ನಾಗಲದಿನ್ನಿ ಯುವಕ ಬಾಂಗ್ಲಾ ಗಡಿಯಲ್ಲಿ ಬಿಎಸ್ಎಫ್ ಯೋಧರಾಗಿ ನೇಮಕ ಅಭಿನಂದನಾ ಸಮಾರಂಭ
*ಮಸ್ಕಿ* ತಾಲ್ಲೂಕು ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗಲದಿನ್ನಿ ಎಂಬ ಪುಟ್ಟ ಹಳ್ಳಿಯ ಯುವಕ ಇಂದು ಭಾರತೀಯ ಸೈನ್ಯ ಗೆ ಸೇರಿ ಭಾರತಾಂಬೆಯ ಸುಪುತ್ರನಾಗಿ ಹೊರಹೊಮ್ಮಿದ್ದು ನಿಜಕ್ಕೂ ಸಂತೋಷದ ಕ್ಷಣವಾಗಿದೆ.ನಾಗಲದಿನ್ನಿ ಗ್ರಾಮದ ಗೋಪಾಲ ತಂದೆ ಹನುಮಂತಪ್ಪ ಎಂಬ ಬಡ ಕುಟುಂಬದ ಯುವಕ,ಗ್ರಾಮೀಣ ಭಾಗದಲ್ಲಿ ಅಪರೂಪದ ವ್ಯಕ್ತಿಯಾಗಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದಾರೆ,ಇವರು ಕಳೆದ ವರ್ಷ ನಡೆದ ಗಡಿ ಭದ್ರತಾ ಪಡೆಯ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ನೇಮಕವಾಗುತ್ತಾರೆ.
ಆದರೆ ದೂರದ ಜಾರ್ಖಂಡ್ ಗೆ ಹೋಗಬೇಕಾಗುತ್ತದೆ ಆದರೆ ಭಾಷೆ ಸಮಸ್ಯೆ,ದೂರದ ಪ್ರಯಾಣ ತುಂಬಾ ಸಮಸ್ಯೆ ಒದಗಿಬಂದಾಗ ಎನೇ ಆಗಲಿ ನಾನು ಹೊಗಲೇಬೇಕು ಎಂಬ ಹಠದೊಂದಿಗೆ ಇವರು ಜಾರ್ಖಂಡ್ ನಲ್ಲಿ ಒಂಭತ್ತು ತಿಂಗಳ ಕಠಿಣ ತರಬೇತಿ ಪಡೆದು ಯಶಸ್ವಿಯಾಗಿ ಎಲ್ಲರೂ ಇಷ್ಟಪಡುವ ರೀತಿಯಲ್ಲಿ ಅತ್ಯುತ್ತಮ ತರಬೇತಿ ಪಡೆದು ಕೊಂಡು ಸ್ವ ಗಾಮ ನಾಗಲದಿನ್ನಿಗೆ ಆಗಿಮಿಸಿದಾಗ ಗೋಪಾಲ ರವರ ತಂದೆ ಹನುಮಂತಪ್ಪ ನವರು ಮಗನ ದೇಶ ಪ್ರೇಮದ ಹುದ್ದೆಗೆ ಆಯ್ಕೆಯಾಗಿದ್ದಕ್ಕೆ ಖುಷಿಯಿಂದ ಅಪಾರ ಬಂಧುಬಳಗ,ಗುರುಗಳಿಗೆ, ಸ್ನೇಹಿರಿಗೆ ಅಭಿನಂದನಾ ಸಮಾರಂಭ ನಡೆಸಿ ಔತಣಕೂಟ ಏರ್ಪಡಿಸಿದ್ದರು.
ಈ ಸಭೆಯಲ್ಲಿ ನೂರಾರು ಜನರು ಭಾಗಿಯಾಗಿ ಶುಭಾಶಯಗಳು ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ