ಕಲಿಕೆಯಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲಿದೆ : ಆದಪ್ಪ ಹೆಂಬಾ
ಮಸ್ಕಿ : ತಾಲೂಕಿನ ಉದ್ಬಾಳ (ಯು) ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಕಡಬೂರು ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಗೌಡನಭಾವಿ ಕ್ಲಸ್ಟರ್ ಮಟ್ಟದ FLN (FLN) ಕಲಿಕಾ ಹಬ್ಬ ಕಾರ್ಯಕ್ರಮವು ಅದ್ದೂರಿಯಾಗಿ.
ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಖೈರವಾಡಗಿ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿದ ಶ್ರೀ ಆದಪ್ಪ ಹೆಂಬಾ ಅವರು ಖಾಸಗಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗಲಿದೆ ಎಂದು ಪಾಲಕರು ಹೆಚ್ಚು ಹಣ ವ್ಯಯಮಾಡಿ ಕಳುಹಿಸುತ್ತಿದ್ದಾರೆ.ಆದರೆ ಅವರಿಗೆ ಇನ್ನೂ ಗೊತ್ತಿಲ್ಲ ಶಾಲೆಯಲ್ಲಿಯೂ ಅದ ಶಿಕ್ಷಣ ಗುಣಾತ್ಮಕ ಶಿಕ್ಷಣ ಸಿಗಲಿದೆ ಏಕೆಂದರೆ ಹೆಚ್ಚು ತರಬೇತಿ,ಅನುಭಾವಿ ಶಿಕ್ಷಕರಿದ್ದಾರೆ.ಆದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ
ಇಂತಹ ಕಲಿಕೋತ್ಸವ ಕಾರ್ಯಕ್ರಮಗಳು ನಮ್ಮ ಶಾಲೆಗಳಿಗೆ ಪೂರಕವಾಗಲಿವೆ ಎಂದು ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಡದೂರು ವಲಯ ಶಿಕ್ಷಣ ಸಂಯೋಜಕರಾದ ಹನುಮಂತಪ್ಪ ಬಂಡಿ ವಡ್ಡರ್ ಮಾತನಾಡಿ ಮಕ್ಕಳ ಪಠ್ಯಕ್ಕೆ ಪ್ರಸ್ತುತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ತದನಂತರ ವರದಿಗಾರರು ಮತ್ತು ಉಪನ್ಯಾಸಕರಾದ ಹನುಮಂತಪ್ಪ ಬಡಿಗೇರ್ ಮಾತನಾಡಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು ಈ ಪ್ರದೇಶ ಅಭಿವೃದ್ಧಿ ಆಗುವುದಕ್ಕೆ ಹಲವಾರು ಭಾಗಗಳ ಪ್ರಯತ್ನದಿಂದ ಹೈ.ಕ.ಕ್ಕೆ 371 (ಜೆ) ಜಾರಿಯಾಗಲು ಹೆಚ್ಚಿನವು ಉದ್ಯೋಗಾವಕಾಶಗಳು ದೊರೆಯಲಿವೆ.ಆದರಿಂದ ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿದರೆ,ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು.
:- ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಯಾಗಲು ಸಹಕರಿಸಿದ ಉದ್ಬಾಳ (ಯು) ಗ್ರಾ.ಪಂ.ಯ ಸದಸ್ಯ ಹಾಗೂ ಗ್ರಾಮದ ಯುವಕನಾದ ಬಸವರಾಜ, ಪಂಚ ಗ್ಯಾರಂಟಿ ಯೋಜನೆಯ ಸದಸ್ಯರಾದ ರಮೇಶ ಕರೆಕುರಿ,ಹುಸೇನ್ ಭಾಷಾ ಗುರಿಕಾರ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ.ಶಾಲೆ ಚಿಕ್ಕ ಕಡಬೂರು,ಹನುಮಂತಪ್ಪ ವರದಿಗಾರರನ್ನು ಸನ್ಮಾನಿಸಲಾಯಿತು.
ಕಲಿಕೆ ಪ್ರದರ್ಶಿಸಲು ಏಳು ಡೆ ಟೇಬಲ್ ವ್ಯವಸ್ಥೆ
1 ರಿಂದ 5 ತರಗತಿಯ ಮಕ್ಕಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಕಥೆ ಹೇಳುವುದು, ಗಟ್ಟಿಯಾಗಿ ಓದು,ಸಂತೋಷದಾಯಕ ಗಣಿತ,ಮೆಮೊರಿ ಪರೀಕ್ಷೆ,ರಸಪ್ರಶ್ನೆ,ಕ್ಯಾಲಿಗ್ರಫಿ ಹೀಗೆ ಏಳು ಕಡೆ ಟೇಬಲ್ ಗಳ ವ್ಯವಸ್ಥೆ ಮಾಡುವುದರಿಂದ ತಮ್ಮ ಕಲಿಕೆಯನ್ನು ಪ್ರದರ್ಶಿಸಿ ಬಹುಮಾನ ಪಡೆಯುತ್ತಾರೆ ಅನುಕೂಲವಾಗಿತ್ತು.
ಈ ಕಾರ್ಯಕ್ರಮಕ್ಕೆ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನ ಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಕ್ಕೆ ಮೇರುಗು ತಂದರೆ,ಪ್ರಾಸ್ತಾವಿಕ ನುಡಿಯನ್ನು
ಶ್ರೀ ನಾಗರಾಜ್ ಗೌಡನಭಾವಿ ಸಿಆರ್‌ಪಿ ನುಡಿದರು,ಶ್ರೀಮತಿ ಲೈಲಾ ಶಿಕ್ಷಕರು ನಿರೂಪಿಸಿದರು,ಶ್ರೀಮತಿ ರೇಖಾ ಸ್ವಾಗತಿಸಿದರು ಹಾಗೂ ಶ್ರೀಮತಿ ಬಸಮ್ಮ ವಂದನಾರ್ಪಣೆ ಮಾಡಿದರು.
ಈ ಕಲಿಕಾ ಹಬ್ಬ ಕಾರ್ಯಕ್ರಮ ಆರಂಭಕ್ಕೂ ಮುಂಚೆ ಕಾರ್ಯಕ್ರಮ ಯಶಸ್ವಿಯಾಗಲು ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ಗ್ರಾಮಸ್ಥರು ಸಹಾಯ,ಸಹಕಾರದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ
ವಿದ್ಯಾರ್ಥಿಗಳು ಕೋಲಾಟ ಮತ್ತು ಡೊಳ್ಳು ಕುಣಿತದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು,ಡೊಳ್ಳು ಕುಣಿತದ ಮಕ್ಕಳು ದೊಡ್ಡವರು ನಾಚುವಂತೆ ಕುಣಿದಾಡಿದರು ವಿವಿಧ ಮಜಲುಗಳನ್ನ ಬಾರಿಸುವ ಮೂಲಕ ಸಂಭ್ರಮಿಸಿದರು. ವಿದ್ಯಾರ್ಥಿಗಳ ಜೊತೆ ಸೇರಿದ ಶಿಕ್ಷಕರು,ಶಿಕ್ಷಕಿಯರು ಸಂಭ್ರಮದಿಂದ ಕುಣಿಯುವ ಮೂಲಕ ಹರ್ಷ.ಮೆರವಣಿಗೆಯಲ್ಲಿ ಪೌರಾಣಿಕ ಪಾತ್ರಗಳು,ಸ್ವಾತಂತ್ರ್ಯ ಹೋರಾಟಗಾರ ಪಾತ್ರಧಾರಿಗಳು,ಶರಣರ ಪಾತ್ರಧಾರಿಗಳು ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಶ್ರೀ ಷಣ್ಮುಖಗೌಡ ಪಗಡದಿನ್ನಿ ಸಿಆರ್‌ಪಿ,ಹಾಗೂ ಗೌಡನಭಾವಿ ಕ್ಲಸ್ಟರ್ ನ ಎಲ್ಲಾ ಶಾಲೆಯ ಮುಖ್ಯ ಗುರುಗಳು,ಸಹಶಿಕ್ಷಕರು ಸೇರಿದಂತೆ ಗ್ರಾಮದ ಯುವಕರು,ಯುವತಿಯರು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ