ಮಸ್ಕಿ : ವಿವಿಧ ದೇವಸ್ಥಾನಗಳಲ್ಲಿ ಶಿವಸ್ಮರಣೆ
ಮಸ್ಕಿ: ಶಿವರಾತ್ರಿ ಅಂಗವಾಗಿ 2ನೇ ಶ್ರೀಶೈಲ ಎಂದೇ ಪ್ರಖ್ಯಾತಿ ಪಡೆದಿರುವ ಪಟ್ಟಣದ ಐತಿಹಾಸಿಕ ಬೆಟ್ಟದ ಮಲ್ಲಿಕಾರ್ಜುನ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ಪುರಸ್ಕಾರಗಳು ನಡೆದವು.
ಬೆಟ್ಟದ ಮಲ್ಲಿಕಾರ್ಜುನ ದೇವರ ಅರ್ಚಕರಾದ ಸಿದ್ಧಯ್ಯ ಹೆಸರೂರು ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ ಕೈಂಕರ್ಯಗಳು ನಡೆದವು.
ಭಕ್ತರು ಉಪವಾಸ ವ್ರತ ಕೈಗೊಂಡು ಶಿವನ ಕೃಪೆಗೆ ಪಾತ್ರರಾದರು. ನಂತರ ರಾತ್ರಿ ವಿವಿಧ ದೇವಾಲಯಗಳಲ್ಲಿ ಶಿವ ಭಜನೆ ಮಾಡುವುದರ ಮುಖಾಂತರ ಭಕ್ತಿ ಪರಾಕಾಷ್ಠೆ ಮೆರೆದರು.
ಮಸ್ಕಿಯ ಆರ್.ಎಸ್.ಎಸ್ ಸಂಘಟನೆಯ ಸಂಘಟಕರು ವಾದ್ಯ ಪರಿಕರಗಳ ಮೂಲಕ ವಿವಿಧ ಶಿವನ ದೇವಸ್ತಾನಗಳಿಗೆ ತೆರಳಿ ಶಿವಸ್ಮರಣೆ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಅರ್ಚಕಿಯಾದ ಅಂಬಿಕಾ ಹೆಸರೂರು ಹಿರೇಮಠ, ಹಂಪಯ್ಯ ಸ್ವಾಮಿ ಹಿರೇಮಠ, ರುದ್ರಯ್ಯಸ್ವಾಮಿ, ವಿಶ್ವನಾಥ, ಬಸವರಾಜ ಬೂದಿಹಾಳ ಮಠ, ದೊಡ್ಡ ಬವಸ ಹೆಸರೂರು ಹಿರೇಮಠ ಸೇರಿದಂತೆ ಭಕ್ತರು ಶಿವನ ಆರಾಧಕರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ