ಮಂಗ ದಾಳಿ ಮಹಿಳೆಯ ಕೈ ಮುರಿತ ಸಾರ್ವಜನಿಕರಲ್ಲಿ ರಲ್ಲಿ ಆತಂಕ!
ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾ.ಪಂ ವ್ಯಾಪ್ತಿಯ ಬುದ್ದಿನ್ನಿ.ಎಸ್. ಗ್ರಾಮದಲ್ಲಿ ಬೀಡು ಬಿಟ್ಟಿರುವ ಕರಿ ಮುಸುಡಿಯ ಮಂಗವೊಂದು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಾ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ
ಶಾಲೆಯ ಮೈದಾನದಲ್ಲಿನ ಗಿಡ ಮರಗಳಿಗೆ ನುಗ್ಗಿ ಶಾಲಾ ಮಕ್ಕಳು ಹಾಲು ಕುಡಿಯುವ ಮತ್ತು ಊಟ ಮಾಡುವ ಸಂದರ್ಭದಲ್ಲಿ ಮಕ್ಕಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದರಿಂದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಮುಖ್ಯಗುರುಗಳು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಪೋನ ಮೂಲಕ ಮಾಹಿತಿ ನೀಡಿದರೆ ಅರಣ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸುತ್ತಾರೆ. ಲಿಂಗಸುಗೂರು ತಾಲೂಕಿನ ಅರಣ್ಯಾಧಿಕಾರಿ ವಿದ್ಯಾ ರವರ ಗಮನಕ್ಕೆ ತಂದರೆ ಪಿಡಿಒ ರವರು ಪತ್ರ ಕೊಟ್ಟರೆ ನಮ್ಮ ಇಲಾಖೆಯಿಂದ ಮಂಗ ಹಿಡಿಯುವ ತಂಡವನ್ನು ನಾವು ಕಳಿಸುತ್ತೇವೆ ಮಂಗ ಹಿಡಿಯುವ ತಂಡಕ್ಕೆ ಗ್ರಾ.ಪಂ ನವರೇ ಖರ್ಚುಕೊಡಬೇಕೆಂದರು
ಅರಣ್ಯಾಧಿಕಾರಿಗಳ ಮಾಹಿತಿಯನ್ನು ಪಿಡಿಒ ರವರ ಗಮನಕ್ಕೆ ತಂದರೆ ಗ್ರಾ.ಪಂ ಖಜಾನೆಯಲ್ಲಿ ಹಣವಿಲ್ಲವೆನ್ನುತ್ತಾರೆ
ಎರಡು ದಿನಗಳ ಹಿಂದೆ ಗದ್ದೆಮ್ಮ ಗಂಡ ನಿಂಗಪ್ಪ ಎನ್ನುವ ಮಹಿಳೆ ಮಾಳಿಗೆ ಮೇಲೆ ಬಟ್ಟೆ ತರುವಾಗ ಮಂಗ ದಾಳಿ ಮಾಡಿದ್ದರಿಂದ ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದು ಕೈ ಮೂಳೆ ಮುರಿದುಕೊಂಡಿದ್ದಾಳೆ.
ಕಲ್ಲಪ್ಪ ಪೂಜಾರಿ ಎನ್ನುವವರ ಮೇಕೆ ಮರಿಮೇಲೆ ಮಂಗದಾಳಿ ಮಾಡಿ ಸಾಯಿಸಿದೆ ಮನೆಯ ಒಳಗೆ ನುಗ್ಗಿ ಆತಂಕ ಸೃಷ್ಟಿಸಿದೆ ಅಂಕುಶದೊಡ್ಡಿ ಗ್ರಾ.ಪಂ ಆಡಳಿತ ಹಾಗೂ ಲಿಂಗಸುಗೂರು ವಲಯ ಅರಣ್ಯಾಧಿಕಾರಿಗಳು ಹಣಕ್ಕೆ ಬೆಲೆ ಕೊಡುತ್ತಿವೆಯೇ ಹೊರತು ಮನುಷ್ಯತ್ವಕ್ಕೆ ಅಲ್ಲ
ಮನುಷ್ಯತ್ವಕ್ಕೆ ಮಾನವೀಯತೆಗೆ ಮತ್ತು ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.
ಹಾಗೆಯೇ ಗ್ರಾಮಕ್ಕೆ ರಾಯಚೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಖುದ್ದು ಭೇಟಿ ಮಾಡಿ ಮಂಗವನ್ನು ಸ್ಥಳಾಂತರಿಸಬೇಕು ಗಾಯಗೊಂಡ ಮಹಿಳೆಗೆ ಪರಿಹಾರ ನೀಡಬೇಕೆಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಹಾಗೂ ಗ್ರಾಮಸ್ಥರು ಪತ್ರಿಕೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ