ಮಕ್ಕಳಿಗೆ ಜೋಳ ರಾಗಿ ನೀಡಲು ನಕಾರ ಸಲ್ಲ- ಕೇಂದ್ರದ ನಡೆಗೆ ಎಐಡಿಎಸ್ಒ ಖಂಡನೆ

 

ಬಳ್ಳಾರಿ:ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯವನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯ ಮೇರೆಗೆ ಕರ್ನಾಟಕ ಸರ್ಕಾರವು ರಾಜ್ಯದ ಮಕ್ಕಳಿಗೆ ರಾಗಿ ಮತ್ತು ಜೋಳದ ಆಹಾರವನ್ನು ಒದಗಿಸಲು ನಿರ್ಧರಿಸಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಹಾರ ಸರಬರಾಜು ನಿಗಮವು ತಿರಸ್ಕರಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸುತ್ತದೆ. ಪ್ರಸ್ತಾಪಿತ ರಾಗಿ ಮತ್ತು ಜೋಳವನ್ನು ನೀಡದೆ ಅಕ್ಕಿಯ ಪೂರೈಕೆಯನ್ನೇ ಮುಂದುವರಿಸಲಾಗುತ್ತಿದೆ. ಈಗಾಗಲೇ ದೇಶವ್ಯಾಪಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿವೆ ಮತ್ತು ಜಾಗತಿಕ ಹಸಿವಿನ ಸೂಚಂಕದಲ್ಲಿ ಭಾರತದ ಪರಿಸ್ಥಿತಿಯು ಅತ್ಯಂತ ಗಂಭೀರ ವಾಗಿದ್ದು 107ನೇ ಸ್ಥಾನದಲ್ಲಿದೆ.

ಪರಿಸ್ಥಿತಿಯು ಹೀಗಿರುವಾಗ ಸಿರಿಧಾನ್ಯಗಳ ಪೂರೈಕೆ ಮಕ್ಕಳ ಪೌಷ್ಟಿಕತೆ ವೃದ್ಧಿಗೆ ಸಹಕಾರಿಯಾಗುತ್ತದೆ. ಪ್ರಾದೇಶಿಕ ಆಹಾರ ಪದ್ಧತಿಯು ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಲಕ್ಷಾಂತರ ಮಕ್ಕಳು ತಮ್ಮ ದೈನಂದಿನ ಪೌಷ್ಟಿಕಾಂಶಕ್ಕಾಗಿ ಬಿಸಿಯೂಟವನ್ನು ಅವಲಂಬಿಸಿದ್ದಾರೆ. ಇಂತಹ ಗಂಭೀರ ವಿಷಯದಲ್ಲಿ ಕೇಂದ್ರ ಸರ್ಕಾರವು ಯಾವುದೇ ರೀತಿಯ ಕ್ಷುಲ್ಲಕ ರಾಜಕೀಯಕ್ಕೆ ಅವಕಾಶ ನೀಡದೆ ಅವಶ್ಯಕತೆಗೆ ತಕ್ಕಂತೆ ಧಾನ್ಯಗಳನ್ನು ಪೂರೈಸಬೇಕೆಂದು ಎಐಡಿಎಸ್‌ಓ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ