ಪೋಸ್ಟ್‌ಗಳು

Chintane ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಲಿಂಗಾಯತ ಮಠಗಳು ಇರದಿದ್ದರೆ ಶಿಕ್ಷಣ ಮರೀಚಿಕೆ?

ಇಮೇಜ್
ವೀರಶೈವ ಲಿಂಗಾಯತ ಎಂಬ ಧರ್ಮ ಇರದಿದ್ದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಹೇಗಿರುತ್ತಿತ್ತು? ಊಹಿಸಿಕೊಳ್ಳುವುದು ಕಷ್ಟ ಎನ್ನಿಸುತ್ತದೆ. ವೀರಶೈವ ಲಿಂಗಾಯತ ಸಮಾಜದ ಮಠ, ಮಾನ್ಯಗಳು ಇಂದು ಬರೀ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿಲ್ಲ; ಬದಲಿಗೆ ಬಸವಾದಿ ಶರಣರು ಹೇಳಿದ ದಾಸೋಹಗಳ ಸಾಲಿಗೆ ಶಿಕ್ಷಣ ದಾಸೋಹ ಸೇರಿಸಿಕೊಂಡು ನಾಡಿನ ಶಿಕ್ಷಣದ ಕೊರತೆ ನೀಗಿಸಿದ್ದಾರೆ.  ಇಂದು ನಾಡಿನಲ್ಲಿ ಇರುವ ಪ್ರತೀ ವೀರಶೈವ ಲಿಂಗಾಯತ ಮಠವೂ ತನ್ನದೇ ಆದ ರೀತಿಯಲ್ಲಿ ಶಿಕ್ಷಣಕ್ಕೆ ಕೊಡುಗೆ ನೀಡುತ್ತಾ ಬಂದಿವೆ. ಸಿದ್ಧಗಂಗಾ ಮಠದಲ್ಲಿ ಸಾವಿರಾರು ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ನಾಡಿನಲ್ಲಿ ಮೊಟ್ಟ ಮೊದಲು ವಿದ್ಯಾರ್ಥಿ ನಿಲಯ ಆರಂಭಿಸಿದವರು ಚಿತ್ರದುರ್ಗ ಮುರುಘಾ ಮಠದ ಜಯದೇವ ಜಗದ್ಗುರುಗಳು ಎಂಬುದನ್ನು ಸ್ಮರಿಸಲೇಬೇಕು. ಇದೇ ಮುರುಘಾ ಮಠ ಇಂದು ಮಧ್ಯ ಕರ್ನಾಟಕದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಶಿಕ್ಷಕರ ತರಬೇತಿ ಕೇಂದ್ರ ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡುತ್ತಾ ಸಾಗಿವೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮೊದಲ ವೈದ್ಯಕೀಯ ಕಾಲೇಜು ಆರಂಭ ಮಾಡಿದ್ದೂ ಸಹ ಇದೇ ಮುರುಘಾ ಮಠ. ಇನ್ನು ಮೈಸೂರು ಸತ್ತೂರು ಜೆಎಸ್‌ಎಸ್ ಮಠ ಸಹ ಇದೇ ರೀತಿಯ ಶಿಕ್ಷಣ ದಾಸೋಹ ಮಾಡಿಕೊಂಡು ಬಂದಿವೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠ ಸೇರಿದಂತೆ ಹಲವು ಮಠಗಳು ನಿರಂತರವಾಗಿ ಶಿಕ್ಷಣ ಸೇವೆ ಮಾಡಿಕೊಂಡು ಬಂದಿವೆ. ಸಿರಿಗೆರೆಯ ಮಠದಿ