ಫೆ.23 ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮನ : ಬಸನಗೌಡ ತುರುವಿಹಾಳ
ಮಸ್ಕಿ : ಶಾಸಕ ಆರ್ ಬಸನಗೌಡ ತುರುವಿಹಾಳ ರವರು ಪಟ್ಟಣದ ಶಾಸಕರ ಭವನದಲ್ಲಿ ಫೆಬ್ರುವರಿ 23 ರಂದು ಮುಖ್ಯಮಂತ್ರಿ ಕಾರ್ಯಕ್ರಮದ ಕುರಿತು ಪತ್ರಿಕಾ ಹೇಳಿಕೆ ನೀಡಿದರು.
ಫೆ. 23 ರಂದು ತುರುವಿಹಾಳ ಗ್ರಾಮದಲ್ಲಿ 75 ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು,ಇಬ್ಬರು ಸಂಸದರು,ವಿವಿಧ ಜಿಲ್ಲೆಯ ಶಾಸಕರು ಹಾಗೂ ವಿವಿಧ ಮಠದ ಮಠಾಧೀಶರು ಭಾಗವಹಿಸಿ ನೂತನ ವಧು ವರರಿಗೆ ಶುಭ ಹಾರೈಸಬೇಕೆಂದು ಮನವಿ ಮಾಡಿದರು.
ನಂತರ ಅದೇ ಸಾಮೂಹಿಕ ಕಾರ್ಯಕ್ರಮದಲ್ಲಿ ನಮ್ಮ ಸಹೋದರ ಮಗನ ಮದುವೆ ಹಾಗೂ ನನ್ನ ಮಗನ ಮದುವೆ ನಡೆಯುತ್ತದೆ.
ಫೆ. 21 ರಿಂದ 23 ರವರೆಗೆ 800 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಮುಖ್ಯಮಂತ್ರಿಗಳು ಸಮ್ಮುಖದಲ್ಲಿ ನಡೆಯುತ್ತದೆ.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ,ಹನುಮಂತಪ್ಪ ಮುದ್ದಾಪುರ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು, ಮೈಬೂಬ್ ಸಾಬ್ ಮುದ್ದಾಪುರ ಗ್ಯಾರಂಟಿ ಭಾಗ್ಯದ ಅಧ್ಯಕ್ಷರು ಮಸ್ಕಿ,ನಾಗಭೂಷಣ್ ಬಾರಿಕೇರ್ ಸಹಕಾರ ಸಂಘದ ಅಧ್ಯಕ್ಷರೂ ಮಸ್ಕಿ,ಶಫಿಕ್ ಅಹಮ್ಮದ್ (ಸೆರು)ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,ಕಾಂಗ್ರೆಸ್ ಮುಖಂಡರಾದ ಅಂದಾನಪ್ಪ ಗುಂಡಳ್ಳಿ,ನಿರೂಪಡೆಪ್ಪ ವಕೀಲರು,ನಾರಾಯಣಪ್ಪ ಕಾಸ್ಲಿ,ರವಿ ಮಡಿವಾಳ,ಮಲ್ಲಯ್ಯ ಮುರಾರಿ,ಶಾಸಕರ ಆಪ್ತ ಸಹಾಯಕರಾದ ಶರಣೇಗೌಡ ಹಂದ್ರಾಳ, ಯಂಕನಗೌಡ ಪಕ್ಷದ ಕಾರ್ಯಕರ್ತರು ಸೇರಿದಂತೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ