ಹಟ್ಟಿ ಪಟ್ಟಣ ಪಂಚಾಯಿತಿ ಉಪಚುನಾವಣೆ.ಬಿಜೆಪಿ ಪಕ್ಷದಿಂದ ಅಂಬಮ್ಮ ಶ್ರೀನಿವಾಸ್ ಮಧುಶ್ರೀ ನಾಮಪತ್ರ ಸಲ್ಲಿಕೆ.

ಹಟ್ಟಿ ಚಿನ್ನದ ಗಣಿ :ಹಟ್ಟಿ ಪಟ್ಟಣ ಪಂಚಾಯಿತಿ ಉಪಚುನಾವಣೆ ಘೋಷಣೆಯಾಗಿದ್ದು ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು 6 ಮತ್ತು 8ನೇ ವಾರ್ಡಿಗೆ ಅಭ್ಯರ್ಥಿಗಳ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು 8ನೇ ವಾರ್ಡಿನ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರಕ್ಕೆ ಅಂಬಮ್ಮ ಶ್ರೀನಿವಾಸ್ ಮಧುಶ್ರೀ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಗುರುಬಸಮ್ಮ ಗಂಡ ಅಮರಪ್ಪ.

ಎಸ್ ಸಿ ಮೀಸಲು 6ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ ಶ್ರೀಕಾಂತ್ ತಂದೆ ಜಿ ಆದಪ್ಪ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಮರೇಶ್ ತಂದೆ ಹನುಮಂತ, ಸಿ ಪಿ ಐ (ಎಂ) ಪಕ್ಷದ ಅಭ್ಯರ್ಥಿಯಾಗಿ ಚನ್ನಬಸವ ತಂದೆ ಕರಿಯಪ್ಪ 

ಒಟ್ಟು 8ನೇ ವಾರ್ಡಿಗೆ ಎರಡು ಅಭ್ಯರ್ಥಿಗಳು 6ನೇ ವಾರ್ಡಿಗೆ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಗಿದೆ ಎಂದು ಹಟ್ಟಿ ಪಟ್ಟಣ ಪಂಚಾಯತ್ ಉಪಚುನಾವಣೆಯ ಚುನಾವಣೆ ಅಧಿಕಾರಿಗಳು ತಿಳಿಸಿದರು. 

ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅಂಬಮ್ಮ ಶ್ರೀನಿವಾಸ್ ಮಧುಶ್ರೀ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಅಯ್ಯಪ್ಪ ವಕೀಲರು,

ಈಶ್ವರ್ ವಜ್ಜಲ್, ಶಂಕರಗೌಡ ಬಳಗನೂರ್,ಏನ್ ಸ್ವಾಮಿ ನಾಯ್ಕೋಡಿ, ಪರಮೇಶ್ ಯಾದವ್, ಹನುಮಂತ್ ರೆಡ್ಡಿ, ರಮೇಶ್ ಹುಳಿಮೇಶ್ವರ, ರವಿ,

ಯಕೋಬ ಪವಡಿ,ಶಿವು ನಾಯಕ್ ತಬಲಾಜಿ, ಬಸವರಾಜ ಪೈ, ಭೀಮಣ್ಣ,ಬಸವರಾಜ್, ಶಿವು, ಮಹಾದೇವ್ ಮಧುಶ್ರೀ,ರೋಹನ್, ಬಸಮ್ಮ ಪರಮೇಶ್ ಯಾದವ್,ಪದ್ಮಾವತಿ ಸೇರಿದಂತೆ ಇನ್ನು ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "