ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ: ಸಂಸದರಿಂದ ಸಲಹೆ
ಕೊಪ್ಪಳ:ರಾಷ್ಟ್ರೀಯ ಹೆದ್ದಾರಿ 64ರಲ್ಲಿನ ತಳಕಲ್ ಬಳಿ ಅಂಡರ ಪಾಸ್ ನಿರ್ಮಿಸಲು ಹಾಗೂ ಕೂಡಲೇ ರಸ್ತೆ ವಿಭಜಕ ತೆರವುಗೊಳಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಸಂಸದರಾದ ಕರಡಿ ಸಂಗಣ್ಣ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜುಲೈ 28ರಂದು ನಡೆದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್.ಹೆಚ್.ಎ.ಐದ ಸಭೆಯಲ್ಲಿ ಅವರು ಮಾತನಾಡಿದರು.
ಹೊಸಪೇಟೆ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗದಗ-ಕೊಪ್ಪಳ ಮಧ್ಯೆದ ಭಾಗದಲ್ಲಿ ರಸ್ತೆ ವಿಭಜಕ ಡಿವೈಡರ್ ಮಾಡಲು ಸಂಸದರು ಸೂಚಿಸಿದರು.
ಕೊಪ್ಪಳ ತಾಲೂಕಿನ ಮಂಗಳಾಪುರ, ಬಹದ್ದೂರ ಬಂಡಿ ಮತ್ತು ಕೋಳೂರು ಬಳಿ ಸಹ ಅಂಡರ್ ಪಾಸ್ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು,ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ,ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕುಕನೂರು ತಹಶೀಲ್ದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ಪಿಡಿ ಹಾಗೂ ಎಂಜಿನೀಯರುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ