ಜೀವನದ ಮೊದಲ ಆರಾಧಕರು ನಿಮ್ಮ ತಂದೆ ತಾಯಿ - ಎರಡನೇ ಆರಾಧಕರು ನೆಚ್ಚಿನ ಶಿಕ್ಷಕರು ಆಗಿರಲಿ : ಡಾ.ಮಲ್ಲಪ್ಪ.ಕೆ. ಯರಗೋಳ

 

ಮಸ್ಕಿ : ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ರವರ ಹೇಳಿದರು.

ತಾಲೂಕಿನ ಹಾಲಾಪುರ ಗ್ರಾಮದ ಜನನಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ನಿಮ್ಮ ಜೀವನದಲ್ಲಿ ಮೊದಲ ಆರಾಧಕರು ನಿಮ್ಮ ತಂದೆ ತಾಯಿ ಆಗಿರಲಿ,ಎರಡನೇ ಆರಾಧಕರು ನಿಮ್ಮ ನೆಚ್ಚಿನ ಶಿಕ್ಷಕರು ಆಗಿರಲಿ ನಂತರದ ಸ್ಥಾನ ನಿಮ್ಮ ಇಚ್ಛಾಸಕ್ತಿಗೆ ಬಿಟ್ಟ ವಿಚಾರ.ಶಿಕ್ಷಕರು ಉತ್ತಮ ಅಂಕ ಪಡಿಯಬೇಕು ಎಂದು ಕಲಿಸುವುದು ಬೇಡ ಜೊತೆ ಜೊತೆಗೆ ಜೀವನದ ಉತ್ತಮ ಮೌಲ್ಯವನ್ನು ಕಲಿಸಿಕೊಡಬೇಕು.ವಿದ್ಯಾರ್ಥಿಗಳಿಗೆ ಅನ್ನದ ಮಹತ್ವ ತಿಳಿಸಿ ನಾವು ಎಂತಹ ಮಾತುಗಳನ್ನಾಡಬೇಕು ಎಂದು ಕಲಿಯಬೇಕು.ಪ್ರೀತಿ ಪ್ರೇಮ ಪ್ರಣಯದ ವಯಸ್ಸಿದು ಯಾವುದಕ್ಕೂ ತಲೆಕೊಡದೆ ಯಾವುದೇ ವಾಮ ಮಾರ್ಗದಲ್ಲಿ ನಡೆಯದೇ ಒಳ್ಳೆಯ ಮಾರ್ಗದಲ್ಲಿ ನಡೆಯಿರಿ ಎಂದು ಹೇಳಿದರು.

ನಂತರ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ನಾಗೇಶ್ ಜಂಗಮರಹಳ್ಳಿ ಅವರು ಸಾಂಸ್ಕೃತೀಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದೆ. ಅಲ್ಲದೆ ಮಕ್ಕಳ ಮುಂದಿನ ಶೈಕ್ಷಣಿಕ

ಭವಿಷ್ಯ ಉಜ್ವಲಗೊಳಿಸಲು ಮಕ್ಕಳ ಸಾಮರ್ಥ್ಯಕ್ಕೇ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಯ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು ಎಂದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ದೈಹಿಕ ಶಿಕ್ಷಕರಾದ ರವೀಂದ್ರ ಅವರು ಮಕ್ಕಳು ಶಾಲೆಯಲ್ಲಿ ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳು ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ಪಠ್ಯಕ್ರಮಎಷ್ಟು ಮುಖ್ಯವೋ ‌ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ

ಪಾಲ್ಗೊಂಡು ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಪಡೆಯಬಹುದು ಎಂದರು. 

ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯ ಅತಿಥಿಗಳನ್ನು ಹಾಗೂ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಶ್ರೀ ದಂಡಗುಂಡಪ್ಪ ತಾತಾ ಚಂದೇಶ್ವರ ಮಠ ಜಂಗಮರಹಳ್ಳಿ, ಅತಿಥಿಗಳಾದ ಲಿಂಗರಾಜ ಪಾಟೀಲ, ಪ್ರಾಚಾರ್ಯರಾದ ನಾಗೇಶ ಜಂಗಮರಹಳ್ಳಿ, ಪಂಪಾಪತಿ ಹೂಗಾರ, ನಾಗಮ್ಮ ಚಿನ್ನಪ್ಪ, ಶ್ರೀಕಾಂತಮ್ಮ ನಾಗೇಶ, ರವೀಂದ್ರ, ಯಂಕೋಬ, ಮಂಜುನಾಥ, ಹನುಮಂತರಾಯ ದೇಸಾಯಿ, ಪ್ರಶಾಂತ ಗೌಡ, ಸಿದ್ಲಿಂಗಪ್ಪ, ವಿರುಪನಗೌಡ, ವರದಿಗಾರರಾದ ಹನುಮಂತಪ್ಪ ಕಡಬೂರು, ಸಿದ್ದಯ್ಯ ಹೆಸರೂರು, ಗ್ಯಾನಪ್ಪ ಮೆದಿಕಿನಾಳ, ಉಪನ್ಯಾಸಕರಾದ ಮರಿಸ್ವಾಮಿ, ಸಿದ್ದಾರ್ಥ, ವೀರೇಶ, ಶ್ರೀಧರ ಗುಡಿ, ಸಿದ್ದಪ್ಪ ಗೋನಾಳ, ಕುಮಾರಿ ಶಿಕ್ಷಕಿಯರಾದ ನಿಂಗಮ್ಮ, ಶಿವಮ್ಮ, ಶೃತಿ ಸೇರಿದಂತೆ ಇನ್ನಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*