ದಾವಣಗೆರೆ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಕರ್ತವ್ಯಲೋಪ ಸುನಿತಾ ಸಿ.‌ಅಮಾನತು



ದಾವಣಗೆರೆ: ಮಹಾನಗರ ಪಾಲಿಕೆ‌ ಕರ ವಸೂಲಿಗಾರರಾದ ಶ್ರೀಮತಿ ಸುನಿತಾ ಸಿ.‌ಅವರನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

ಉದ್ಯಾನವನಕ್ಕೆ ಮೀಸಲಿಟ್ಟ‌ ಜಾಗವನ್ನು ಅಕ್ರಮವಾಗಿ ಉಪ ಆಸ್ತಿ ನೀಡಿ ಖಾತಾ ಉತಾರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿರುವ ಕಾರಣ ಇವರನ್ನು ಅಮಾನತು ಮಾಡಲಾಗಿದೆ.

ಶ್ರೀಮತಿ, ಸುನಿತಾ, ಸಿ ಇವರು ಡೋರ್ ನಂ 1882/81ಎ ರ ಅಳತ: 115 115 ಅಡಿಗಳ ಸ್ವತ್ತು ಡಿ.ಎಲ್. ರಾಮಚಂದ್ರಪ್ಪ ಬಿನ್ ಧರ್ಮಪ್ಪನವರ ಹೆಸರಿಗೆ ಎಂ.ಎ.ಆರ್-19 ಪುಸ್ತಕದ ಪುಟ ಸಂಖ್ಯೆ:20 ರಲ್ಲಿ ಮೇಲಾಧಿಕಾರಿಗಳ ಆದೇಶವಿಲ್ಲದ ಹಾಗೂ ಯಾವುದೇ ಅಧಿಕೃತ ಷರಾ ಇಲ್ಲದೇ ಕ್ರಮ ಸಂಖ್ಯೆ:7339 ಕ ಉಪ ಸಂಖ್ಯೆ:7339ಎ, 1882/81ವಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದನ್ನು ಯಾವುದೇ ಮೂಲ ದಾಖಲೆಗಳನ್ನು ಕುಲಂಕುಷವಾಗಿ ಪರಿಶೀಲಿಸದೇ ದಿನಾಂಕ:11-08-2022 ರಂದು ನಮೂನೆ-3(ಖಾತಾ ಎಕ್ಸ್ ಟ್ರ್ಯಾಕ್ ನೀಡಿದ್ದರು.

ಸದರಿ ಖಾತಾ ಎಕ್ಸ್ ಟ್ರ್ಯಾಕ್ ಆಧಾರದ ಮೇಲೆ ಶ್ರೀಮತಿ, ಸುಧಾ, ಬಿ ಕೋಂ ಲಕ್ಷ್ಮೀಪತಿ ಆರ್ ಎಲ್ ಹಾಗೂ ಶ್ರೀಮತಿ, ಪೂಜಾ ಟಿ ಕೋಂ ಶಿವಪ್ರಕಾಶ್ ಆರ್ ಇವರುಗಳು ಸಬ್ ರಜಿಸ್ಟಾರ ಕಛೇರಿಯಲ್ಲಿ ದಿನಾಂಕ:15-08-2022 ರಂದು ದಾನ ಪತ್ರದ ಆಧಾರದ ಮೇಲೆ ನೋಂದಾವಣೆ ಮಾಡಿಸಿಕೊಂಡು ದಿನಾಂಕ-12-10-2022 ರಂದು ಖಾತಾ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸಿದ್ದರು.

ಈ ವಿಷಯವನ್ನು ತಿಳಿದ ವಾರ್ಡ ನಂಬರ್-20 ರ ನಗರ ಸೇವಕರು ದಿನಾಂಕ:30-11-2022 ರಂದು ಆಯುಕ್ತರಿಗೆ ದೂರಿನ ಮೂಲಕ ಅನಕೊಂಡ ಗ್ರಾಮದ ರಿ.ಸ.ನಂ. 51 ರ ಪ್ರದೇಶದಲ್ಲಿನ ಉದ್ಯಾನವನ ಜಾಗವನ್ನು ಖಾಸಗಿ ವ್ಯಕ್ತಿಗಳು ಪವರ್ ಆಫ್ ಅಟಾರ್ನಿ ಮೂಲಕ ನೋಂದಣಿ ಮಾಡಿಕೊಂಡಿರುತ್ತಾರೆ. ಸದರಿ ಸ್ವತ್ತನ್ನು ಯಾವುದೇ ಕಾರಣಕ್ಕೂ ಖಾತೆ ಮಾಡಬಾರದೆಂದು ದೂರನ್ನು ಸಲ್ಲಿಸಿದ್ದರು.

ಸದರಿ ವಿಷಯವಾಗಿ ತನಿಖೆಮಾಡಿ ವರದಿ ನೀಡುವಂತೆ ಉಪ ಆಯುಕ್ತರು(ಕಂದಾಯ) ಹಾಗೂ ಎಸ್ಟೇಟ್‌ ಆಫೀಸರ್‌ ಇವರಿಗೆ ಆದೇಶಿಸಲಾಗಿತ್ತು. ಅದರಂತೆ ಸದರಿ ಅಧಿಕಾರಿಗಳು ತನಿಖಾ ವರದಿಯನ್ನು ಸಲ್ಲಿಸಿದ್ದು, ಸುನಿತಾ ಅವರು ಕರ್ತವ್ಯ ಲೋಪ‌ಮಾಡಿರುವುದಾಗಿ ಕಂಡು ಬಂದಿದೆ. ಅಮಾನತ್ತು ಮಾಡಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ