ಮಹಾ ಕುಂಭಮೇಳದಲ್ಲಿ ಮಸ್ಕಿ ದಿ ಡೈಲಿ ನ್ಯೂಸ್ ಪತ್ರಿಕೆಯ ವರದಿಗಾರ ದುರ್ಗೇಶ್ ಹಸಮಕಲ್ ಭಾಗಿ; ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

 

ಮಸ್ಕಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದಿ ಡೈಲಿ ನ್ಯೂಸ್ ಪತ್ರಕರ್ತ ದುರ್ಗೇಶ್ ಹಸಮಕಲ್ ಮಸ್ಕಿ ಭಾಗವಹಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಪೂರ್ವಜರ ಹೆಸರಿನಲ್ಲಿ ತರ್ಪಣ ಬಿಟ್ಟಿದ್ದಾರೆ.

ಕುಂಭಮೇಳದ ಬಗ್ಗೆ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ; ನಾನು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಿಂದ ನನ್ನ ಸ್ನೇಹಿತರೊಂದಿಗೆ ತೀರ್ಥಯಾತ್ರೆಗಳ ರಾಜ ಪ್ರಯಾಗರಾಜ್‌ಗೆ ಬರಲು ತುಂಬಾ ಉತ್ಸುಕನಾಗಿದ್ದೇನೆ. 144 ವರ್ಷಗಳ ನಂತರ ಮಹಾ ಕುಂಭ ಮೇಳ ನಡೆಯುತ್ತಿದೆ. ಹೀಗಾಗಿ ನಾನು ತುಂಬಾ ಆಶಾವಾದಿ ಮತ್ತು ಸಂತೋಷವಾಗಿದ್ದೇನೆ. ಮೂರು ದಿನಗಳ ಕಾಲ ಮಹಾ ಕುಂಭದಲ್ಲಿ ಭಾಗವಹಿಸಿದ್ದೇನೆ. ಮೂರು ದಿನವೂ ಪವಿತ್ರ ಸ್ನಾನ ಮಾಡಿದ್ದೆನೆ ಎಂದು ಹೇಳಿದರು.

ಜನವರಿ 26 ರ ಮೌನಿ ಅಮಾವಾಸ್ಯೆಯ ದಿನದಂದು ಪ್ರಯಾಗ್‌ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಸುಮಾರು 10 ಕೋಟಿಗೂ ಅಧಿಕ ಜನಸಂಖ್ಯೆ ಭಾಗಿಯಾಗಿ ಪುಣ್ಯ ಸ್ಥಾನ ಪಡೆದರು ಈ ಒಂದು ಪುಣ್ಯ ಸ್ಥಾನದಲ್ಲಿ ಭಾಗಿಯಾಗಿದ್ದು ನನ್ನ ಭಾಗ್ಯ ಎಂದು ಸಂತೋಷ ವ್ಯಕ್ತಪಡಿಸಿದರು.

ನನ್ನ ಕುಟುಂಬದ ಪೂರ್ವಜರಿಗೆ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಅವರ ಹೆಸರಿನಲ್ಲಿ ತರ್ಪಣ ಅರ್ಪಿಸಿದ್ದೇನೆ. ನನಗಿದು ಸಂತಸ ತಂದಿದೆ. ಮಹಾ ಕುಂಭಮೇಳದಲ್ಲಿ ಭಾಗವಹಿಸಿರುವುದು ಆಧ್ಯಾತ್ಮಿಕ ಅನುಭವ' ಎಂದು ಬಣ್ಣಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*