*ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಪಾದಯಾತ್ರೆ ಜಾಲಿಹಾಳ ವಿಶ್ವಕರ್ಮ ಬಂಧುಗಳಿಂದ ಸನ್ಮಾನ,ಹಣ್ಣು,ಹಂಪಲು ವಿತರಣೆ*
ಸಿಂಧನೂರು ತಾಲೂಕಿನ ಮುಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದವರೆಗೆ ಕಾರ್ತೀಕ ಮಾಸದ ಅಂಗವಾಗಿ ಇಂದು ನಾಡಿನ ಹಾಗೂ ವಿಶ್ವಕರ್ಮ ಸಮಾಜದ ಒಳಿತಿಗಾಗಿ ಮುಕ್ಕುಂದ ಶ್ರೀ ಕಾಳಿಕಾದೇವಿ ದೇವಸ್ಥಾನದ ಅರ್ಚಕರಾದ ಬಸವರಾಜ ಆಚಾರಿ ಇವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಲೆಂದು ಚನ್ನಳ್ಳಿ ಕ್ರಾಸ್ ಬಳಿ ಜಾಲಿಹಾಳ ಹೋಬಳಿ ವಿಶ್ವಕರ್ಮ ಬಂಧುಗಳು ಪಾದಯಾತ್ರೆ ನೇತೃತ್ವ ವಹಿಸಿದ ಶ್ರೀ ಬಸವರಾಜ ಆಚಾರಿ ಅವರಿಗೆ ಸನ್ಮಾನಿಸಿ,ಗೌರವಿಸಿ ಹಣ್ಣು, ಹಂಪಲುಗಳನ್ನು ನೀಡಿ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಪಾದಯಾತ್ರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಿಂದ ಪ್ರಾರಂಭವಾಗಿ ಕಾರಟಗಿ,ನಾಗನಕಲ್ಲು(ಲಕ್ಷೀ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ತಾವರಗೇರ(ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಗಜೇಂದ್ರಗಡ ಪಟ್ಟಣದ(ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಬೇವಿನಹಾಳ(ಉಚ್ಚೀರಪ್ಪ ಅಜ್ಜ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ)ಸುರೇಬಾನ (ಶರಣರ ಮಠದಲ್ಲಿ ರಾತ್ರಿ ವಿಶ್ರಾಂತಿ) ನಂತರ ಈ ಮಾರ್ಗವಾಗಿ ವಿಶ್ವಕರ್ಮರ ಅಧಿದೇವತೆ ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನವನ್ನು ತಲುಪಲಿದೆ.ಈ ಪಾದಯಾತ್ರೆ ಯಶಸ್ವಿಗಾಗಲೆಂದು ಈ ನಾಡಿಗೆ ಹಾಗೂ ವಿಶ್ವಕರ್ಮ ಸಮಾಜಕ್ಕೆ ತಾಯಿ ಕಾಳಿಕಾದೇವಿ ಕೃಪೆ ದೊರೆಯಲೆಂದು ಸಿಂಧನೂರು ತಾಲೂಕಿನ ಸಮಸ್ತ ವಿಶ್ವಕರ್ಮ ಬಂಧುಗಳು ಶುಭ ಆರೈಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ವಿಶ್ವಕರ್ಮ ಸಮಾಜದ ತಾಲೂಕ ಸದಸ್ಯರಾದ ಸಿರಸಪ್ಪ ಜಾಲಿಹಾಳ,ಪಂಪಣ್ಣ ಜಾಲಿಹಾಳ,ಕಾಳಪ್ಪ,ಮಹೇಶ ಬಡಿಗೇರ,ಹನುಮಂತಪ್ಪ, ಮೌನೇಶ,ಮಹೇಶ ಪತ್ತಾರ,ವೀರೇಶ ಪತ್ತಾರ,ರಾಘವೇಂದ್ರ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ