. ನಂತರ ರಾತ್ರಿ ವಿವಿಧ ದೇವಾಲಯಗಳಲ್ಲಿ ಶಿವ ಭಜನೆ ಮಾಡುವುದರ ಮುಖಾಂತರ ಭಕ್ತಿ ಪರಾಕಾಷ್ಠೆ ಮೆರೆದರು. ಮಸ್ಕಿಯ ಆರ್.ಎಸ್.ಎಸ್ ಸಂಘಟನೆಯ ಸಂಘಟಕರು ವಾದ್ಯ ಪರಿಕರಗಳ ಮೂಲಕ ವಿವಿಧ ಶಿವನ ದೇವಸ್ತಾನಗಳಿಗೆ ತೆರಳಿ ಶಿವಸ್ಮರಣೆ ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಅರ್ಚಕಿಯಾದ ಅಂಬಿಕಾ ಹೆಸರೂರು ಹಿರೇಮಠ, ಹಂಪಯ್ಯ ಸ್ವಾಮಿ ಹಿರೇಮಠ, ರುದ್ರಯ್ಯಸ್ವಾಮಿ, ವಿಶ್ವನಾಥ, ಬಸವರಾಜ ಬೂದಿಹಾಳ ಮಠ, ದೊಡ್ಡ ಬವಸ ಹೆಸರೂರು ಹಿರೇಮಠ ಸೇರಿದಂತೆ ಭಕ್ತರು ಶಿವನ ಆರಾಧಕರು ಇದ್ದರು.

ದೇಶದ ಅತ್ಯಂತ ಸ್ಲಿಮ್ ಮೊಬೈಲ್ ವಿವೊ ವಿ 50 ಬಿಡುಗಡೆ

ಇಮೇಜ್
  ಬೆಂಗಳೂರು: ದೇಶದಲ್ಲೇ ಅತ್ಯಂತ ಸ್ಲಿಮ್‌ ಆಗಿರುವ ಹಾಗೂ ಅತ್ಯಾಧುನಿಕ ಫೀಚರ್ ಗಳೊಂದಿಗೆ ಅತಿ ಕ್ಷಮತೆಯ ಬ್ಯಾಟರಿ‌ ಹೊಂದಿರುವ ಮೊಬೈಲ್ ನ್ನು ಮಂಗಳವಾರ ಖ್ಯಾತ ಚಿತ್ರನಟಿ ಹರಿಪ್ರಿಯಾ ಬಿಡುಗಡೆಗೊಳಿಸಿದರು. ಬೆಂಗಳೂರಿನ ಬ್ಯಾಂಕ್ ಕಾಲೊನಿಯ‌ ಸಂಗೀತಾ ಗ್ಯಾಜೆಟ್ಸ್ ಮಳಿಗೆಯಲ್ಲಿ ವಿವೊ ವಿ50 ಬಿಡುಗಡೆಗೊಂಡಿದ್ದು ಅತ್ಯಾಕರ್ಷಕ ಮೂರು ಬಣ್ಣಗಳಲ್ಲಿ ಲಭ್ಯವಿವೆ. ಹೊಸ ಅವತರಣಿಕೆಯ ವಿವೊ ವಿ50 ಬಿಡುಗಡೆಗೊಳಿಸಿ ಮಾತನಾಡಿದ ಅವರು ಎಲ್ಲರೂ ಸ್ಲಿಮ್ ಆಗಿರಲು ಬಯಸುವಂತೆ ಮೊಬೈಲ್ ಕೂಡಾ ಸ್ಲಿಮ್ ಆಗಿದ್ದು ನೋಡಲೂ ಸುಂದರವಾಗಿದೆ. ಈ ಮೊಬೈಲ್ ಗ್ರಾಹಕರ ನೆಚ್ಚಿನ ಮೊಬೈಲ್ ಆಗಿ ಹೊರಹೊಮ್ಮಲಿದೆ ಎಂದರು. ವಿವೊ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಚಂದ್ರು ಮಾತನಾಡಿ ಮೊಬೈಲ್ ಬಿಟ್ಟಿರಲಾರದ ಈ ದಿನಗಳಲ್ಲಿ ವಿವೊ ವಿ50 ಗ್ರಾಹಕರ ಸೆಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ದಿನದ 24 ಗಂಟೆಗಳ ಸಂಗಾತಿಯಾಗಲಿದೆ ಎಂದರು. ಸಂಗೀತಾ ಗ್ಯಾಜೆಟ್ಸ್ ನ ಮಾರಾಟ ವಿಭಾಗದ ಮುಖ್ಯಸ್ಥ ಭರತ್ ಪ್ರಭಾತ್ ಮಾತನಾಡಿ ಸಂಗೀತಾ ಗ್ರಾಹಕರಿಗೆ ನೀಡುತ್ತಿರುವ ವಿಶೇಷ ಸೌಲಭ್ಯಗಳ ಕುರಿತು ವಿವರಿಸಿದರು. ಮೊಬೈಲ್ ಕೆಳಗೆ ಬಿದ್ದು ಒಡೆದು ಹೋದರೆ ,ಕಳ್ಳತನವಾದರೆ ಏನನ್ನೂ ಪ್ರಶ್ನಿಸದೇ ಹೊಸ ಮೊಬೈಲ್ ನೀಡಲಾಗುವುದು. ಬೆಲೆ ಕುಸಿತವಾದರೆ ಪರಿಹಾರ ಮೊತ್ತವನ್ನೂ ನೀಡಲಾಗುವುದು ಎಂದರು. ವಿವೊ ಮಾರಾಟ ವಿಭಾಗದ ಕರ್ನಾಟಕ ಮತ್ತು ಗೋವಾ ಮುಖ್ಯಸ್ಥ ಸಾಗರ್ ಹಾಜರಿದ್ದರು.

ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ : ಎಂ.ಅಶೋಕ್ ಸಿಡಿಪಿಒ

ಇಮೇಜ್
  ಮಸ್ಕಿ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಶಿಶು ಅಭಿವೃದ್ಧಿಯೋಜನೆ ತುರುವಿಹಾಳ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು ಶಿಶು ಅಭಿವೃದ್ದಿ ತುರುವಿಹಾಳ ಯೋಜನೆ ವ್ಯಾಪ್ತಿಗೊಳಪಡುವ 2024-25ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ 10 ಹಾಗೂ ಸಹಾಯಕಿಯರು 38 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮುಖಾಂತರ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರಂತೆ ಸದರಿ ಹುದ್ದೆಗಳಿಗೆ ಜಿಲ್ಲಾ ಆಯ್ಕೆ ಸಮಿತಿಯು ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿರುವುದರಿಂದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅಕ್ಷೇಪಣೆ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲಾತಿಗಳೊಂದಿಗೆ ಫೆ.24 ರಿಂದ ಮಾ.4 ರೊಳಗಾಗಿ ಸಮಯ ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 5:30 ರವರೆಗೆ ಸಲ್ಲಿಸಬಹುದಾಗಿದೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ಅಶೋಕ್ ತುರುವಿಹಾಳ ತಾ॥ ಸಿಂಧನೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  ಅಕ್ಷೇಪಣೆ ಸಲ್ಲಿಸುವವರು ಆಕ್ಷೇಪಣೆ ಅರ್ಜಿಯ ಜೊತೆಗೆ ಯಾವುದೇ ದಾಖಲಾತಿಗಳು ಸಲ್ಲಿಸದಿದ್ದಲ್ಲಿ ಅಂತಹವರ ಆಕ್ಷೇಪಣೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ತುರುವಿಹಾಳ ಯೋಜನೆ ತಾ. ಸಿಂಧನೂರು ಪಿ.ಡಬ್ಲ್ಯೂಡಿ ಕ್ಯಾಂಪ್ ರಾಯಚೂರು ಮುಖ್ಯ ರಸ್ತೆ ಸಿಂಧನೂರು ರವರನ್ನು ಕೆಳಕಂಡ ಸಂಖ್ಯೆಗೆ 08535-295086 ಕರೆ ಮಾಡುವ ಮ...

ಬಜೆಟ್ ನಲ್ಲಿ ಕೈದಾಳ ಸಮಗ್ರ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸುವಂತೆ ಗೃಹ ಸಚಿವರಿಗೆ ಮನವಿ

ಇಮೇಜ್
  ಬೆಂಗಳೂರು, ಫೆ,25; ತುಮಕೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮಾರಕ ಶಿಲ್ಪಕಲಾ ತರಬೇತಿ ಕೇಂದ್ರ ಹಾಗೂ ಹಿರಿಯ ಚಿತ್ರ ಕಲಾ ಶಿಕ್ಷಕ ಡಾ. ಎಚ್. ಎಂ. ಗಂಗಾಧರಯ್ಯ ಆರ್ಟ್ ಥೀಮ್ ಪಾರ್ಕ್ ಸ್ಥಾಪಿಸುವುದು ಸೇರಿದಂತೆ ಕೈದಾಳವನ್ನು ಸಮಗ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು 2025 – 26ನೇ ಸಾಲಿನ ಬಜೆಟ್ ನಲ್ಲಿ ಪ್ಯಾಕೇಜ್ ಘೋಷಿಸುವಂತೆ ವಿಶ್ವಕರ್ಮ ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.  ರಾಜ್ಯಮಟ್ಟದ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಸಹಕಾರ ರತ್ನ ಡಾ. ಬಿ. ಎಂ. ಉಮೇಶ್ ಕುಮಾರ್ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಯಿತು.  ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಗೃಹ ಸಚಿವರು, ಈ ಸಂಬಂಧ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಬಜೆಟ್ಟಿನಲ್ಲಿ ಸೇರ್ಪಡೆ ಗೊಳಿಸಲು ಕ್ರಮವಹಿಸುವುದಾಗಿ ತಿಳಿಸಿದರು.  ಈ ವೇಳೆ ವಿಶ್ವಕರ್ಮ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಪತ್ತಾರ್, ಜಿಲ್ಲಾ ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಟಿ. ಸಿ. ಡಮರುಗೇಶ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವರ್ಧನ ಆಚಾರ್, ನಿರ್ದೇಶಕ ಎಸ್. ಹರೀಶ್ ಆಚಾರ್ಯ ಹಾಗೂ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಟಿ. ಎ. ರವಿಕುಮಾರ್ ಮುಂತಾದವರು ಉ...

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಂಜೀವಿನಿ ನೌಕರರ ರಾಜ್ಯಮಟ್ಟದ ಪ್ರತಿಭಟನೆ

ಇಮೇಜ್
  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ನೌಕರರು ಭಾಗಿ ಕರ್ನಾಟಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ, ಮಹಿಳಾ ಒಕ್ಕೂಟಗಳಲ್ಲಿ ಮತ್ತು ಸರಕಾರದ ವಿವಿದ ಇಲಾಖೆಗಳ ಯೋಜನೆ ಜಾರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು(MBK), ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು (LCRP) ಹಾಗು ವಿವಿಧ ಹೆಸರಿನ ಸಖಿ ಕಾರ್ಯಕಾರ್ತರು ರಾಜ್ಯದಲ್ಲಿ ಸುಮಾರು 60,000 ನೌಕರರು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿದ್ದೇವೆ. ಇದಕ್ಕಾಗಿ ನಮಗೆ ಯಾವುದೇ ವೇತನ ನೀಡಲಾಗುತ್ತಿಲ್ಲ. ಬದಲಿಗೆ ಮಾಸಿಕ ಕೇವಲ 5,000 ಹಾಗು 3,000 ಮತ್ತು 3,000 ರೂ ಗೌರವಧನಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವುದು ತಮಗೆ ತಿಳಿದ ವಿಚಾರವಾಗಿದೆ. ಈ ಸೇವೆಯಲ್ಲಿ ಬಹುತೇಕ ದಿನವಿಡೀ ತೊಡಗಿದ ನೌಕರರಾದ ನಾವು ಬಹುತೇಕ ಒಂಟಿ ಮಹಿಳೆಯರು. ವಿಧವಾ ಮಹಿಳೆಯರು, ವಿಕಲ ಚೇತನ ಮತ್ತು ಮರ್ಬಲ ಸಮುದಾಯಕ್ಕೆ ಸೇರಿದವರಾಗಿದ್ದೇವೆ ಮತ್ತು ನಮ್ಮ ದುರ್ಬಲ ಕುಟುಂಬದ ನಿರ್ವಹಣೆ ಹೊತ್ತವರಾಗಿದ್ದೇವೆ. ವಿಶ್ವ ಕಾರ್ಮಿಕ ಸಮ್ಮೇಳನವು ಕನಿಷ್ಠ ವೇತನ 36,000 ಪಡೆಯದೆ ಕುಟುಂಬವೊಂದರ ಕನಿಷ್ಠ ನಿರ್ವಹಣೆ ಆಸಾಧ್ಯವೆಂದಿರುವಾಗ ವೇತನವಿಲ್ಲದೆ. ಗೌರವಧನವೆಂಬ ಆಣಕದಡಿ ಬಿಟ್ಟಿ 18260 ಶೋಷಣೆಗೊಳಗಾಗಿದ್ದೇವೆ. ನಮಗೆ ಯಾವುದೇ ಸೇವಾ ನಿಯಮಾವಳಿ ಇರದೇ ಇರುವುದರಿಂದ ಮತ್ತು ಯಾವುದೆ ಇತರೆ ಆದಾಯಗಳಿಲ್ಲದೆ ಇರುವ...

ಎಂಇಎಸ್ ಪುಂಡರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲ: ರಾಜೀನಾಮೆಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಆಗ್ರಹ

ಇಮೇಜ್
  ಬೆಂಗಳೂರು, ಫೆ, 24; ಬೆಳಗಾವಿ ತಾಲೂಕಿನ ಸಣ್ಣ ಬಾಳೆಕುಂದ್ರಿಯಲ್ಲಿ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಎಂಇಎಸ್ ಪುಂಡರು ನಡೆಸಿದ ಪುಂಡಾಟಿಕೆಯಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಮರಾಠಿ ಪುಂಡರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಆಗ್ರಹಿಸಿದ್ದಾರೆ.  ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣರಾಗಿದ್ದು, ಮತಬ್ಯಾಂಕ್ ರಾಜಕಾರಣಕ್ಕಾಗಿ ಓಲೈಕೆ ರಾಜಕೀಯದಲ್ಲಿ ತೊಡಗಿದ್ದಾರೆ. ಕನ್ನಡಿಗರ ಹಿತ ರಕ್ಷಣೆ ಮಾಡಲು ಸಾಧ್ಯವಾಗದ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕನ್ನಡಿಗರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಬೆಳಗಾವಿ ಮತ್ತು ಬೆಂಗಳೂರಿನ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ರಾಜ್ಯದಲ್ಲಿ ಸಚಿವರು ಸಂಚರಿಸಲು ಸಾಧ್ಯವಾಗದಂತೆ ಎಲ್ಲೆಡೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.  ಎಂಇಎಸ್ ಪುಂಡರು ಹಲ್ಲೆ ಮಾಡಿದ ಕಾರಣಕ್ಕೆ ಎರಡೂ ರಾಜ್ಯಗಳಲ್ಲಿ ಕಾನೂನು ಪರಿಸ್ಥಿತಿ ಹದಗೆಟ್ಟಿದೆ. ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಆದರೆ ಸರಕು ಸಾಗಾಣೆ ಮತ್ತು ಪ್ರಯಾಣಿಕರ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ಧಾರೆ. ಚ...

ಶಿವಗಂಗಾ ಹೇಳಿಕೆಗೆ ಅಹಿಂದ ಖಂಡನೆ

ಇಮೇಜ್
ದಾವಣಗೆರೆ: ಸಾಮಾಜಿ, ಶೈಕ್ಷಣಿಕ ಜಾತಿ ಗಣತಿ ಕುರಿತು ಅಪಸ್ವರ ಎತ್ತಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ವಿರುದ್ಧ ಅಹಿಂದ ಚೇತನ ಹಾಲುಮತ ಮಹಾಸಭಾ ಅಸಮಧಾನ ವ್ಯಕ್ತಪಡಿಸಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಂದು, ಎಲ್ಲರ ಅಭಿವೃದ್ಧಿ ನಮ್ಮ ಗುರಿ ಎಂದಿದ್ದ ಬಸವರಾಜ ಈಗ ಏಕಾಏಕಿ ಜಾತಿ ಗಣತಿ ವಿರುದ್ಧ ಅಪಸ್ವರ ಎತ್ತಿರುವುದು ಖಂಡನೀಯ ಎಂದು ಮಹಾಸಭಾದ ರಾಜು ಮೌರ್ಯ, ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಸಿ. ವೀರಣ್ಣ ಇತರರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಚನ್ನಗಿರಿಯಲ್ಲಿ ಶಿವಗಂಗಾ ಬಸವರಾಜ ಆಯ್ಕೆಯಾಗಿರುವುದೇ ಅಹಿಂದ ಮತಗಳಿಂದ. ಈಗ ಏಕಾಏಕಿ ಜಾತಿ ಗಣತಿ ಮಾಡಿದ್ದು ನಮಗೇ ತಿಳಿದೇ ಇಲ್ಲ. ಮನೆ ಮನೆಗೆ ಭೇಟಿನೀಡದೆ ಎಲ್ಲೋ ಕುಳಿತು ಮಾಡಿದಂತಿದೆ. ಯಾವುದೇ ಕಾರಣಕ್ಕೂ ಜಾತಿ ಗಣತಿ ಬಿಡುಗಡೆ ಮಾಡಲು ನಾನು ಬಿಡಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಅವರು ಅಹಿಂದ ವರ್ಗಕ್ಕೆ ಮಾಡುತ್ತಿರುವ ದ್ರೋಹ ಎಂದರು. 2015ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಯ್ಯ ನೇತೃತ್ವದ ಸರ್ಕಾರ 165 ಕೋಟಿ ರೂ. ಬಿಡುಗಡೆ ಮಾಡಿ, 55 ಪ್ರಶ್ನೆಗಳ ಮುಂದಿಟ್ಟು ಸಮೀಕ್ಷೆ ಮಾಡಿದೆ. ವಿದ್ಯಾವಂತ ತರಬೇತಿ ಪಡೆದ ಶಿಕ್ಷಕರು ತರಬೇತಿ ನೀಡಿದ್ದಾರೆ. ಅಂತಹ ಶಿಕ್ಷಕರು ಮಾಡಿದ ಸಮೀಕ್ಷೆಯನ್ನು ಈಗ ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುವುದು ಸರಿಯಲ್ಲ. ಪಕ್ಷದ ನೇತಾರ ರಾಹುಲ್ ಗಾಂಧಿ ರಾಷ್ಟçಮಟ್ಟದಲ್ಲಿ ಜಾತಿ ಗಣತಿ ಮಾಡಲು ಆಗ್ರಹಿಸುತ್ತಿದ್ದಾ...

ಅಕ್ರೆಕ್ಸ್ ಇಂಡಿಯಾ 2025 ಹೆಚ್ವಿಎಸಿಆರ್ ನ ಭವಿಷ್ಯವನ್ನು ರೂಪಿಸಲು ನಾವೀನ್ಯತೆ ಮತ್ತು ಸುಸ್ಥಿರತೆಯ ಮೇಲೆ ಬಲವಾದ ಉದ್ಯಮದ ಗಮನವನ್ನು ಹೊಂದಿದೆ

ಇಮೇಜ್
  ಬೆಂಗಳೂರು: ಅಕ್ರೆಕ್ಸ್ ಇಂಡಿಯಾ, ಇತ್ತೀಚಿನ ತಾಂತ್ರಿಕ ಪ್ರಗತಿಗಳು ಮತ್ತು ಹೆಚ್ವಿಎಸಿ ಪೂರೈಕೆ ಸರಪಳಿಯ ನಾವೀನ್ಯತೆಗಳ ಸಮಗ್ರ ಶ್ರೇಣಿಯ ಪ್ರಮುಖ ಪ್ರದರ್ಶನವನ್ನು ಇಂದು ಬೆಂಗಳೂರಿನ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (ಬಿಐಇಸಿ) ನಲ್ಲಿ ಪ್ರಾರಂಭಿಸಲಾಗಿದೆ. ಭಾರತದಲ್ಲಿನ ಇನ್ಫಾರ್ಮಾ ಮಾರ್ಕೆಟ್ಗಳ ಸಹಯೋಗದೊಂದಿಗೆ ಐಎಸ್ಹೆಚ್ಆರ್ಎಇ ಆಯೋಜಿಸಿದ್ದು, ಮೂರು ದಿನಗಳ ಈವೆಂಟ್ ದೇಶೀಯ ಮತ್ತು ಅಂತರಾಷ್ಟ್ರೀಯ ತಯಾರಕರು ಸರ್ಕಾರಿ ಅಧಿಕಾರಿಗಳು, ಉದ್ಯಮದ ಮುಖಂಡರು ಮತ್ತು ಪ್ರಮುಖ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ಆವೃತ್ತಿಯು 30,000 ಕ್ಕೂ ಹೆಚ್ಚು ಸಂದರ್ಶಕರ ಪ್ರಭಾವಶಾಲಿ ಕೂಟವನ್ನು ನಿರೀಕ್ಷಿಸಲಾಗಿದೆ ಮತ್ತು 40 ಕ್ಕೂ ಹೆಚ್ಚು ದೇಶಗಳಿಂದ 500 ಕ್ಕೂ ಹೆಚ್ಚು ಪ್ರದರ್ಶಕರಿಂದ ವೈವಿಧ್ಯಮಯ ಪ್ರದರ್ಶನವನ್ನು ಹೊಂದಿದೆ.  ಎಸ್ಟಿಟಿವಿಎ (ಸತ್ವ) ಗ್ರೂಪ್ನ ನಿರ್ದೇಶಕರಾದ ಗೌರವ ಅತಿಥಿ ಶ್ರೀ ಮಹೇಶ್ ಕುಮಾರ್ ಖೈತಾನ್ ಸೇರಿದಂತೆ ಗೌರವಾನ್ವಿತ ಗಣ್ಯರಿಂದ ಭವ್ಯವಾದ ಉದ್ಘಾಟನಾ ಸಮಾರಂಭ ಅಲಂಕೃತವಾಗಿತ್ತು. ಐಎಸ್ಹೆಚ್ಆರ್ಇ ಅಧ್ಯಕ್ಷರಾದ ಶ್ರೀ ಅನೂಪ್ ಬಲ್ಲಾನೆ, ವೋಲ್ಟಾಸ್ನ ಎಕ್ಸಿಕ್ಯೂಟಿವ್ ಎಂಡಿ ಮತ್ತು ಆರ್ಎಸಿ ಮುಖ್ಯಸ್ಥರಾದ ಶ್ರೀ ಮುಕುಂದನ್ ಮೆನನ್, ಅಕ್ರೆಕ್ಸ್ 2025 ರ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯಮ್, ಶ್ರೀ ಅರುಣ್ ಅವಸ್ತಿ, ಅಧ್ಯಕ್ಷರು ಮತ್ತು ವ್ಯವಸ್ಥ...

ಮಸ್ಕಿ : 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ

ಇಮೇಜ್
  ಮಸ್ಕಿ : ಶಾಲೆ ಮತ್ತು ಮನೆ ಇವೆರಡಕ್ಕೂ ಮಕ್ಕಳು ಚಿರಋಣಿಯಾಗಿರಬೇಕು’ ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ರವರು ಹೇಳಿದರು. ಪಟ್ಟಣದ ಧನಗರವಾಡಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯು ಹಲವಾರು ವರ್ಷಗಳಿಂದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ವಿದ್ಯಾದೇಗುಲ ಎನಿಸಿಕೊಂಡಿದೆ. ಶೈಕ್ಷಣಿಕ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟಿವಟಿಕೆಗಳಲ್ಲೂ ಶಾಲೆ ಗಮನಾರ್ಹ ಸಾಧನೆ ಮಾಡಿದೆ’ ಎಂದರು. ಅದೇ ರೀತಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಮತಿ ಈರಮ್ಮ ರವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಶಾಲೆ ಭದ್ರ ತಳಹದಿ. ವಿದ್ಯಾರ್ಥಿಗಳು ಇತರೆ ವಿಚಾರಗಳತ್ತ ಗಮನ ಹರಿಸದೆ ಓದಿನತ್ತ ಹೆಚ್ಚಿನ ಗಮನ ನೀಡಿ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದರು. ಕಾರ್ಯಕ್ರಮದಲ್ಲಿಸಿ‌ಆರ್ ಪಿ ರಾಮಸ್ವಾಮಿ,ಬಾಲಸ್ವಾಮಿ ಹಂಪನಾಳ,ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಕಾಂತಮ್ಮ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಈ ವೇಳೆ, ಶಾಲಾ ಭೂದಾನಿಗಳಾದ ಅರ್ಜುನ್ ಮಾಲಿ ಪಾಟೀಲ್, ಸಿ‌ಆರ್ ಪಿ ರಾಮಸ್ವಾಮಿ,ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಶಾಲೆಯ ಮುಖ್ಯ ಗುರುಗಳಾದ ಶ್ರಿಕಾಂತಮ್ಮ, ನಿ.ಶಿಕ್ಷಕರಾದ ಬಾಲಸ್ವಾಮಿ ಹಂಪನಾಳ,ಸಹ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಪಾಲಕರು ಸೇರಿದಂತೆ ಇನ್ನಿತರರು ಸಾರ್ವಜನಿಕರು ಇದ್ದರು.

ಫೆ.23 ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮನ : ಬಸನಗೌಡ ತುರುವಿಹಾಳ

ಇಮೇಜ್
  ಮಸ್ಕಿ : ಶಾಸಕ ಆರ್ ಬಸನಗೌಡ ತುರುವಿಹಾಳ ರವರು ಪಟ್ಟಣದ ಶಾಸಕರ ಭವನದಲ್ಲಿ ಫೆಬ್ರುವರಿ 23 ರಂದು ಮುಖ್ಯಮಂತ್ರಿ ಕಾರ್ಯಕ್ರಮದ ಕುರಿತು ಪತ್ರಿಕಾ ಹೇಳಿಕೆ ನೀಡಿದರು. ಫೆ. 23 ರಂದು ತುರುವಿಹಾಳ ಗ್ರಾಮದಲ್ಲಿ 75 ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು,ಇಬ್ಬರು ಸಂಸದರು,ವಿವಿಧ ಜಿಲ್ಲೆಯ ಶಾಸಕರು ಹಾಗೂ ವಿವಿಧ ಮಠದ ಮಠಾಧೀಶರು ಭಾಗವಹಿಸಿ ನೂತನ ವಧು ವರರಿಗೆ ಶುಭ ಹಾರೈಸಬೇಕೆಂದು ಮನವಿ ಮಾಡಿದರು. ನಂತರ ಅದೇ ಸಾಮೂಹಿಕ ಕಾರ್ಯಕ್ರಮದಲ್ಲಿ ನಮ್ಮ ಸಹೋದರ ಮಗನ ಮದುವೆ ಹಾಗೂ ನನ್ನ ಮಗನ ಮದುವೆ ನಡೆಯುತ್ತದೆ. ಫೆ. 21 ರಿಂದ 23 ರವರೆಗೆ 800 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಮುಖ್ಯಮಂತ್ರಿಗಳು ಸಮ್ಮುಖದಲ್ಲಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ  ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ,ಹನುಮಂತಪ್ಪ ಮುದ್ದಾಪುರ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು, ಮೈಬೂಬ್ ಸಾಬ್ ಮುದ್ದಾಪುರ ಗ್ಯಾರಂಟಿ ಭಾಗ್ಯದ ಅಧ್ಯಕ್ಷರು ಮಸ್ಕಿ,ನಾಗಭೂಷಣ್ ಬಾರಿಕೇರ್ ಸಹಕಾರ ಸಂಘದ ಅಧ್ಯಕ್ಷರೂ ಮಸ್ಕಿ,ಶಫಿಕ್ ಅಹಮ್ಮದ್ (ಸೆರು)ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,ಕಾಂಗ್ರೆಸ್ ಮುಖಂಡರಾದ ಅಂದಾನಪ್ಪ ಗುಂಡಳ್ಳಿ,ನಿರೂಪಡೆಪ್ಪ ವಕೀಲರು,ನಾರಾಯಣಪ್ಪ ಕಾಸ್ಲಿ,ರವಿ ಮಡಿವಾಳ,ಮಲ್ಲಯ್ಯ ಮುರಾರಿ,ಶಾಸ...

ಕಲಿಕೆಯಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲಿದೆ : ಆದಪ್ಪ ಹೆಂಬಾ

ಇಮೇಜ್
  ಮಸ್ಕಿ : ತಾಲೂಕಿನ ಉದ್ಬಾಳ (ಯು) ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಕಡಬೂರು ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಗೌಡನಭಾವಿ ಕ್ಲಸ್ಟರ್ ಮಟ್ಟದ FLN (FLN) ಕಲಿಕಾ ಹಬ್ಬ  ಕಾರ್ಯಕ್ರಮವು ಅದ್ದೂರಿಯಾಗಿ. ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಖೈರವಾಡಗಿ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿದ ಶ್ರೀ ಆದಪ್ಪ ಹೆಂಬಾ ಅವರು ಖಾಸಗಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗಲಿದೆ ಎಂದು ಪಾಲಕರು ಹೆಚ್ಚು ಹಣ ವ್ಯಯಮಾಡಿ ಕಳುಹಿಸುತ್ತಿದ್ದಾರೆ.ಆದರೆ ಅವರಿಗೆ ಇನ್ನೂ ಗೊತ್ತಿಲ್ಲ ಶಾಲೆಯಲ್ಲಿಯೂ ಅದ ಶಿಕ್ಷಣ ಗುಣಾತ್ಮಕ ಶಿಕ್ಷಣ ಸಿಗಲಿದೆ ಏಕೆಂದರೆ ಹೆಚ್ಚು ತರಬೇತಿ,ಅನುಭಾವಿ ಶಿಕ್ಷಕರಿದ್ದಾರೆ.ಆದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ  ಇಂತಹ ಕಲಿಕೋತ್ಸವ ಕಾರ್ಯಕ್ರಮಗಳು ನಮ್ಮ ಶಾಲೆಗಳಿಗೆ ಪೂರಕವಾಗಲಿವೆ ಎಂದು ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಡದೂರು ವಲಯ ಶಿಕ್ಷಣ ಸಂಯೋಜಕರಾದ ಹನುಮಂತಪ್ಪ ಬಂಡಿ ವಡ್ಡರ್ ಮಾತನಾಡಿ ಮಕ್ಕಳ ಪಠ್ಯಕ್ಕೆ ಪ್ರಸ್ತುತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ತದನಂತರ ವರದಿಗಾರರು ಮತ್ತು ಉಪನ್ಯಾಸಕರಾದ ಹನುಮಂತಪ್ಪ ಬಡಿಗೇರ್ ಮಾತನಾಡಿ ಹೈದ್ರಾಬಾದ್ ಕರ್ನಾಟಕ ಪ್ರ...

ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಪಟ್ಟ ತುರುವಿಹಾಳ ಸಹೋದರರು : ನಾಗಭೂಷಣ್ ಬಾರಿಕೇರ್

ಇಮೇಜ್
  ಮಸ್ಕಿ : ಮಸ್ಕಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆ ಹಾಗೂ ಸಾಮೂಹಿಕ ಕಾರ್ಯಕ್ರಮ ಅಂಗವಾಗಿ ಕ್ಷೇತ್ರದ ತುರುವಿಹಾಳ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಕಂಡೂ ಕೇಳರಿಯದ ಅಭಿವೃದ್ಧಿಗೆ ತುರುವಿಹಾಳ ಪಟ್ಟಣ ಸಾಕ್ಷಿ ಯಾಗಲಿದೆ ಎಂದರೆ ತಪ್ಪಾಗಲಾರದು. ಹೌದು ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದ ಅನುದಾನ ಬಳಸಿಕೊಂಡು ಇದಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ಒಂದು ಪಟ್ಟಣವನ್ನು ಹೇಗೆ ಮಾಡಬಹುದು ಎಂದು ತೋರಿಸಿ ಕೊಟ್ಟವರು ತುರುವಿಹಾಳ ಸಹೋದರರಾದ ಶಾಸಕ ಬಸನಗೌಡ ತುರುವಿಹಾಳ, ಹಾಗೂ ಸಿದ್ದನಗೌಡ ತುರುವಿಹಾಳ ರವರು ಎಂದು ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ. ಕಡಿಮೆ ಸಮಯದ ಅವಧಿಯಲ್ಲಿ ಬಸ್ ನಿಲ್ದಾಣ, ಪದವಿ ಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣ, ಬಾಲಕರ ವಸತಿ ಶಾಲೆ, ಮಸ್ಕಿಯಲ್ಲಿ ತಾಲೂಕ ಆಡಳಿತ ಕಚೇರಿಯ ಸಲುವಾಗಿ ಪ್ರಜಾಸೌಧ, ಗುಂಜಳ್ಳಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಕೆ.ಕೆ.ಆರ್.ಡಿ.ಬಿ ಕಲ್ಯಾಣ ಪಥ ಯೋಜನೆಯ ಗ್ರಾಮೀಣ ರಸ್ತೆಗಳ ನಿರ್ಮಾಣ ಕಾಮಗಾರಿ, ಕೆರೆ ತುಂಬಿಸುವ ಯೋಜನೆ, ಗುಂಡಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಳಗಾನೂರ ಪೊಲೀಸ್ ಠಾಣೆ ಕಟ್ಟಡ, ಪಾಮನಕಲ್ಲೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿಯಲ್ಲಿ ಮೌಲಾನ ಅಜಾದ್ ಶಾಲೆ, ಉಮಲೂಟಿ-ಮಹಾಂಪೂರು ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮತ್ತು ತುರವಿಹಾಳ, ಮಸ್ಕಿ ಪಟ್ಟಣದಲ್ಲಿ ಇಂದಿರಾ ...

"ಬಾಲ್‌ಬಾಕ್ಸ್ ಜೂಜಾಟ ನಿಷೇಧಿಸುವಂತೆ ತಹಶೀಲ್ದಾರ್ ಅವರಿಗೆ ಮನವಿ"

ಇಮೇಜ್
ಕೊಟ್ಟೂರು : ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ಶ್ರೀಕ್ಷೇತ್ರ ಕೊಟ್ಟೂರಿನಲ್ಲಿ ಬಾಲ್‌ಬಾಕ್ಸ್  ಜೂಜಾಟ ನಿಷೇಧಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅಮರೇಶ್ ಜಿಕೆ ಅವರಿಗೆ ಗುರುವಾರ ಮನವಿ ಪತ್ರ ನೀಡಿದರು  ವಿಜಯನಗರ ಜಿಲ್ಲೆ ವ್ಯಾಪ್ತಿ ಮತ್ತು ಕೊಟ್ಟೂರು ತಾಲ್ಲೂಕಿನ ಸಾರ್ವಜನಿಕರು ಮತ್ತು ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಈ ಮೂಲಕ ದೂರು ಸಲ್ಲಿಸಲಾಯಿತು  ಕೊಟ್ಟೂರು ಪಟ್ಟಣದ ಆರಾಧ್ಯ ದೈವ, ಕ್ಷೇತ್ರನಾಥ ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವವು ದಿನಾಂಕ 22-02-2025 ರಂದು ನಡೆಯುತ್ತಿದ್ದು, ಇದರ ಅಂಗವಾಗಿ ದಿನಾಂಕ 21-02-2025 ರಿಂದ 23-02-2025 ರವರೆಗೆ ಬೇರೆ ಬೇರೆ ಊರುಗಳಿಂದ ಸಾರ್ವಜನಿಕರು ತುಂಬಾ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸದರಿ ಜಾತ್ರೆಯಲ್ಲಿ ಬಾಲ್‌ಬಾಕ್ಸ್ ಮತ್ತು ಆನೆ ಒಂಟೆ ಹಾಗೂ ಇನ್ನಿತರೆ ಜೂಜಾಟ  ಆರಂಭವಾಗುವ ಸಂಭವವಿರುತ್ತದೆ. ಜೂಜಾಟಗಳು ಸಾರ್ವಜನಿಕರು ತಮ್ಮ ಹಣವನ್ನು ಕಳೆದುಕೊಳ್ಳುವ ಆಟವಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಾಲ್‌ಬಾಕ್ಸ್ ಹಾಗೂ ಇನ್ನಿತರೆ ಯಾವುದೇ ಜೂಜಾಟಗಳನ್ನು ನಿಷೇಧಿಸುವಂತೆ ಅಖಿಲ ಕರ್ನಾಟಕ ಕಿಸಾನ್  ಜಾಗೃತ ಸಂಘದ ವಿಜಯನಗರ ಜಿಲ್ಲೆ ಉಪಾದ್ಯಕ್ಷರು  ಜಂಬೂರು ಮರುಳಸಿಧ್ದಪ್ಪ ಕೊಟ್ಟೂರು ತಾಲೂಕು ಉಪಾದ್ಯಕ್ಷರು ಎಸ್ ಎಸ್ ರಾಜಶೇಖರ್. ಪರುಸಪ್ಪ ಕೆ .ಅಯ್ಯನಹಳ್ಳಿ.ಅಶೋಕ,ಪರುಶರಾಮ.ಮೂಗಪ್ಪ,ಇತರರು ಒತ್ತಾಯಿಸಿದರು

*ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವ್ಯವಹಾರ ದೃಷ್ಟಿಯಲ್ಲಿ ನೋಡದೆ ಅದೊಂದು ಸೇವೆ ಎಂದೂ ನೋಡಬೇಕು - ಶಾಸಕ ಡಾ.‌ಶ್ರೀನಿವಾಸ್. ಎನ್. ಟಿ.‌*

ಇಮೇಜ್
ಕಾನ ಹೊಸಹಳ್ಳಿ:- ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವ್ಯವಹಾರ ದೃಷ್ಟಿಯಲ್ಲಿ ನೋಡದೆ ಇದು ಒಂದು ಸೇವೆ ಎಂದು ನೋಡಬೇಕು ಎಂದು ಶಾಸಕ ಡಾಕ್ಟರ್ ಶ್ರೀನಿವಾಸ್ ಹೇಳಿದರು ಅವರುಸೋಫಿಯಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮುಖಂಡರೊಂದಿಗೆ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.  , ನಾವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆರ್ಥಿಕ ವ್ಯವಹಾರ ಮನೋಭಾವನೆಯ ದೃಷ್ಟಿ ಕೋನದಲ್ಲಿ ನೋಡಬಾರದು. ಅವುಗಳು, ಈ ನಾಡು, ದೇಶ ಎದುರು ನೋಡುತ್ತಿರುವ ಒಬ್ಬ ಗೌರವಾನ್ವಿತ ಪ್ರಜೆಯಾಗಿ, ಭವಿಷ್ಯತ್ತಿನ ನಾಯಕನಾಗಿ ಹುಟ್ಟು ಹಾಕುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿರುವ ಸೇವೆ ಎಂದೂ ಅರ್ಥ ಮಾಡಿಕೊಳ್ಳಬೇಕು ಎಂದರು.‌  ನನ್ನ ಬಾಲ್ಯದ ವಿದ್ಯಾಭ್ಯಾಸದ ಅವಧಿಯಲ್ಲಿ ನಮ್ಮಂತಹ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಇಂಗ್ಲೀಷ್ ಎಂಬುವುದು ಕಬ್ಬಿಣದ ಕಡಲೆಯಾಗಿತ್ತು.‌ ಖುಷಿಯ ಸಂಗತಿ ಎಂದರೇ,  ನಮ್ಮಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಲ್ಯಾಣ ಕರ್ನಾಟಕ ಹಿಂದುಳಿದ ಈ ಭಾಗದ ಗಡಿಗ್ರಾಮಗಳಾದ ಆಲೂರು, ಕಾನಾಮಡುಗು, ಹಿರೇಕುಂಬಳಗುಂಟೆ, ಹೊಸಹಳ್ಳಿ , ಹೂಡೇಂ, ಪೂಜಾರಹಳ್ಳಿ, ಜುಮ್ಮೋಬನಹಳ್ಳಿ ಅಂತಹ ಗ್ರಾಮಗಳನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ಮಟ್ಟದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವಂತೆ ಮಲ್ಟಿಮೀಡಿಯಾ, ಇಂಜಿನಿಯರ್, ವೆಟರ್ನರಿ ಕೋಸ್೯ ಗಳನ್ನುಳ್ಳ ಅ...

*ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿಸೆಯಲ್ಲಿ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನಿರ ಬೇಕು* *ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ.ಕೆ ಎಂ ವೀರೇಶ್*

ಇಮೇಜ್
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿಸೆಯಲ್ಲಿ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನಿರ ಬೇಕು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳಿಗೆ ತಲುಪಬೇಕು. ಮತ್ತು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸ ನಾವು ನೀವೆಲ್ಲರೂ ಮಾಡಬೇಕಾಗಿದೆ. ಎಂದು ರಾಜ್ಯ ಉಪಾಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಕಾನಾ ಹೊಸಹಳ್ಳಿ ಸೋಫಿಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಕೂಡ್ಲಿಗಿ ಇವರ ವತಿಯಿಂದ ವಿದ್ವಾನ್ ಶ್ರೀ ಬಿ‌.ಎಂ ಗುರು ಸಿದ್ದಯ್ಯನವರ ಸ್ಮರಣೆ ಹಾಗೂ ದತ್ತಿ ಉಪನ್ಯಾಸ ಮತ್ತು ಸೋ.ಮ. ಚಂದ್ರಶೇಖರಯ್ಯ ಲೋಲಾಕ್ಷಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು   ವಿದ್ವಾನ್ ಬಿ.ಎಂ ಗುರುಸಿದ್ದಯ್ಯನವರ ಜೀವನ ಸಂದೇಶ ಕುರಿತು ಮಾತನಾಡಿ ಇವರು ವೃತ್ತಿಯಲ್ಲಿ ಶಿಕ್ಷಕರಾದರು ಸಹ ಪ್ರವೃತ್ತಿಯಲ್ಲಿ ಜ್ಯೋತಿಷ್ಯ, ಆಯುರ್ವೇದ ಪಂಡಿತರು, ಜೊತೆಗೆ ಸಾಹಿತಿ ಹಾಗೂ ಕನ್ನಡ ಪಂಡಿತರೆಂದೆ ಈ ಭಾಗದಲ್ಲಿ ಖ್ಯಾತಿ ಪಡೆದಿದ್ದರು. ಕನ್ನಡ ಸಂಸ್ಕೃತ ವೈದಿಕ ಅಧ್ಯಾತ್ಮ ಗುರುಸಿದ್ದಯ್ಯನವರು ಎಂಥ ಕಠಿಣ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡ ಬಲ್ಲವರಾಗಿದ್ದರು ಎಂದು ಹೇಳಿದರು. ಸಮಾಜದಲ್ಲಿ ಶಿಕ್ಷಕರ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಸ ವಿವರವಾಗಿ ತಿಳಿಸಿದರು. ...

" ಸಿ ಎಂ ಸಿದ್ದರಾಮಯ್ಯ ನಿವಾಸಕ್ಕೆ : ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಮುತ್ತಿಗೆ "

ಇಮೇಜ್
  ಕೊಟ್ಟೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಫೆಬ್ರವರಿ 20 ರಂದು ಗುರುವಾರ ಮುಖ್ಯಮಂತ್ರಿಗಳ ನಿವಾಸದ ಮುಂದುಗಡೆ ಹೋರಾಟಕ್ಕಿಳಿಯುವುದಾಗಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಘಟಕಾಧ್ಯಕ್ಷ ಆರ್.ಎಸ್.ಬಸವರಾಜ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಸರ್ಕಾರಿ ನೌಕಕರೆಂದು ಪರಿಗಣಿಸುವುದು , ವೇತನ ಪರಿಷ್ಕರಣೆ, ಪಿಂಚಣಿ, ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸುವುದು ಹಾಗೂ ಪ್ರತಿಯೊಂದು ಪಂಚಾಯತಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಠಿಸುವುದು, ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ, ಜನಸಂಖ್ಯೆಗನುಗುಣವಾಗಿ ಪಂಚಾಯಿತಿಗಳನ್ನು ಮೇಲ್ದರ್ಜೇಗೆರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು. ತಾಲ್ಲೂಕು ಘಟಕಾಧ್ಯಕ್ಷ ಎ.ಬಿ.ಎಂ.ಪ್ರವೀಣ್ ಕುಮಾರ್ ಮಾತನಾಡಿ ಸರ್ಕಾರದ ಗಮನ ಸೆಳೆಯಲು ಹಲವಾರು ಬಾರಿ ಹೋರಾಟಕ್ಕಿಳಿದರು ಸರ್ಕಾರ ಸ್ಪಂದಿಸದ ಕಾರಣ ಅನಿರ್ದಿಷ್ಟಾವಧಿ  ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಒಬಳೇಶ್, ಖಜಾಂಚಿ ವಿ.ಕೊಟ್ರೇಶ್ ಇದ್ದರು.

ಕುಂಭಮೇಳದಲ್ಲಿ ಬಯ್ಯಾಪುರ್ ಕುಟುಂಬ.

ಇಮೇಜ್
  ವರದಿ - ಮಂಜುನಾಥ್ ಕೋಳೂರು  ಕೊಪ್ಪಳ ಕೊಪ್ಪಳ : - ಉತ್ತರ ಪ್ರದೇಶದ ಪ್ರಯಾಗ್ರಹದಲ್ಲಿ ನಡೆಯುತ್ತಿರುವ ಭಾರತದ ಹೆಮ್ಮೆಯ ಕುಂಭಮೇಳದಲ್ಲಿ ಕುಷ್ಟಗಿಯ ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರವರು ಹಾಗೂ ಪತ್ನಿ ಶಶಿಕಲಾ ಬಯ್ಯಾಪುರ ಪುತ್ರ ದೊಡ್ಡಬಸವನಗೌಡ ಬಯ್ಯಾಪುರ ಅವರು ಕುಟುಂಬ ಸಮೇತ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದ ಪುಣ್ಯ ಸ್ಥಾನವನ್ನು ಮಾಡಿದರು.  ಈ ಸಂದರ್ಭದಲ್ಲಿ ಕುಷ್ಟಗಿಯ ನಾಗ ಸಾಧು ಮಠದ ಪೀಠಾಧಿಪತಿ ಮಹಾಂತದೇವನಂದ ಗುರೂಜಿ ಹಾಗೂ ಇತರರು ಭಾಗವಹಿಸಿದ್ದರು.

ಗುರುಗಳ ಮಾರ್ಗದರ್ಶನ ಸದೃಢ ಸಮಾಜ ನಿರ್ಮಾಣ ಸಾಧ್ಯ : ಪಿ.ಎಚ್.ದೊಡ್ಡರಾಮಣ್ಣ

ಇಮೇಜ್
  *ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯಾ ಹಾಗೂ ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.* ಕೊಟ್ಟೂರು :  ಪಾಠ ಹೇಳಿ,  ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ ಎಚ್ ದೊಡ್ಡ ರಾಮಣ್ಣ ಅವರು 1968-1974ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸ್ನೇಹಿತರ ಬಳಗ'ದಿಂದ  ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ  ಗಚ್ಚಿನ ಮಠ ಶಾಲಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಿತಗೊಂಡು ಮಾತನಾಡಿದ ನಿವೃತ್ತ ಶಿಕ್ಷಕ ಕೊಪ್ಪಳ ಬಸವರಾಜ ( ಅಂಬಣ್ಣ) ಮಾತನಾಡಿ 1969 ರವರೆಗೆ ಶಾಲೆಗಳು ಕೇವಲ ಅನುದಾನಿತ ಶಾಲೆಗಳಾಗಿದ್ದವು ಇವುಗಳೆಲ್ಲವನ್ನು ಆಗಿನ ಶಿಕ್ಷಣ ಸಚಿವ ಎನ್.ಎಂ.ಕೆ. ಸೋಗಿ ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಶಿಕ್ಷಕರ ಬದುಕಿಗೆ ಭದ್ರತೆ ದೊರಕಿಸಿಕೊಟ್ಟರು ಎಂದು ಸ್ಮರಿಸಿದರು. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ...

ಸಮಾಜದ ಉದ್ಧಾರಕ್ಕೆ ಉದಯಿಸಿದ ದೈವಿಪುರುಷ ಸಂತ ಸೇವಾಲಾಲ್‌ : ವಿಶ್ವನಾಥ ಹಿರೇಮಠ.

ಇಮೇಜ್
  ಮಸ್ಕಿ : ಸಮಾಜದ ಉದ್ಧಾರಕ್ಕೆ ಉದಯಿಸಿದ ದೈವಿಪುರುಷ ಸಂತ ಸೇವಾಲಾಲ್‌ ಸತ್ಯ, ಅಹಿಂಸೆಯನ್ನು ಬೋಧಿಸಿದ್ದರು ಎಂದು ಶಾಲೆಯ ಮುಖ್ಯ ಗುರುಗಳಾದ ವಿಶ್ವನಾಥ ಹಿರೇಮಠ ರವರು ಹೇಳಿದರು. ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಅಡವಿಭಾವಿ ತಾಂಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ ರತ್ನ ಡಾ.ಅಂಬೇಡ್ಕರ್ ವಸತಿ ಆಶ್ರಮ ಶಾಲೆಯಲ್ಲಿ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿ, ‘ಮಹಾ ಪುರುಷರು ಸ್ವಾರ್ಥ ಬದಿಗೊತ್ತಿ ಸಮಾಜದ ಒಳಿತಾಗಿ ಬದುಕು ಸವಿಸಿದ್ದಾರೆ. ಶೋಷಿತ ಬಂಜಾರ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಂತ ಸೇವಾಲಾಲ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ ಎಂದರು. ಈ ವೇಳೆ, ಶಿಕ್ಷಕರಾದ ಅಮೆರೇಶ ವಿಜಯ, ಇಂದಿರಾ ಬೇಗಂ, ಸಿಬ್ಬಂದಿಗಳಾದ ಸುಜಾತ, ಧನಸಿಂಗ, ಶೇಖರಪ್ಪ ಹಾಗೂ ಮಕ್ಕಳು ಸೇರಿದಂತೆ ಇತರರು ಇದ್ದರು.

ವಿದ್ಯಾ ದೇಗುಲದಲ್ಲಿ ,ಪ್ರತಿಭಾ ಕಾರಂಜಿ ,ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾಭಾರತಿ ಶಾಲಾ ಮಕ್ಕಳು

ಇಮೇಜ್
ಕೊಟ್ಟೂರು: ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ನ್ಯೂ ವಿದ್ಯಾಭಾರತಿ ಶಾಲೆಯ ಮಕ್ಕಳು ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಪ್ರಯುಕ್ತ ಆಯ್ಕೆಯಾದ ಮಕ್ಕಳನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಶುಕ್ರವಾರ ಮಾಡಲಾಯಿತು. ನ್ಯೂ ವಿದ್ಯಾಭಾರತಿ ಶಾಲೆಯಿಂದ ಸರ್ಕಾರಿ ಆಸ್ಪತ್ರೆಯ ಮುಂಭಾಗದಿಂದ ಮರಿಕೊಟ್ಟೂರೇಶ್ವರ ದೇವಸ್ಥಾನದ ಮೂಲಕ ಬಸ್ ನಿಲ್ದಾಣ, ಜವಳಿ ಸರ್ಕಲ್, ಬನಶಂಕರಿ ದೇವಸ್ಥಾನದ ಮಾರ್ಗವಾಗಿ ಮತ್ತೇ ಶಾಲೆಯನ್ನು ತಲುಪಿತು.  ನ್ಯೂ ವಿದ್ಯಾಭಾರತಿ ಶಾಲೆಯ ವ್ಯವಸ್ಥಾಪಕರು, ಶಿಕ್ಷಕರು ಭಾಗವಹಿಸಿದ್ದರು. ಮಕ್ಕಳು ಬೆಳ್ಳಿ ರಥೋತ್ಸವದಲ್ಲಿ ತೆರಳುತ್ತಿರುವುದನ್ನು ನೋಡಿ ಸಾರ್ವಜನಿಕರು ಸಂತಸ ಪಟ್ಟರು. ಆ ಮೂಲಕ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿದಂತಾಗಿದೆ ಎಂದರು. ಅಲ್ಲದೇ ಈ ವಿದ್ಯಾಸಂಸ್ಥೆಯು ೨೫ ವರ್ಷಗಳನ್ನು ಪೂರೈಸಿ ೨೬ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತಸ ತಂದಿದೆ. ಅಲ್ಲದೇ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ, ಎಲ್.ಕೆ.ಜಿ. ಯಿಂದ ೧೦ನೇ ತರಗತಿಯವರೆಗಿನ ಮಕ್ಕಳಿಗೆ ನೂತನ ತಂತ್ರಜ್ಞಾನಗಳನ್ನು, ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಶಾಲೆಯಲ್ಲಿ ಒದಗಿಸಲಾಗುತ್ತಿದೆ ಎಂದು ಶಾಲೆಯ ವ್ಯವಸ್ಥಾಪಕರಾದ ಹರ್ಷ ಪತ್ರಿಕೆಗೆ ತಿಳಿಸಿದರು.  ಕುಮಾರಸ್ವಾಮಿ ಮಾತನಾಡುತ್ತಾ ಮಕ್ಕಳ ಕಲಿಕೆ, ಶಾಲಾ ವಾತಾವರಣ, ಮಕ್ಕಳ ಶಿಸ್ತಿನ ಬಗ್ಗೆ ಮಾತನಾಡಿದರು. ಜೆ.ಕೊಟ್ರೇಶ್, ರೈತ ಸಂಘದ ಅಧ್ಯಕ್ಷರಾದ ಮರುಳಸಿದ್ದಪ್ಪ,...

ನೂತನ ಎಸ್. ಡಿ. ಎಮ್. ಸಿ ಪದಾಧಿಕಾರಿಗಳ ನೇಮಕ

ಇಮೇಜ್
  ದೇವದುರ್ಗ : ತಾಲೂಕಿನ ಸಿದ್ದಾಪುರ ಗ್ರಾಮದ ಉನ್ನರೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಾಲಾ ಆವರಣದಲ್ಲಿ ಎಸ್ ಡಿ ಎಂ ಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಲ್ಲರ ಒಮ್ಮತದಿಂದ ನೂತನ ಅಧ್ಯಕ್ಷರಾಗಿ ತಿಮ್ಮಣ್ಣ ನಾಯಕ ಬುಂಕಲದೊಡ್ಡಿ,ಉಪಾಧ್ಯಕ್ಷರಾಗಿ ಪಾರ್ವತಿ ಗಂಡ ಸಾಬಣ್ಣ ಜೆಲ್ಲಿ ಇನ್ನುಳಿದ ಎಲ್ಲರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮೌನೇಶ್ ನಾಯಕ ಬೆಂಗಂಡಿ,ಭೀಮಣ್ಣ ನಾಯಕ,ಶಿವರಾಜ ಮುರಾಳ, ಗ್ಯಾನಯ್ಯ ಮುರಾಳ,ವೆಂಕಟೇಶ್ ಪಾಣಿ,ತಿಮ್ಮಣ್ಣ ನಾಯಕ ಮೂಲಿಮನಿ,ಸಿದ್ಧಲಿಂಗ ಮುರಾಳ,ಸಿದ್ದಣ್ಣ ಚಿಂಚೋಡಿ,ವೆಂಕಟೇಶ್ ಹೆಚ್. ಪಿ ಹಾಗೂ ರಾಜಕೀಯ ಮುಖಂಡರು ಗ್ರಾಮದ ಹಿರಿಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ವತಿಯಿಂದ ಇದೇ 16 ರಂದು ಕಾಸಿಯಾ ಸಭಾಂಗಣದಲ್ಲಿ ಸೇವಾ ಚಟುವಟಿಕೆ

ಇಮೇಜ್
  ಬೆಂಗಳೂರು: ಬೆಂಗಳೂರಿನ ಲಯನ್ಸ್ ಅಂತರಾಷ್ಟ್ರೀಯ ಟೀಮ್ ಸ್ಪರ್ಶ, ಡಿಸ್ಟ್ರಿಕ್ಟ್ 317ಎ ವತಿಯಿಂದ ಪ್ರದೇಶ- IV ರ ಪ್ರಾದೇಶಿಕ ಸಭೆ, ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ 16 ರ ಭಾನುವಾರ ಮಧ್ಯಾಹ್ನ 3.30 ರಿಂದ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಶಾ ದೀಪ ವೃದ್ಧಾಶ್ರಮಕ್ಕೆ, ಲಯನ್ಸ್ ಕಣ್ಣಿನ ಆಸ್ಪತ್ರೆಗೆ, ಮತ್ತು ಹಸಿವು ನಿವಾರಣಾ ಯೋಜನೆಗಳಿಗೆ ತಲಾ 25 ಸಾವಿರ ರೂಪಾಯಿ ದೇಣಿಗೆ ಅಲ್ಲದೇ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಸ್ಯಾನಿಟರ್ ಪ್ಯಾಡ್ ವಿತರಣಾ ಯಂತ್ರವನ್ನು ಎಲ್ ಸಿ ಬಿ ಬನಶಂಕರಿ ಕ್ಲಬ್ಬೆ ಡಯಾಲಿಸಿಸ್‌ ಯಂತ್ರವನ್ನು ಎಲ್ ಸಿ ಬಿ ಜ್ಞಾನಯೋಗ ಯೋಗ ಕೇಂದ್ರಕ್ಕೆ, ಬುಗಿ ವ್ಯಾನ್ ಅನ್ನು ಹಿರಿಯರ ಅನುಕೂಲಕ್ಕಾಗಿ ಜಿಗಣಿಯ ವಿವೇಕಾನಂದ ವಾಸ ಯೂನಿವರ್ಸಿಟಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ, ಇನ್ನೂ ಹಲವು ದೇಣಿಗೆಗಳನ್ನು ನೀಡಲಾಗುತ್ತಿದ್ದು ಮುಖ್ಯ ಅತಿಥಿ ಭಾಷಣಕಾರರಾಗಿ ನಿಮ್ಹಾನ್ಸ್ ನ ಪದ್ಮಶ್ರೀ ಡಾ. ಸಿ.ಆರ್ ಚಂದ್ರಶೇಖರ್ ರವರು ಲಯನ್ಸ್ ಜಿಲ್ಲೆಯ ಮಾಜಿ ರಾಜ್ಯಪಾಲರುಗಳು ಹಾಗೂ ಪದಾಧಿಕಾರಿಗಳು, ಕ್ಲಬ್ಬಿನ ಸದಸ್ಯರುಗಳು, ಅತಿಥಿಗಳಾಗಿ ಪಾಲ್ಗೊಳ್ಳುವರು. ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಎನ್. ಮೋಹನ್ ಕುಮಾರ್, ರೀಜನಲ್ ಚೇರ್ ಪರ್ಸನ್ ಲಯನ್ ಸೋಮಲತಾ, ಚೇರ್ಮನ್ ಲಯನ್ ಮಲ್ಲೇಶಯ್ಯ,ಮತ್ತಿತರರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಮಾಧ್ಯಮ ವಿಭಾಗದ ಅಧ್ಯಕ್ಷರು ಲಯನ್ ಡಾ. ಉ...

ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚನೆಯಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯ ಸರಿ ಪಡಿಸುವಂತೆ : ಆನಂದ ವೀರಾಪುರ ಒತ್ತಾಯ

ಇಮೇಜ್
  ಮಸ್ಕಿ : ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚನೆಯಲ್ಲಿ ಕಲ್ಬುರ್ಗಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ  ಕೂಡಲೇ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಪಡಿಸುವಂತೆ ವಿಜ್ಞಾನ ಪರಿಷತ್ ಸದಸ್ಯ ಆನಂದ ಕುಮಾರ್ ವೀರಾಪುರ ಒತ್ತಾಯಿಸಿ ದ್ದಾರೆ.  ಅವರು ಗುರುವಾರ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶ ಮಂಡಳಿಯ ಶೈಕ್ಷಣಿಕ ಸಮಿತಿ ರಚನೆಯಲ್ಲಿ ಕಲಬುರಗಿ ಯವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಉಳಿದ ಈ ಭಾಗದ ಸಮಗ್ರ ಶೈಕ್ಷಣೀಕ ಅಭಿವೃದ್ಧಿಯ ಜಿಲ್ಲೆಗಳಿಗೆ ಎಂದಿನಂತೆ ಅವಕಾಶ ನೀಡದೇ ವಂಚಿಸಲಾಗಿದೆ ಎಂದು ದೂರಿದರು. ಕಲ್ಯಾಣ ಕರ್ನಾಟಕ ಮಂಡಳಿಯ ಅಧೀನದಲ್ಲಿ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚಿಸಿದ್ದು ರಾಯಚೂರು ಸೇರಿದಂತೆ ಈ ಭಾಗದ ಇನ್ನುಳಿದ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ.ಕೆಕೆಆರ್‌ಡಿಬಿಯಡಿ ರಚನೆಗೊಂಡಿರುವ ಶೈಕ್ಷಣಿಕ ಸಮಿತಿಯಲ್ಲಿ ಬಹುಪಾಲು ಕಲಬುರಗಿ, ಬೀದರ್,ಬಳ್ಳಾರಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರೂಪುಗೊಂಡಿರುವ ಕೆಕೆಆರ್‌ಡಿಬಿಯಿಂದಲೇ ಅನುದಾನ ಹಂಚಿಕೆ ಸೇರಿ ಇತರೆ ಎಲ್ಲ ವಿಷಯಗಳಲ್ಲಿಯೂ ಅನ್ಯಾಯವಾಗುತ್ತಿದ್ದು, ಕೂಡಲೇ ಸರ್ಕಾರ ಗಮನ ಹರಿಸಿ ಅನ್ಯಾಯ ಸರಿ ಪಡಿಸಬೇಕು ಎಂದು ವಿಜ್ಞಾನ ಪರಿಷತ್ ಸದಸ್ಯ ಆನಂದ ವೀರಾಪುರ ಪತ್ರಿಕೆ ಮೂಲಕ ತಿಳಿಸಿದ್ದಾರೆ.

"80.37 ಲಕ್ಷ ಸಿಸಿ ರಸ್ತೆ ನಿರ್ಮಾಣ ಭೂಮಿ ಉದ್ಘಾಟನೆ "

ಇಮೇಜ್
*ತಿಮ್ಮಲಾಪುರ, ತಾಂಡ ಗ್ರಾಮದಲ್ಲಿ 80.37 ಲಕ್ಷ ರೂಪಾಯಿ ಸಿಸಿ ರಸ್ತೆ ನಿರ್ಮಾಣ ಭೂಮಿ ಪೂಜೆಯನ್ನು :ಶಾಸಕ ಕೆ.ನೇಮಿರಾಜ್ ಉದ್ಘಾಟನೆ ನೀಡಿದರು * ಕೊಟ್ಟೂರು: ಹಗರಿಬೊಮ್ಮನಹಳ್ಳಿ ಶಾಸಕರಾದ ಕೆ.ನೇಮಿರಾಜ್ ನಾಯ್ಕ ರವರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಪರಿಣಾಮವಾಗಿ  ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಾದರಿಯಾಗಿ ಕಾಣಿಸುತ್ತಾರೆ  ಕೊಟ್ಟೂರು ತಾಲೂಕಿನ ತಿಮ್ಮಲಾಪುರ ಹಾಗೂ ತಿಮ್ಲಾಪುರ ತಾಂಡ ಗ್ರಾಮದಲ್ಲಿ 80.37 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮವನ್ನು ಬುಧವಾರ ರಂದು ನೆರವೇರಿಸಲಾಯಿತು  ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ಅವರು ಹಾಗೂ ಊರಿನ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು ಅಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

*ಮಸ್ಕಿಯಲ್ಲಿ ಮಲ್ಲಿಕಾರ್ಜುನ ರಥೋತ್ಸವ ಅದ್ಧೂರಿ*

ಇಮೇಜ್
ಮಸ್ಕಿ: ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವರ ರಥೋತ್ಸವ ಬುಧವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು. ಗುರು ಪರಂಪರೆಯ ಗಚ್ಚಿನ ಹಿರೇ ಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಇಂದು ಸಂಜೆ 4: 45 ಕ್ಕೆ 5:10 ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದ ಅಂಗವಾಗಿ ಫೆ.8 ರಂದು ಧ್ವಜಾರೋಹಣ,ಪಲ್ಲಕ್ಕಿ ಸೇವಾ ಕಳಸದ ಮೆರವಣಿಗೆ ಕಾರ್ಯಕ್ರಮ ಜರುಗಿದೆ.ಇಂದು ಕಳಸಾರೋಹಣ ಸಂಜೆ 4:10 ರಿಂದ 5 ಗಂಟೆವರೆಗೆ ಜರುಗಿದವು ನಂತರ ಅಮೃತ ಘಳಿಗೆಯಲ್ಲಿ ಮಹಾ ರಥೋತ್ಸವ ಜರುಗಿತು. ಮಸ್ಕಿ ಸೇರಿ ರಾಯಚೂರು ನೆರೆ ಜಿಲ್ಲೆಗಳ ಭಕ್ತರು ಭಾಗಿಯಾಗಿದ್ದರು ನೂತನ ರಥವನ್ನು ದೈವದ ಕಟ್ಟೆಯವರೆಗೆ ಎಳೆದು ಪುನಃ ದೇವಸ್ಥಾನಕ್ಕೆ ತರಲಾಯಿತು. ಫೆ. 13 ರಂದು ಪಲ್ಲಕ್ಕಿ ಸೇವಾ ಹಾಗೂ14 ರಂದು ಕಡುಬಿನ ಕಾಳಗದ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ರಥೋತ್ಸವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವ ಮೂಲಕ ಜಾತ್ರಾ ಮಹೋತ್ಸವವು ಶಾಂತಿಯುತವಾಗಿ ಹಾಗೂ ಅದ್ಧೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ತುರುವಿಹಾಳ,ಮಹದೇವಪ್ಪ ಗೌಡ ಪೋಲೀಸ್ ಪಾಟೀಲ್,ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್,ಅಂದಾನಪ್ಪ ಗುಂಡಳ್ಳಿ,ದೊಡ್ಡಪ್ಪ ಕಡಬೂರು,ಹನುಮಂತಪ್ಪ ಮುದ್ದಾಪುರ,ಡಾಕ್ಟರ್ ಶಿವಶರಣಪ್ಪ ಇತ್ಲಿ,ನಾಗಭೂಷಣ ಬಾರಿಕೇರ್ ಮಸ್ಕಿ ಸಹಕಾರಿ ಸಂಘದ ನೂತನ ಅಧ್ಯಕ್ಷರು,ಮಲ್ಲಯ್ಯ ಬಳ್ಳಾ,ಮಲ್ಲಯ್ಯ ಅಂಬಾಡಿ ಪುರಸಭೆ ಅಧ್ಯಕ್ಷರು,ನರಸರೆಡ್ಡಿ ಮುಖ್ಯಾಧಿಕಾರ...

3 ತಿಂಗಳ ಹಾಸಿಗೆ ಹಿಡಿದ ರಮೇಶ್ ಅವರಿಗೆ ವಾಟರ್ ಬೆಡ್ ವಿತರಿಸಿದ ಧರ್ಮಸ್ಥಳ ಸಂಸ್ಥೆ

ಇಮೇಜ್
ಮಸ್ಕಿ : ಪಟ್ಟಣದ ಗಾಂಧಿನಗರ ವಲಯದ ಮಸ್ಕಿ ಪಟ್ಟಣ ನಿವಾಸಿಯಾದ ರಮೇಶ್ ರವರು ಆಪಘಾತದಿಂದ ಕಳೆದ 3 ತಿಂಗಳಿಂದ ಮಲಗಿದ್ದಲ್ಲೇ ಮಲಗಿಕೊಂಡಿರುತ್ತಾರೆ, ಪೂಜ್ಯ ಖಾವಂದರು ಆಶೆಯದಂತೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಮಸ್ಕಿ ತಾಲೂಕ ಯೋಜನಾಧಿಕಾರಿಗಳಾದ ಶ್ರೀಮತಿ ಶಾಲಿನಿ ಹಾಗೂ ಪುರಸಭೆ ಸದಸ್ಯರಾದ ದೊಡ್ಡ ಕರಿಯಪ್ಪ ವಲಯದ ಮೇಲ್ವಿಚಾರಕರುಗಳ ಉಪಸ್ಥಿತಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ವಾಟರ್ ಬೆಡ್ ನ್ನು ವಿತರಣೆ ಮಾಡುವ ಮೂಲಕ ಸಹಾಯ ಹಸ್ತ ಬಯಸದೆಯೂ ಸ್ವತಃ ಸಂಸ್ಥೆಯೇ ಕಷ್ಟದ ಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆ ಎಂದರೆ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ದಿ ಸಂಸ್ಥೆ ಎಂದು ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಹನುಮಂತ ಸಂಸ್ಥೆಯ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಇದ್ದರು.

ಸಾರ್ವಜನಿಕರ ಮನವಿ, ಕೋತಿಗಳ ಹಾವಳಿಗೆ ಸ್ಪಂದಿಸಿದ ಪಟ್ಟಣ ಪಂಚಾಯತಿ ಅಧಿಕಾರಿಗಳು

ಇಮೇಜ್
  "ಹುಚ್ಚು ಹಿಡಿದ ಕೋತಿಯನ್ನು ಸೆರೆಹಿಡಿದ : ಬೈರ ದೇವರಗುಡ್ಡದ ನಾಗೇಂದ್ರಪ್ಪ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತ " ಕೊಟ್ಟೂರಿನಲ್ಲಿ ಕೋತಿ ಗಳಿಂದ ಬೆಚ್ಚಿದ ಜನತೆಗೆ, ಸ್ಥಳೀಯ ಪಟ್ಟಣ ಪಂಚಾಯತಿ ವತಿಯಿಂದ ಕೋತಿಗಳನ್ನು ಸೆರೆ ಹಿಡಿದು ಅರಣ್ಯ ಅರಣ್ಯ ಇಲಾಖೆ ಸಿಬ್ಬಂದಿಯವರಿಗೆ ಒಪ್ಪಿಸಲಾಯಿತು. ಕೊಟ್ಟೂರಿನ ಬಸ್ ನಿಲ್ದಾಣ, ಕರಿಬಸವೇಶ್ವರ ಶಾಲೆ, ಮುಖ್ಯ ರಸ್ತೆ ಹೀಗೆ ನಾನಾ ಸ್ಥಳಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅದರಲ್ಲಿಯೂ ಹುಚ್ಚು ಹಿಡಿದ ಕೋತಿಯೊಂದು ಅನೇಕ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ವೃದ್ಧರಿಗೆ ಕಚ್ಚಿರುವುದು, ಹಿಂಬಾಲಿಸುವುದು ಜಾಸ್ತಿಯಾಗಿ ದೂರನ್ನು ನೀಡಿದ ತಕ್ಷಣ ಎಚ್ಚತ್ತುಕೊಂಡ ಪಟ್ಟಣ ಪಂಚಾಯತಿ ತಕ್ಷಣ ಕ್ರಮ ಕೈಗೊಂಡಿತು.       ಬೈರ ದೇವರಗುಡ್ಡ ಗ್ರಾಮದ ವಯೋವೃದ್ಧ ಹಾಗೂ ಅನುಭವಿಗಳಾದ ನಾಗೇಂದ್ರಪ್ಪ  ಹಾಗೂ ಅರಣ್ಯ ಸಿಬ್ಬಂದಿಯಾದ ಸುರೇಶ್, ಮಂಜುನಾಥ್  ಮತ್ತು ಸಂಸ್ಥೆಯ ಸಿಬ್ಬಂದಿಗಳ ನೆರವಿನೊಂದಿಗೆ 20 ಕ್ಕೂ ಹೆಚ್ಚು ಕೋತಿಗಳನ್ನು ಸೆರೆಹಿಡಿಯಲಾಯಿತು.          ನಂತರ ಮಾತನಾಡಿದ ಮುಖ್ಯಧಿಕಾರಿ ನಸ್ರುಲ್ಲಾ ರವರು ಕೊಟ್ಟೂರಿನಲ್ಲಿ ಕೋತಿಗಳ ಚೇಷ್ಟೆಗಳಿಂದ ಸಾರ್ವಜನಿಕರು ಓಡಾಡುವುದು ದುಸ್ತರವಾಗಿತ್ತು ಹೀಗಾಗಿ ಕೋತಿಗಳನ್ನು ಸೆರೆಹಿಡಿದು ಕಮಲಾಪುರ ಅರಣ್ಯದಲ್ಲಿ ಬಿಡಲಾಗುವುದು ಎಂದು ತಿಳಿಸಿದರು.          ಕೊನೆಯಲ್ಲಿ ವೃದ್...