ಗಂಡಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ನವುಲಮ್ಮ ಉಪಾಧ್ಯಕ್ಷರಾಗಿ ಬಸವರಾಜ್ ಆಯ್ಕೆ

ಗುಡೇಕೋಟೆ : ಗುಡೇಕೋಟೆ ಹೋಬಳಿ ಗಂಡಬೊಮ್ಮನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ನವುಲಮ್ಮರುದ್ರಮುನಿ ಹಾಗೂ ಉಪಾಧ್ಯಕ್ಷರಾಗಿ ಆರ್ ಬಸವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಕೂಡ್ಲಿಗಿ ಜಿಪಂ ಉಪವಿಭಾಗದ ಎಇಇ ಮಲ್ಲಿಕಾರ್ಜುನ್ ಘೋಷಿಸಿದರು.

ನಿನ್ನೆ ಬೆಳಿಗ್ಗೆ 10:30 ಯಿಂದ 12:00 ಅವಧಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 17 ಸದಸ್ಯರ ಬಲಾಬಲ ಹೊಂದಿರುವ ಗಂಡ ಬೊಮ್ಮನಹಳ್ಳಿ ಪಂಚಾಯತಿಯ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾತಿಯಲ್ಲಿ ನವಲಮ್ಮ ರುದ್ರಮನಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿಯಲ್ಲಿ ಆರ್ ಬಸವರಾಜ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಚುನಾವಣೆ ಅಧಿಕಾರಿಗಳು ಘೋಷಿಸಿದರು. ಒಟ್ಟು 17 ಸದಸ್ಯರಲ್ಲಿ 15 ಸದಸ್ಯರು ಹಾಜರಿದ್ದು ಎರಡು ಸದಸ್ಯರು ಗೈರಾಗಿದ್ದಾರೆಂದು ತಿಳಿದಿದೆ.

ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಮುಖಂಡರ,ಹಿರಿಯರ ಸಹಕಾರದಿಂದ ಇಂದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿರುವಾ ಇವರಿಗೆ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿ ನಮ್ಮ ಗಂಡಬೋಮ್ಮನಹಳ್ಳಿ ಗ್ರಾಪಂ,ಯನ್ನು ಮಾದರಿ ಗ್ರಾಪಂ,ಯಾಗಿ ಮಾಡುವಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಜೋಡೆತ್ತುಗಳಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಿ ಎಂದರು. 

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಎಲ್ಲಾ ಸದಸ್ಯರ ಸಹಕಾರ ಮತ್ತು ಬೆಂಬಲದಿಂದ ಉತ್ತಮ ಆಡಳಿತವನ್ನು ನೀಡಲಿ ಎಂದು ಶುಭ ಹಾರೈಸಿದರು.ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಗುಡೇಕೋಟೆ ಪೋಲೀಸ್ ಠಾಣೆಯ ಪಿಎಸ್ಐ ಮಾಲೀಕ್ ಸಾಹೇಬ್ ಕಲಾರಿ, ಹಾಗೂ ಸಿಬ್ಬಂದಿ ವರ್ಗದವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿ.ರಾಮಕೃಷ್ಣಪ್ಪ, ಸೇರಿದಂತೆ ಆನೇಕ ರಾಜಕೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ