ಪೋಸ್ಟ್‌ಗಳು

DAVANAGERE NEWS ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎಟಿಎಂನಲ್ಲಿ ಹಣ ಹಾಕುವವರು ಎಚ್ಚರ ವಹಿಸಿ!

ಇಮೇಜ್
ದಾವಣಗೆರೆ:ಎಟಿಎಂನ ಡೆಪಾಸಿಟ್ ಮೆಷಿನ್‌ನಲ್ಲಿ ಹಣ ಇಟ್ಟು ಡೆಪಾಸಿಟ್ ಬಟನ್ ಒತ್ತಲು ಮರೆತ ಕಾರಣ ೫೨ ಸಾವಿರ ರೂ.ಗಳನ್ನು ಕಳೆದುಕೊಂಡ ಘಟನೆ ನಗರದ ರಿಲಯನ್ಸ್ ಮಾರ್ಟ್ ಬಳಿ ನಡೆದಿದೆ. ವಿಜಯ ಎಂಬುವವರು ಹಣ ಕಳೆದುಕೊಂಡಿದ್ದಾರೆ. ತಮ್ಮ ಅಂಗಡಿ ಸಹಾಯಕ ರಾಘವೇಂದ್ರ ಜೊತೆ ಎಟಿಎಂ ಡೆಪಾಸಿಟರ್ ಮೂಲಕ ಹಣ ಹಾಕಲು ಐಸಿಐಸಿಐಸಿಐ ಬ್ಯಾಂಕ್‌ಗೆ ತೆರಳಿದ್ದಾರೆ. ಡೆಪಾಸಿಟ್ ಬಾಕ್ಸ್ನಲ್ಲಿ ಹಣ ಇರಿಸಿ, ಡೆಪಾಸಿಟ್ ಬಟನ್ ಒತ್ತುವುದನ್ನು ಮರೆತು, ಮನೆಗೆ ಹೋಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಚಾಲಾಕಿ, ಡೆಪಾಸಿಟರ್‌ನಲ್ಲಿ ಇದ್ದ ಹಣ ತೆಗೆದುಕೊಂಡು ಮೆಲ್ಲಗೆ ಅಲ್ಲಿಂದ ಕಾಲು ಕಿತ್ತಿದ್ದಾನೆ. ಈ ಕುರಿತು ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣ ಕದಿಯುವ ದೃಶ್ಯ, ಕದ್ದಾತನ ಫೋಟೊ ಎಲ್ಲವೂ ಲಭ್ಯ ಇದ್ದರೂ ಪೊಲೀಸರು ಕಳ್ಳನನ್ನು ಹುಡುಕಲು ಯಶ ಕಂಡಿಲ್ಲ! ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ಒಮ್ಮೆ ನೋಡಿ.  

ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು ಜಯ ಕರ್ನಾಟಕ ಸಂಘಟನೆ ವತಿಯಿಂದ ಮನವಿ

ಇಮೇಜ್
ದಾವಣಗೆರೆ:ಹಲವು ವರ್ಷಗಳಿಂದ ಹರಿಹರ ತಾಲೂಕು  ಹರಿಹರದಿಂದ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಮಾಕನೂರು ಕ್ರಾಸ್ ವಡೇರಾಯನಹಳ್ಳಿ ಹುಲಿಕಟ್ಟಿ ನದಿ ಹರಳಹಳ್ಳಿ ಐರಣಿ. ಹಿರೇಬಿದರಿ ಗ್ರಾಮಗಳ ಮಾರ್ಗಕ್ಕೆ  ಕಡಿಮೆ ಬಸ್ ಸಂಚಾರ ಇದ್ದು ಈ ಭಾಗದಿಂದ ದಿನನಿತ್ಯ ಪ್ರಯಾಣಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು ಪ್ರತಿದಿನ ಈ ಗ್ರಾಮದಿಂದ ಹರಿಹರಕ್ಕೆ ವಿದ್ಯಾಭ್ಯಾಸಕ್ಕೆಂದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪ್ರತಿದಿನ ಹಳ್ಳಿಗಳಿಂದ ನಗರಕ್ಕೆ ಬರುವುದು  ಹೆಚ್ಚು ಇದ್ದು ಈ ಕೂಡಲೇ ಈ ಭಾಗದ ಶಾಲಾ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೂ ಸಾರ್ವಜನಿಕರಿಗೂ ಕೂಲಿ ಕೆಲಸಕ್ಕೆ ಬರುವವರಿಗೆ ನೌಕರಿಗೆ ಸರ್ಕಾರಿ/ ಖಾಸಗಿ ನೌಕರರಿಗೆ ಹೆಚ್ಚಿನ  ಬಸ್ಸಿನ ಸೌಲಭ್ಯ ಕಲ್ಪಿಸಿದಲ್ಲಿ  ಅನುಕುಲಕರವಾಗುತ್ತದೆ  ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಇಂದು ಹರಿಹರ ಘಟಕದಲ್ಲಿ  ಮನವರಿಕೆ ಮಾಡಿದರು   ಒಂದು ವಾರದೊಳಗಾಗಿ ನಮ್ಮ ಮನವಿಯನ್ನು ಪುರಸ್ಕರಿಸಿ ಈಡೇರಿಸಬೇಕು ಎಂದು ಒತ್ತಾಯಿಸಿದರು ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿರುದ್ಧ ಹಾಗು ರಾಜ್ಯ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ  ಮಾಡಲಾಗುವುದು ಎಂದು  ಜಯ ಕರ್ನಾಟಕ ಸಂಘಟನೆ ವತಿಯಿಂದ ಎಚ್ಚರಿಸಲಾಯಿತು ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲ್ಲುಕು  ಅಧ್ಯಕ್ಷರಾದ ಎಸ್  ಗೋವಿಂದ್ ತಾಲೂಕು ಖಜಾಂ

ಕಬ್ಬೂರು ಈಗ ಹಿಂದುಳಿದ ವರ್ಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರು

ಇಮೇಜ್
  ಬೆಂಗಳೂರು: ಕರ್ನಾಟಕ ರಾಜ್ಯ   ಹಿಂದುಳಿದ ವರ್ಗಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾಗಿ ದಾವಣಗೆರೆಯ ಮಲ್ಲಿಕಾರ್ಜುನ್ ಕಬ್ಬೂರು ಹಾಗೂ ಕಾರ್ಯಾಧ್ಯಕ್ಷರಾಗಿ ಬೆಳಗಾವಿಯ ರಾಜು ನದಾಫ್ ಅವಿರೋಧ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ವರ್ತಾ ಇಲಾಖೆಯ ಸಭಾಂಗಣದಲ್ಲಿ ಬುಧವಾರ ನಡೆದ ಹಿಂದುಳಿದ ವರ್ಗಗಳ ಜಿಲ್ಲಾ ಮತ್ತು ಪ್ರಾದೇಶಿಕ  ಪತ್ರಿಕೆ ಸಂಪಾದಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಮನಗರದ ಮತ್ತಿಕೆರೆ ಜಯರಾಮ್  ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಡ್ಯದ ಶಿವಪ್ರಕಾಶ್ ಎಂ.ಎಸ್. ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ಕಬ್ಬೂರು ಮಾತನಾಡಿ, ಅಧ್ಯಕ್ಷ ಹುದ್ದೆ ಪದವಿಯಲ್ಲ,  ಇದೊಂದು ಜವಾಬ್ದಾರಿಯಾಗಿದೆ. ಹಿಂದುಳಿದ ವರ್ಗದ ಪತ್ರಿಕೆಗಳ ಏಳಿಗೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಕ್ಕಾಗಿ ಸಂಘ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು. ಗೌರವಾಧ್ಯಕ್ಷ ಮತ್ತಿಕೆರೆ ಜಯರಾಮ್ ಮಾತನಾಡಿ, ಮುದ್ರಣ ಮಾಧ್ಯಮ ಸಂಕಷ್ಟ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಹಿಂದುಳಿದ ವರ್ಗದ ಸಂಪಾದಕರು ಒಂದಾಗಿ ಧ್ವನಿ ಎತ್ತಿದಾಗ ಮಾತ್ರ ಸರ್ಕಾರದ ಸಹಕಾರ ದೊರೆಯುತ್ತದೆ ಎಂದರು. ಕಲಬುರುಗಿಯ ಸಿದ್ದಣ್ಣ ಮಾಲಗಾರ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಶಿವಮೊಗ್ಗದಿಂದ ಪದ್ಮನಾಭ, ರೋಹಿತ್ ಎಸ್.ಆರ್., ಮಂಜುನಾಥ್, ಬಾಗಲಕೋಟೆ ಮುರುಗೇಶ್ ಅಳಗವಾಡಿ, ವಿಜಯಪುರದ ಅವಿನಾಶ ಬಿದರಿ, ರಾಮನಗರದ ಡಿ.ಎಂ. ಮಂಜುನಾಥ್, ಮಂಡ

ದಾವಣಗೆರೆ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಕರ್ತವ್ಯಲೋಪ ಸುನಿತಾ ಸಿ.‌ಅಮಾನತು

ಇಮೇಜ್
ದಾವಣಗೆರೆ: ಮಹಾನಗರ ಪಾಲಿಕೆ‌ ಕರ ವಸೂಲಿಗಾರರಾದ ಶ್ರೀಮತಿ ಸುನಿತಾ ಸಿ.‌ಅವರನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಉದ್ಯಾನವನಕ್ಕೆ ಮೀಸಲಿಟ್ಟ‌ ಜಾಗವನ್ನು ಅಕ್ರಮವಾಗಿ ಉಪ ಆಸ್ತಿ ನೀಡಿ ಖಾತಾ ಉತಾರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿರುವ ಕಾರಣ ಇವರನ್ನು ಅಮಾನತು ಮಾಡಲಾಗಿದೆ. ಶ್ರೀಮತಿ, ಸುನಿತಾ, ಸಿ ಇವರು ಡೋರ್ ನಂ 1882/81ಎ ರ ಅಳತ: 115 115 ಅಡಿಗಳ ಸ್ವತ್ತು ಡಿ.ಎಲ್. ರಾಮಚಂದ್ರಪ್ಪ ಬಿನ್ ಧರ್ಮಪ್ಪನವರ ಹೆಸರಿಗೆ ಎಂ.ಎ.ಆರ್-19 ಪುಸ್ತಕದ ಪುಟ ಸಂಖ್ಯೆ:20 ರಲ್ಲಿ ಮೇಲಾಧಿಕಾರಿಗಳ ಆದೇಶವಿಲ್ಲದ ಹಾಗೂ ಯಾವುದೇ ಅಧಿಕೃತ ಷರಾ ಇಲ್ಲದೇ ಕ್ರಮ ಸಂಖ್ಯೆ:7339 ಕ ಉಪ ಸಂಖ್ಯೆ:7339ಎ, 1882/81ವಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದನ್ನು ಯಾವುದೇ ಮೂಲ ದಾಖಲೆಗಳನ್ನು ಕುಲಂಕುಷವಾಗಿ ಪರಿಶೀಲಿಸದೇ ದಿನಾಂಕ:11-08-2022 ರಂದು ನಮೂನೆ-3(ಖಾತಾ ಎಕ್ಸ್ ಟ್ರ್ಯಾಕ್ ನೀಡಿದ್ದರು. ಸದರಿ ಖಾತಾ ಎಕ್ಸ್ ಟ್ರ್ಯಾಕ್ ಆಧಾರದ ಮೇಲೆ ಶ್ರೀಮತಿ, ಸುಧಾ, ಬಿ ಕೋಂ ಲಕ್ಷ್ಮೀಪತಿ ಆರ್ ಎಲ್ ಹಾಗೂ ಶ್ರೀಮತಿ, ಪೂಜಾ ಟಿ ಕೋಂ ಶಿವಪ್ರಕಾಶ್ ಆರ್ ಇವರುಗಳು ಸಬ್ ರಜಿಸ್ಟಾರ ಕಛೇರಿಯಲ್ಲಿ ದಿನಾಂಕ:15-08-2022 ರಂದು ದಾನ ಪತ್ರದ ಆಧಾರದ ಮೇಲೆ ನೋಂದಾವಣೆ ಮಾಡಿಸಿಕೊಂಡು ದಿನಾಂಕ-12-10-2022 ರಂದು ಖಾತಾ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ವಿಷಯವನ್ನು ತಿಳಿದ ವಾರ್ಡ ನಂಬರ್-20 ರ ನಗರ ಸೇವಕರು ದಿನಾಂಕ:30-11-2022 ರಂದು ಆಯುಕ್ತರಿಗೆ ದೂರಿನ