ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ : ಎಂ.ಅಶೋಕ್ ಸಿಡಿಪಿಒ
ಮಸ್ಕಿ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಶಿಶು ಅಭಿವೃದ್ಧಿಯೋಜನೆ ತುರುವಿಹಾಳ ಯೋಜನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು ಶಿಶು ಅಭಿವೃದ್ದಿ ತುರುವಿಹಾಳ ಯೋಜನೆ ವ್ಯಾಪ್ತಿಗೊಳಪಡುವ 2024-25ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ 10 ಹಾಗೂ ಸಹಾಯಕಿಯರು 38 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮುಖಾಂತರ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರಂತೆ ಸದರಿ ಹುದ್ದೆಗಳಿಗೆ ಜಿಲ್ಲಾ ಆಯ್ಕೆ ಸಮಿತಿಯು ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿರುವುದರಿಂದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅಕ್ಷೇಪಣೆ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲಾತಿಗಳೊಂದಿಗೆ ಫೆ.24 ರಿಂದ ಮಾ.4 ರೊಳಗಾಗಿ ಸಮಯ ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 5:30 ರವರೆಗೆ ಸಲ್ಲಿಸಬಹುದಾಗಿದೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ಅಶೋಕ್ ತುರುವಿಹಾಳ ತಾ॥ ಸಿಂಧನೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಕ್ಷೇಪಣೆ ಸಲ್ಲಿಸುವವರು ಆಕ್ಷೇಪಣೆ ಅರ್ಜಿಯ ಜೊತೆಗೆ ಯಾವುದೇ ದಾಖಲಾತಿಗಳು ಸಲ್ಲಿಸದಿದ್ದಲ್ಲಿ ಅಂತಹವರ ಆಕ್ಷೇಪಣೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ತುರುವಿಹಾಳ ಯೋಜನೆ ತಾ. ಸಿಂಧನೂರು ಪಿ.ಡಬ್ಲ್ಯೂಡಿ ಕ್ಯಾಂಪ್ ರಾಯಚೂರು ಮುಖ್ಯ ರಸ್ತೆ ಸಿಂಧನೂರು ರವರನ್ನು ಕೆಳಕಂಡ ಸಂಖ್ಯೆಗೆ 08535-295086 ಕರೆ ಮಾಡುವ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ